ಮೈಸೂರಿನ ನಿರ್ಗಮಿತ ಡಿಸಿ ಶರತ್‌ ದಿಢೀರ್‌ ಅಸ್ವಸ್ಥ: ಆಸ್ಪತ್ರೆಗೆ ದಾಖಲು

Suvarna News   | Asianet News
Published : Oct 19, 2020, 12:37 PM ISTUpdated : Oct 19, 2020, 01:28 PM IST
ಮೈಸೂರಿನ ನಿರ್ಗಮಿತ ಡಿಸಿ ಶರತ್‌ ದಿಢೀರ್‌ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಸಾರಾಂಶ

ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಶರತ್ ಬಿಗೆ ಅನಾರೋಗ್ಯ| ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು|  ಇಂದು ತಮ್ಮ ‌ನಿವಾಸದಲ್ಲಿ ಅಸ್ವಸ್ಥಗೊಂಡ ಶರತ್| ತಿಂಗಳು ಕಳೆಯುವುವದರೊಳಗೆ ಶರತ್ ಬಿ ಅವರನ್ನ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ| 

ಮೈಸೂರು(ಅ.19): ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಶರತ್ ಬಿ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ನಗರದ ತಮ್ಮ ‌ನಿವಾಸದಲ್ಲಿ ಶರತ್ ಅವರು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನ ಕುವೆಂಪು ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿಂಗಳು ಕಳೆಯುವುವದರೊಳಗೆ ರಾಜ್ಯ ಸರ್ಕಾರ ಶರತ್ ಬಿ ಅವರನ್ನ ವರ್ಗಾವಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶರತ್ ಮಾನಸಿಕ ಖಿ‌ನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ತಮ್ಮ ವರ್ಗಾವಣೆಯನ್ನ ಪ್ರಶ್ನಿಸಿ ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಶರತ್ ಬಿ ಸಿಎಟಿ ಮೊರೆ ಹೋಗಿದ್ದರು. ಅ. 23ಕ್ಕೆ ವಿಚಾರಣೆಯನ್ನ ಸಿಎಟಿ ಮುಂದೂಡಿದೆ. 

ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆ: 2 ಗಂಟೆಯಲ್ಲೇ ಆದೇಶ ವಾಪಸ್..!

ಶರತ್‌ ಬಿ ಅವರು ಇದಕ್ಕೂ ಮೊದಲು ಕಲಬುರಗಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ರಾಜ್ಯ ಸರ್ಕಾರ ಏಕಾಏಕಿ ಮೈಸೂರಿಗೆ ವರ್ಗಾವಣೆ ಮಾಡಿತ್ತು. ಅಭಿರಾಮ್ ಶಂಕರ್ ವರ್ಗಾವಣೆ ಬಳಿಕ ಮೈಸೂರು ಜಿಲ್ಲಾಧಿಕಾರಿಯಾಗಿ ಶರತ್ ಅವರನ್ನು ನೇಮಕ ಮಾಡಲಾಗಿತ್ತು. ಆಗಸ್ಟ್ 29 ರಂದು ಶರತ್ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಇದೀಗ ಒಂದೇ ತಿಂಗಳಲ್ಲಿ ಶರತ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಅವರಿಗೆ ಯಾವುದೇ ಜಾಗ ತೋರಿಸಿಲ್ಲ.

ಶರತ್‌ ವರ್ಗಾವಣೆ ಆದ ಬಳಿಕ ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಮೈಸೂರು ದರಸಾ ಹೊತ್ತಿನಲ್ಲೇ ರಾಜ್ಯ ಸರ್ಜಾರ ಶರತ್‌ ಅವರನ್ನ ದಿಢೀರ್‌ ಅಂತ ವರ್ಗಾವಣೆ ಮಾಡಿ ಹೊರಡಿಸಿತ್ತು.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC