ಜಿಲ್ಲೆಯ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಅರಣ್ಯ ಇಲಾಖೆಯ ಭೂದೃಶ್ಯ ಯಾತ್ರೆ!

By Kannadaprabha News  |  First Published Feb 7, 2023, 9:14 AM IST

ಉತ್ತರ ಕನ್ನಡ ಜಿಲ್ಲೆ ಸೌಂದರ್ಯದ ಬೀಡು. ಇಲ್ಲಿಯ ಸೌಂದರ್ಯವನ್ನು ಸವಿಯುವವರಿಗೆ ಅರಣ್ಯ ಇಲಾಖೆಯು ಉಚಿತವಾಗಿ ವೇದಿಕೆ ಕಲ್ಪಿಸಲು ಮುಂದಾಗಿದೆ. ಹೌದು, ಜಿಲ್ಲೆಯ ನಿಸರ್ಗ ಸೌಂದರ್ಯವನ್ನು ಎಲ್ಲರಿಗೂ ಪರಿಚಯಿಸಿ, ಇಲ್ಲಿಯ ಪ್ರವಾಸೋದ್ಯಮವನ್ನು ಇನ್ನಷ್ಟುಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.


ಮಂಜುನಾಥ ಸಾಯೀಮನೆ

 ಶಿರಸಿ (ಫೆ.7) : ಉತ್ತರ ಕನ್ನಡ ಜಿಲ್ಲೆ ಸೌಂದರ್ಯದ ಬೀಡು. ಇಲ್ಲಿಯ ಸೌಂದರ್ಯವನ್ನು ಸವಿಯುವವರಿಗೆ ಅರಣ್ಯ ಇಲಾಖೆಯು ಉಚಿತವಾಗಿ ವೇದಿಕೆ ಕಲ್ಪಿಸಲು ಮುಂದಾಗಿದೆ. ಹೌದು, ಜಿಲ್ಲೆಯ ನಿಸರ್ಗ ಸೌಂದರ್ಯವನ್ನು ಎಲ್ಲರಿಗೂ ಪರಿಚಯಿಸಿ, ಇಲ್ಲಿಯ ಪ್ರವಾಸೋದ್ಯಮವನ್ನು ಇನ್ನಷ್ಟುಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.

Tap to resize

Latest Videos

‘ಭೂ ದೃಶ್ಯಯಾತ್ರೆ’ ಹೆಸರಿನ ಈ ವಿನೂತನ ಪ್ರಯತ್ನದಲ್ಲಿ ಆಸಕ್ತರನ್ನು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಇಲಾಖೆ ಕರೆದೊಯ್ಯುತ್ತಿದೆ. ಇದಕ್ಕಾಗಿ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳನ್ನು ಬಾಡಿಗೆಗೆ ಇಲಾಖೆ ಪಡೆದಿದ್ದು, ಯಾತ್ರೆಗೆ ಹೊರಟವರ ಖರ್ಚು ವೆಚ್ಚಗಳನ್ನು ಇಲಾಖೆಯೇ ಭರಿಸುತ್ತಿದೆ. ಸೋಮವಾರ ಮೊದಲ ತಂಡ ತೆರಳಿದೆ.

Education: ಖಾಸಗಿ ಶಾಲೆಗಳಿಂದ ಪಾಲಕರಿಗೆ ಶುಲ್ಕದ ಬರೆ!

ಎಲ್ಲೆಲ್ಲಿ ಪ್ರವಾಸ?:

ಜಿಲ್ಲೆಯ ಪ್ರಕೃತಿ ಸಾರುವ, ಮನಮೋಹಕ ದೃಶ್ಯಗಳಿಂದ ಕಣ್ಣಿಗೆ ಹಬ್ಬ ಉಂಟು ಮಾಡುವ ಸ್ಥಳಗಳನ್ನು ಭೂ ದೃಶ್ಯ ಯಾತ್ರೆಯ ಪಟ್ಟಿಯಲ್ಲಿಟ್ಟಿದೆ ಅರಣ್ಯ ಇಲಾಖೆ. ‘ಲೂಶಿಂಗ್ಟನ್‌ ಫಾಲ್ಸ್‌’ ಎಂದೇ ಖ್ಯಾತವಾಗಿರುವ ಉಂಚಳ್ಳಿ ಜಲಪಾತದ ಜಲಧಾರೆಯನ್ನು ಯಾತ್ರಾರ್ಥಿಗಳು ಸವಿಯಲಿದ್ದಾರೆ. ಅಲ್ಲಿಗೆ ಸಮೀಪದಲ್ಲೇ ಇರುವ ನಿಲ್ಕುಂದ ಬಳಿಯ ಭೀಮನ ಗುಡ್ಡ ಇನ್ನೊಂದು ಪ್ರವಾಸಿ ತಾಣವಾಗಿದೆ. ಸುಡು ಬಿಸಲಾದರೂ ಕರಾವಳಿ ಭಾಗದಿಂದ ಬೀಸುವ ಮಾರುತಗಳು, ಎದುರಿನಲ್ಲಿ ಕಣ್ಣಾಡಿಸಿದಷ್ಟೂಕಾಣಸಿಗುವ ಹಸಿರಿನ ರಾಶಿ, ಕರಾವಳಿಯ ಸುಂದರ ದೃಶ್ಯಗಳು, ಬೆಟ್ಟದ ಬುಡದಲ್ಲಿಯೇ ಇರುವ ಮೊರ್ಸೆ ಗ್ರಾಮದ ಸುಂದರ ದೃಶ್ಯಗಳನ್ನು ಈ ಯಾತ್ರೆಯಲ್ಲಿ ಪಾಲ್ಗೊಂಡವರು ಸವಿಯಲಿದ್ದಾರೆ.

ಸಂಜೆ ಸಿದ್ದಾಪುರದಲ್ಲಿ ವಾಸ್ತವ್ಯದ ಬಳಿಕ ಮಾರನೇ ದಿನ ಬೆಳಗ್ಗೆ ಗೇರುಸೊಪ್ಪದಿಂದ ದೊಡ್ಮನೆವರೆಗೆ ಪ್ರವಾಸಿಗರಿಗೆ ಅರಣ್ಯದಲ್ಲಿ ಟ್ರೆಕ್ಕಿಂಗ್‌ ಆಯೋಜನೆ ಮಾಡಲಾಗಿದೆ. ಕಾಡ ದುರ್ಗಮ ಹಾದಿಯಲ್ಲಿ ಸಂಚರಿಸುತ್ತಾ, ಹಸಿರು ಗಿಡಗಳ ಬಗ್ಗೆ ಮಾಹಿತಿ ಪಡೆಯುತ್ತಾ, ಪಕ್ಷಿಗಳ ಇಂಚರದೊಡನೆ ಮಂಗಳವಾರ ಮುಂಜಾನೆ ಈ ಟ್ರೆಕ್ಕಿಂಗ್‌ ನಡೆಯಲಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜೊತೆಯಲ್ಲಿ ಇದ್ದು ಅಗತ್ಯ ಮಾಹಿತಿ ನೀಡುತ್ತಿದ್ದಾರೆ. ಸೋಮವಾರದಿಂದ ಆರಂಭಗೊಂಡ ಮೊದಲ ಭೂ ದೃಶ್ಯ ಯಾತ್ರೆಯಲ್ಲಿ ಎರಡು ಬಸ್‌ಗಳ ಮೂಲಕ 70 ಜನರ ತಂಡ ಭಾಗಿಯಾಗಿದೆ.

ಈ ಕುರಿತಂತೆ ತಿಂಗಳುಗಳ ಹಿಂದಿನಿಂದಲೇ ತಯಾರಿ ನಡೆದಿದ್ದು, ವೈದ್ಯರು, ಕಾಲೇಜು ವಿದ್ಯಾರ್ಥಿಗಳು, ವಕೀಲರೂ ಸೇರಿದಂತೆ ಜನಸಾಮಾನ್ಯರನ್ನೂ ಈ ಯಾತ್ರೆಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳನ್ನು ಇನ್ನಷ್ಟುಜನಕ್ಕೆ ತಿಳಿಸಿ, ನಮ್ಮ ಅರಣ್ಯದ ಬಗ್ಗೆ ಜಾಗೃತಿ ಮೂಡಿಸಿ, ಸಂರಕ್ಷಣೆಯ ಕಲ್ಪನೆಯನ್ನು ಇಲಾಖೆ ಸಾರ್ವಜನಿಕರಲ್ಲಿ ಮೂಡಿಸುತ್ತಿದೆ.

Prajadhwani yatre: ಬಿಜೆಪಿಯಿಂದ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟ: ಬಿ.ಕೆ ಹರಿಪ್ರಸಾದ್‌ ವಾಗ್ದಾಳಿ

ಇಲಾಖೆಗೆ ಭೇಟಿ ನೀಡಿ:

ನೀವು ಕೂಡ ನಿಸರ್ಗ ಸವಿಯಲು ಹೋಗಬೇಕೆ? ಹಾಗಾದರೆ ಶಿರಸಿ ಅರಣ್ಯ ಇಲಾಖೆ ಕಚೇರಿಗೆ ಖುದ್ದಾಗಿ ಭೇಟಿ ನೀಡಬಹುದಾಗಿದೆ.

ಭೂ ದೃಶ್ಯಯಾತ್ರೆಯಲ್ಲಿ ಸೋಮವಾರ ಮೊದಲ ತಂಡ ತೆರಳಿದೆ. ಆಸಕ್ತರಿಗೆ ಮುಂದಿನ ದಿನಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತೇವೆ.

-ಅಜ್ಜಯ್ಯ ಜಿ.ಆರ್‌. ಡಿಎಫ್‌ಒ, ಶಿರಸಿ

click me!