Murder In Shivamogga: ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ, ಪ್ರಕ್ಷುಬ್ಧ ಪರಿಸ್ಥಿತಿ

* ಶಿವಮೊಗ್ಗ ಸೀಗೆಹಟ್ಟಿ ಪ್ರದೇಶದಲ್ಲಿ ಕೊಲೆ
* ಮೆಗ್ಗಾನ್ ಆಸ್ಪತ್ರೆಯ ಬಳಿ ಬಿಗುವಿನ ವಾತಾವರಣ
* ಎಮರ್ಜೆನ್ಸಿ ವಾರ್ಡ್ ನ ಗ್ಲಾಸ್ ಪುಡಿ ಪುಡಿ~
* ಚಾಕುವಿನಿಂದ ಇರಿತಕ್ಕೊಳಗಾದ ಹರ್ಷನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆ ತರಲಾಗಿತ್ತು

24-year-old brutally killed by gang in Shivamogga  Restless situation mah

ಶಿವಮೊಗ್ಗ(ಫೆ. 21)  ಇಲ್ಲಿನ (Shivamogga) ಸೀಗೇಹಟ್ಟಿಯಲ್ಲಿ ಭಾನುವಾರ ರಾತ್ರಿ  ಯುವಕರ ಗುಂಪೊಂದು ಅನ್ಯಕೋಮಿನ ಯುವಕನನ್ನು ಬರ್ಬರವಾಗಿ (Murder)  ಹತ್ಯೆ ಮಾಡಿದೆ.  ಪರಿಣಾಮ ಕಲ್ಲು ತೂರಾಟ ನಡೆದಿದ್ದು ಪೊಲೀಸರು ಹರಸಾಹಸ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. 

ಪೂರ್ವ ವಲಯದ ಐಜಿಪಿ ಸ್ಥಳಕ್ಕೆ ಬಂದಿದ್ದಾರೆ. ದುಷ್ಕರ್ಮಿಗಳು ವಾಹನಗಳಿಗೆ ಬೆಂಕಿ ಹಚ್ಚಿದ್ದು ಪೊಲೀಸರು ಮತ್ತು ಅಗ್ನಿ ಶಾಮಕ ದಳ ಪರಿಸ್ಥಿತಿಯನ್ನು ತಹಬದಿಗೆ ತಂದಿವೆ. ಅಕ್ಕ ಪಕ್ಕದ ಜಿಲ್ಲೆಗಳಿಂದಲೂ ಭದ್ರತಾ ಪಡೆಯನ್ನು ಕರೆಸಿಕೊಳ್ಳಲಾಗಿದೆ.

Suvarna FIR : ರಾಯಚೂರು, ಎಣ್ಣೆ ಹಾಕಲು ಹಣ ಕೊಡದ ತಂದೆಯನ್ನೇ ಕೊಂದ!

ಹರ್ಷ (24) ಮೃತ ಯುವಕ. ಕೆಲವು ತಿಂಗಳ ಹಿಂದೆ ಮತ್ತೊಂದು ಧರ್ಮವನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಹಾಕಿದ್ದ ಪ್ರಕರಣ ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈತ ಆಕ್ಟೀವ್ ಆಗಿದ್ದ.

ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಆತನಿಗೆ ಹಾಗಾಗ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಮೃತನ ಸಾವಿಗೆ ನ್ಯಾಯಕೊಡಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಮೆಗ್ಗಾನ್ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದವು.

ಶಿವಮೊಗ್ಗ ನಗರದ ಎಲ್ಲೆಡೆ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಪೂರ್ವವಲಯ ವ್ಯಾಪ್ತಿಯ ಇತರೆ ಜಿಲ್ಲೆಗಳಿಂದ ರಾತ್ರಿಯೇ ಹೆಚ್ಚುವರಿ ಪೊಲೀಸ್ ಪಡೆ ಕರೆಸಲಾಗಿದೆ. ಅಧಿಕಾರಿ ವರ್ಗ ನಿರಂತರ ಶ್ರಮ ಪಡುತ್ತಲೇ ಇದೆ.

ತುಮಕೂರಲ್ಲಿ ಗಲಾಟೆ:  ಮುಸ್ಲಿಂ ಯುವಕರ ತಂಡ ಹೊಡೆದಾಟ ಮಾಡಿಕೊಂಡಿದೆ. ಮಚ್ಚು ಲಾಂಗುಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ  ಮೆಹಬೂಬ್ ಪಾಷಾ (34) ಎಂಬುವರಿಗೆ ಗಂಭೀರ ಗಾಯವಾಗಿದೆ ಇದಾಯತ್ ಎಂಬಾತ ಹಲ್ಲೆ ಮಾಡಿರುವ ಆರೋಪ ಬಂದಿದೆ.

ತುಮಕೂರು ನಗರದ ರಾಜೀವ್ ಗಾಂಧಿ ನಗರದಲ್ಲಿ ಘಟನೆ ನಡೆದಿದೆ. ಹಣದ ವ್ಯವಹಾರದಲ್ಲಿ ಮನಸ್ತಾಪ ಬಂದು ನಡೆದ ಗಲಾಟೆಯಾಗಿದೆ. ಗಾಯಾಳು ಮೆಹಬೂಬ್ ಪಾಷಾ ರನ್ನು  ಬೆಂಗಳೂರಿನ ನಿಮ್ಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಗೈ, ಹೊಟ್ಟೆ, ಮುಖಕ್ಕೆ ಮಚ್ಚಿನೇಟು ಬಿದ್ದಿದ್ದು ಸಾವು ಬದುಕಿನ ನಡುವೆ ಯುವಕ ಹೋರಾಟ ಮಾಡುತ್ತಿದ್ದಾನೆ. 

ಇಬ್ಬರ ಮೇಲೆ ಚಾಕು ಇರಿದು ಎಸ್ಕೇಪ್: ಕೌಟುಂಬಿಕ ಕಲಹ ಹಿನ್ನೆಲೆ ಕೋಲಾರ ಜಿಲ್ಲೆ ಬಂಗಾರಪೇಟೆಯ ಗೌತಮ ನಗರದಲ್ಲಿ ಚಾಕು ಇರಿದು ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ. ಚಾಕು ಇರಿತದಲ್ಲಿ ಓರ್ವ ವ್ಯಕ್ತಿ ಸಾವು ಕಂಡಿದ್ದು ಇನ್ನೊಬ್ಬನ ಪರಿಸ್ಥಿತಿ ಗಂಭೀರವಾಗಿದೆ.

ಸುರೇಶ್ ಎಂಬುವ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು.. ಬಾಬು(36) ಚಾಕು ಇರಿದು ಎಸ್ಕೇಪ್ ಆಗಿದ್ದಾನೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಬೀದರ್ ನಲ್ಲಿ ಅಪಘಾತ: ಎರಡು ಬೈಕ್ ಗಳ ಮಧ್ಯ ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ.  ಬೀದರ್ ನ ಮನ್ನಾಏಖ್ಖೇಳ್ಳಿ-ಮುತ್ತಂಗಿ ರಸ್ತೆಯ ನಿರ್ಣಾವಾಡಿ ಬಳಿ ಘಟನೆ ನಡೆದಿದೆ.  ಕುಡಿದ ಅಮಲಿನಲ್ಲಿ ವೇಗವಾಗಿ ಬೈಕ್ ಚಲಾಯಿಸಿದಕ್ಕೆ ಅಪಘಾತವಾಗಿದೆ. ಬಸಿಲಾಪೂರ ಗ್ರಾಮದ  ಸಂಜು 21, ನಿರ್ಣಾ ಗ್ರಾಮದ ಸಂತೋಷ(22) ಮೃತರು.

ಮೈಸೂರು:   ಆತ ಡಾಕ್ಟರ್ ಆಗ‌್ಬೇಕು ಅಂತಾ ನೂರಾರು ಕನಸು ಕಟ್ಟುಕೊಂಡಿದ್ದ. ಅದಕ್ಕಾಗಿ ಹುಟ್ಟೂರು ಬಿಟ್ಟು ಮೈಸೂರಿಗೆ ಬಂದಿದ್ದ. ತಾನಾಯ್ತು ತನ್ನ ಪಾಡಾಯ್ತು ಅಂತಿದ್ದ ಆ ಹುಡುಗ ಅನುಮಾನಸ್ಪದವಾಗಿ ಸಾವನ್ನಪಿದ್ದಾನೆ.

ಒಂದು ಕಡೆ ಹೆತ್ತ ತಾಯಿಯ ಕಣ್ಣೀರು, ಮತ್ತೊಂದು ಕಡೆ ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ. ಇದಕ್ಕೆ ಕಾರಣ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿದ್ದ ವಿದ್ಯಾರ್ಥಿಯ ಅನುಮಾನಸ್ಪದ ಸಾವು. ಹೌದು, 18 ವರ್ಷದ ಅಕ್ಷಯ್ ಎಂಬ ವಿದ್ಯಾರ್ಥಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ದ್ವಿತೀಯ ಪಿಯುಸಿ ಓದುತ್ತಿದ್ದ ಅಕ್ಷಯ್ ಮೈಸೂರಿನ ಸರಸ್ವತಿಪುರಂನ ಬಿಸಿಎಂ ಹಾಸ್ಟೆಲ್‌ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾನಾಯ್ತು ತನ್ನ ಪಾಡಾಯ್ತು ಅಂತಾ ಇದ್ದ ವಿದ್ಯಾರ್ಥಿ ಅಕ್ಷಯ್ ಯಾರ ತಂಟೆಗೂ ಹೋಗುತ್ತಿರಲಿಲ್ಲ. ಈಗಾಗಿ ಅಕ್ಷಯ್‌ನನ್ನು ಯಾರೋ ಕೊಲೆ ಮಾಡಿದ್ದಾರೆ ಅನ್ನೋದು ಅಕ್ಷಯ್ ಸಂಬಂಧಿಕರ ಆರೋಪ.

ಅಕ್ಷಯ್ ಮೂಲತಃ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದವರು. ಗ್ರಾಮದ ಮಹದೇವ್ ಹಾಗೂ ಭಾಗ್ಯ ದಂಪತಿಯ ಕಿರಿಯ ಮಗ. ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಆಗಿದ್ದ ಮಹದೇವ ಅವರಿಗೆ ಮೂವರು ಮಕ್ಕಳು ಅದರಲ್ಲಿ ಅಕ್ಷಯ್ ಕಿರಿಯವನು. ಅಕ್ಷಯ್‌ ವೈದ್ಯನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಅದಕ್ಕಾಗಿ ಕಷ್ಟಪಟ್ಟು ಓದುತ್ತಿದ್ದ. ಮೈಸೂರಿನಲ್ಲೇ  ಓದಬೇಕು ಅಂತಾ ಪಟ್ಟು ಹಿಡಿದು ಮೈಸೂರಿಗೆ ಬಂದಿದ್ದ. ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಕಾಲೇಜಿಗೆ ಸೇರಿಕೊಂಡಿದ್ದ. ಮೈಸೂರಿಗೂ ಊರಿಗೂ ಓಡಾಡಿಕೊಂಡಿದ್ದರೆ ಓದಿಗೆ ಹಿನ್ನೆಡೆಯಾಗುತ್ತದೆ ಅನ್ನೋ‌ ಕಾರಣಕ್ಕೆ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ. ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಕ್ಷಯ್ ಶವ ಪತ್ತೆಯಾಗಿದೆ. ಅಕ್ಷಯ್ ವಾಸ ಇದ್ದಿದ್ದೇ ಬೇರೆ ರೂಂನಲ್ಲಿ ಆತನ ಶವ ಸಿಕ್ಕಿರೋದು ಬೇರೆ ರೂಮ್‌ನಲ್ಲಿ ಅನ್ನೋದು ಅಕ್ಷಯ್ ಗ್ರಾಮಸ್ಥರ ಆರೋಪ. 

ಈ ಸಂಬಂಧ ಸರಸ್ವತಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಅಕ್ಷಯ್ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಇದೆಲ್ಲಾ ಏನೇ ಇರಲಿ ವೈದ್ಯನಾಗಬೇಕೆಂಬ ಮಹದಾಶೆಯೊಂದಿದ್ದ ಅಕ್ಷಯ್ ಬದುಕು ಈ ರೀತಿ ಅಂತ್ಯವಾಗಿದ್ದು ಮಾತ್ರ ದುರಂತ.

Latest Videos
Follow Us:
Download App:
  • android
  • ios