IAS Transfer : ಐಎಎಸ್ ಅಧಿಕಾರಿಗಳ ವರ್ಗಾವಣೆ, ಮೈಸೂರು ಜಿಪಂ ಸಿಇಒ ಬದಲು

Published : Feb 21, 2022, 11:43 PM ISTUpdated : Feb 21, 2022, 11:45 PM IST
IAS Transfer : ಐಎಎಸ್ ಅಧಿಕಾರಿಗಳ ವರ್ಗಾವಣೆ, ಮೈಸೂರು ಜಿಪಂ ಸಿಇಒ ಬದಲು

ಸಾರಾಂಶ

* ಐಎಎಸ್ ಅಧಿಕಾರಿಗಳ ವರ್ಗಾವಣೆ * ಮೈಸೂರು  ಜಿಲ್ಲಾ ಪಂಚಾಯಿತಿ ಸಿಇಒ ಬದಲು * ಪೂರ್ಣಿಮಾ ಬಿ  ಆರ್ ಅವರಿಗೆ ಪ್ರಾಚ್ಯ ವಸ್ತು ಸಂಗ್ರಹಾಲಯ ಆಯುಕ್ತರ ಜವಾಬ್ದಾರಿ

ಬೆಂಗಳೂರು(ಫೆ. 21)  ಮೈಸೂರು (Mysuru)ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಯೋಗೇಶ್ ಅವರನ್ನು ಕೃಷಿ ಮಾರುಕಟ್ಟೆ ನಿರ್ದೇಶಕರನ್ನಾಗಿ ವರ್ಗಾವಣೆ (Transfer) ಮಾಡಲಾಗಿದೆ.  ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಸ್ಥಾನಕ್ಕೆ ಪೂರ್ಣಿಮಾ ಬಿ  ಆರ್ ಅವರನ್ನು ನೇಮಕ ಮಾಡಲಾಗಿದೆ.  ಪೂರ್ಣಿಮಾ ಅವರಿಗೆ ಪ್ರಾಚ್ಯ ವಸ್ತು ಸಂಗ್ರಹಾಲಯ ಆಯುಕ್ತರ ಜವಾಬ್ದಾರಿಯನ್ನು ವಹಿಸಲಾಗಿದೆ.

ವರ್ಗಾವಣೆಗೆ ತಡೆ:   ಐಪಿಎಸ್ ರವಿ ಡಿ ಚನ್ನಣ್ಣನವರ್ (Ravi D Channannavar) ಅವರನ್ನ ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆ ಮಾಡಿ ಹೊರಡಿಸಲಾಗಿದ್ದ ಆದೇಶಕ್ಕೆ ತಡೆ ನೀಡಲಾಗಿತ್ತು.

 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು ಇದರಲ್ಲಿ ರವಿ ಡಿ ಚನ್ನಣ್ಣನವರ್ ಸಹ ಇದ್ದರು. ಸಿಐಡಿಯಿಂದ ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆ ಮಾಡಲಾಗಿತ್ತು.

ಆದ್ರೆ, ಇದೀಗ  ಕರ್ನಾಟಕ ಸರ್ಕಾರ ಏಕಾಏಕಿ ರವಿ ಡಿ ಚನ್ನಣ್ಣನವರ್ ಅವರ ವರ್ಗಾವಣೆ ಆದೇಶನ್ನು ತಡೆಯಿಡಿಲಾಗಿದೆ ಎಂದು ಸುತ್ತೋಲೆ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರವಿ ರವಿ ಡಿ ಚನ್ನಣ್ಣನವರ್ ವರ್ಗಾವಣೆಗೆ ಸರ್ಕಾರ ಬ್ರೇಕ್ ಹಾಕಿತ್ತು.

Murder In Shivamogga: ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ, ಪ್ರಕ್ಷುಬ್ಧ ಪರಿಸ್ಥಿತಿ

ಶಿಕ್ಷಕರಿಗೆ ಸಂತಸದ ಸುದ್ದಿ ಕಳೆದ ಮೂರು ವರ್ಷಗಳಿಂದ ವರ್ಗಾವಣೆ(Transfer) ಅವಕಾಶ ವಂಚಿತ ಪದವಿಪೂರ್ವ ಕಾಲೇಜು ಉಪನ್ಯಾಸಕರ(PU Lecturers) ವರ್ಗಾವಣೆಗೆ ಅವಕಾಶ ಕಲ್ಪಿಸಲು ಸಿದ್ಧಪಡಿಸಿರುವ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (Teacher Transfer Control) ತಿದ್ದುಪಡಿ ವಿಧೇಯಕ 2021’ ಅನ್ನು ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿಲಾಗಿತ್ತು.  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಅವರು ಸದನದಲ್ಲಿ  ವಿದೇಯಕ ಮಂಡನೆ ಮಾಡಿದ್ದರು.

ವಿಧೇಯಕದಲ್ಲಿ ಪ್ರಮುಖವಾಗಿ ಪ್ರತಿ ವರ್ಷ ಶೇ.10ರಷ್ಟು ಪ್ರಮಾಣ ಮೀರದಂತೆ ಪಿಯು ಉಪನ್ಯಾಸಕರ ವರ್ಗಾವಣೆ ನಡೆಸಬೇಕು. ಆರಂಭಿಕ ನೇಮಕಾತಿ(Recruitment) ಅಥವಾ ಬಡ್ತಿಯನ್ನು(Promotion) ‘ಸಿ’ ವಲಯದ (ಗ್ರಾಮೀಣ ಭಾಗ) ಕಾಲೇಜುಗಳಿಗೆ ಮಾಡಬೇಕು. ಶಿಕ್ಷಕರ ವರ್ಗಾವಣೆ ಮಾದರಿಯಲ್ಲೇ ಅರ್ಜಿ ಆಹ್ವಾನಿಸಿ ಕೌನ್ಸೆಲಿಂಗ್‌(Counseling) ಮೂಲಕ ವರ್ಗಾವಣೆ ನಡೆಸಬೇಕು. ಸಿ ವಲಯದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸದ ಮತ್ತು ವಲಯ ಎ ನಲ್ಲಿ ನಿರಂತರ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಪ್ರತಿಯೊಬ್ಬ ಶಿಕ್ಷಕನನ್ನು ರಾಜ್ಯ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ವಲಯ ಸಿ ಅಥವಾ ಬಿಗೆ ವರ್ಗಾವಣೆ ಮಾಡಬೇಕು ಎಂದು ತಿಳಿಸಲಾಗಿತ್ತು.

 

 

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ