ಕಾಂಗ್ರೆಸ್ ಸೇರ್ತಾರಾ ಜೆಡಿಎಸ್ ಶಾಸಕ ಪುಟ್ಟರಾಜು?

Kannadaprabha News   | Asianet News
Published : Jul 13, 2021, 02:02 PM ISTUpdated : Jul 13, 2021, 02:04 PM IST
ಕಾಂಗ್ರೆಸ್ ಸೇರ್ತಾರಾ ಜೆಡಿಎಸ್ ಶಾಸಕ ಪುಟ್ಟರಾಜು?

ಸಾರಾಂಶ

ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಬೇಬಿಬೆಟ್ಟದಲ್ಲಿ  ಗಣಿಗಾರಿಕಯಲ್ಲಿ ಜೆಡಿಎಸ್ ಪಕ್ಷದವರನ್ನೇ ಗುರಿಯಾಗಿಟ್ಟುಕೊಂಡು ಮಾತನಾಡುವುದು ತಪ್ಪು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿಯೂ ಸ್ಪಷ್ಟನೆ ನೀಡಿದ ಪುಟ್ಟರಾಜು

ಪಾಂಡವಪುರ (ಜು.13): ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಶಾಸಕ ಪುಟ್ಟರಾಜು ಹೇಳಿದರು. 

ಸೋಮವಾರ ಪಾಂಡವಪುರದಲ್ಲಿ ಮಾತನಾಡಿದ ಅವರು  ಬೇಬಿ ಬೆಟ್ಟದಲ್ಲಿ  ಗಣಿಗಾರಿಕಯಲ್ಲಿ ಜೆಡಿಎಸ್ ಪಕ್ಷದವರನ್ನೇ ಗುರಿಯಾಗಿಟ್ಟುಕೊಂಡು ಮಾತನಾಡುವುದು ಎಷ್ಟು ಸರಿ ಎಂದು  ಪ್ರಶ್ನೆ ಮಾಡಿದರು. 

ಶಾಸಕ ಸಿ ಎಸ್ ಪುಟ್ಟರಾಜು ಪುಟ್ಟ ಹೆಜ್ಜೆ ಇಡುವ ಮೂಲಕ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯೂ ಇದ್ದು, ಹೀಗೆ ಹೇಳಿರುವುದು ಸತ್ಯಕ್ಕೆ ದೂರ. ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ನಮ್ಮ ನಾಯಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಜೊತೆಯಲ್ಲೇ ರಾಜಕೀಯ ಮಾಡಿ ತೋರಿಸುತ್ತೇನೆ. ಕಾಂಗ್ರೆಸ್ ಸೇರುವ ಪ್ರಮೇಯ ನನಗಿಲ್ಲ ಎಂದರು. 

ಜೆಡಿಎಸ್‌ ತೊರೆಯದಂತೆ ಶಾಸಕ ಪುಟ್ಟರಾಜುಗೆ ಗೌಡರ ಮನವೊಲಿಕೆ

ಪ್ರಸ್ತುತ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮ ವರಿಷ್ಠರಾದ ಎಚ್.ಡಿ.ದೇವೇಗೌಡರು ನಮಗೆಲ್ಲಾ ಸೂಚನೆ ನಿಡಿದ್ದಾರೆ. ಆದ್ದರಿಂದ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ, ಜಿಲ್ಲೆಯ ಜೆಡಿಎಸ್ ಶಾಸಕರು ಒಗ್ಗಟ್ಟಾಗಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.

PREV
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ