ಬಿಜೆಪಿ ಶಾಸಕರೊಬ್ಬರಿಗೆ ಅನಾರೋಗ್ಯ: ಆಸ್ಪತ್ರೆ ದಾಖಲು

Suvarna News   | Asianet News
Published : Oct 19, 2020, 12:18 PM IST
ಬಿಜೆಪಿ ಶಾಸಕರೊಬ್ಬರಿಗೆ ಅನಾರೋಗ್ಯ: ಆಸ್ಪತ್ರೆ ದಾಖಲು

ಸಾರಾಂಶ

ಶಾಸಕ ಎಸ್.ಎ.ರಾಮದಾಸ್‌ಗೆ ಅನಾರೋಗ್ಯ| ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲು| ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರಾಮದಾಸ್‌| ಚಿಕಿತ್ಸೆಗೆ ಸ್ಪಂದಿಸುತ್ತಿರುವ ಶಾಸಕರು| 

ಮೈಸೂರು(ಅ.19): ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್‌ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು(ಸೋಮವಾರ) ಅವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. 

ಇಂದು ಬೆಳಿಗ್ಗೆಯಿಂದ ರಾಮದಾಸ್‌ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.  ಹೀಗಾಗಿ ತಕ್ಷಣ ರಾಮದಾಸ್‌ ಅವರನ್ನ ನಗರದ ಜಯದೇವ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

'ಕಾಂಗ್ರೆಸ್‌ ಸರ್ಕಾರದ ರಾಜ್ಯಗಳಲ್ಲೇಕೆ ಗಲಭೆ ಇಲ್ಲ..'?

ಮುಂಜಾಗ್ರತ ಕ್ರಮವಾಗಿ ವೈದ್ಯರು ಎಸ್.ಎ.ರಾಮದಾಸ್‌ ಅವರಿಗೆ ಕೋವಿಡ್ ಪರೀಕ್ಷೆಗೆ ಮಾಡಿಸಲು ಮುಂದಾಗಿದ್ದಾರೆ. ಎಸ್.ಎ.ರಾಮದಾಸ್‌ ಅವರು ಕಳೆದ ಎರಡು ದಿನಗಳಿಂದ ಹಿಂದಷ್ಟೇ ದಸರಾ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಮದಾಸ್‌ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬಗ್ಗೆ ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ