ಭದ್ರಕೋಟೆಯಲ್ಲಿ ಗೆಲುವಿನ ಓಟಕ್ಕೆ JDS ಮಾಸ್ಟರ್ ಪ್ಲಾನ್

Published : Sep 10, 2019, 11:41 AM IST
ಭದ್ರಕೋಟೆಯಲ್ಲಿ ಗೆಲುವಿನ ಓಟಕ್ಕೆ JDS ಮಾಸ್ಟರ್ ಪ್ಲಾನ್

ಸಾರಾಂಶ

ಶಾಸಕರ ಅನರ್ಹತೆಯಿಂದ ಖಾಲಿಯಾದ ಕೆ ಆರ್ ಪೇಟೆ ಕ್ಷೇತ್ರಕ್ಕೆ ಉಪ ಚುನಾವಣೆ ಶೀಘ್ರದಲ್ಲೇ ನಡೆಯಲಿದ್ದು, ಜೆಡಿಎಸ್ ನಾಯಕರು ಮಾಸ್ಟರ್ ಮಾಡುತ್ತಿದ್ದಾರೆ. 

ಮಂಡ್ಯ [ಸೆ.10]: ಅನರ್ಹ ಶಾಸಕರ ತವರಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದೆ. ಮಂಡ್ಯದ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಸೆ.12ರಂದು ಬೃಹತ್ ಸಭೆ ನಡೆಸಲು ಜೆಡಿಎಸ್ ಮುಖಂಡರು ಸಜ್ಜಾಗಿದ್ದಾರೆ. 

ಕೆ ಆರ್ ಪೇಟೆ ಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ಬೃಹತ್ ಸಭೆ ನಡೆಯಲಿದ್ದು, ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ. 

ಕೆ ಆರ್ ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಅನರ್ಹತೆಯಿಂದ ಕ್ಷೇತ್ರ ತೆರವಾಗಿದ್ದು, ಶೀಘ್ರ ಇಲ್ಲಿ ಉಪ ಚುನಾವಣೆ ನಡೆಯಲಿದ್ದು, ಈ ಬಗ್ಗೆ ಚರ್ಚೆ ನಡೆಯಲಿದೆ. 

ಹೆಚಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜೆಡಿಎಸ್ ಭದ್ರಕೋಟೆ ಎಂದೇ ಕರೆಯಲಾಗುವ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಗೆಲುವಿನ ಓಟ ಮುಂದುವರಿಸಲು ನಾಯಕರು ಸಜ್ಜಾಗುತ್ತಿದ್ದು, ಗೆಲುವು ಪಡೆಯಲು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ