ನನಗೆ ಬಹಳ ವರ್ಷ ಬದುಕುವ ಆಸೆ. ಜನ ಸೇವೆಗಾಗಿ ನಾನು ಹೆಚ್ಚು ವರ್ಷ ಬದುಕಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು (ನ.15): ನನಗೆ ಬಹಳ ವರ್ಷ ಬದುಕುವ ಆಸೆ. ಜನ ಸೇವೆಗಾಗಿ ನಾನು ಹೆಚ್ಚು ವರ್ಷ ಬದುಕಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ತಿಳಿಸಿದರು.
ಮೈಸೂರಿನ (Mysuru) ರಾಜೀವ್ ನಗರ 3ನೇ ಹಂತದ ಹೊರ ವರ್ತುಲಯಲ್ಲಿ ನಿರ್ಮಿಸಲಾಗಿರುವ ಡಾ.ಕರುಣಾಕರ ನಾಗರಾಜೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (Hospital) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಈಗ 75 ವರ್ಷ ಆಯ್ತು. ಡಯಾಬಿಟಿಕ್‌ನಿಂದ 10 ವರ್ಷ ಆಯುಸ್ಸು ಕಡಿಮೆ ಆಯ್ತು. ಎಷ್ಟುವರ್ಷ ಬದುಕುತ್ತೇನೋ ಗೊತ್ತಿಲ್ಲ. ಆದರೆ, ಜಾಸ್ತಿ ವರ್ಷ ಬದುಕುವ ಆಸೆ ಇದೆ ಎಂದರು.
undefined
ಖಾಸಗಿ ಆಸ್ಪತ್ರೆ ನಡೆಸುವವರು ಜನರ ಬಗ್ಗೆ ಕರುಣೆ ಸಹಾನುಭೂತಿ ಇಟ್ಟುಕೊಂಡು ಜನಸ್ನೇಹಿ ಆಸ್ಪತ್ರೆಯನ್ನಾಗಿ ಮಾಡಿ. ಡಾ. ಕರುಣಾಕರ ಅವರು ಹಳ್ಳಿಯಿಂದ ಬಂದವರು. ಬಡವರ ಕಷ್ಟ- ಸುಖ ನೋಡಿರುವಂತಹವರು. ನಾಗರಾಜೇಗೌಡರು ಜನಪರ ಕಾಳಜಿ ಇಟ್ಟುಕೊಂಡಿದ್ದಂತಹ ಸ್ನೇಹಿತರಾಗಿದ್ದರು ಎಂದರು.
ಆಸ್ಪತ್ರೆ ನಡೆಸುವವರಿಗೆ ಕೊರೋನಾ ಬಂದ ಮೇಲೆ ಅನುಕೂಲ ಆಗಿದೆ. ಕೆಲವರು ಆಸ್ಪತ್ರೆ ಮಾಡಲು ಹೊರಟ್ಟಿದ್ದರು. ಆದರೆ, ಕೋವಿಡ್ ಬಂದ ಮೇಲೆ ಆಸ್ಪತ್ರೆಗಳಿಗೆ ಹೆಚ್ಚು ಲಾಭವಾಗಿದೆ. ಕೋವಿಡ್‌ನಿಂದ ಜನರಿಗೆ ತೊಂದರೆ ಆಗಿದೆ. ಖಾಸಗಿ ಆಸ್ಪತ್ರೆ ಅವರಿಗೆ ಅನುಕೂಲವಾಗಿದೆ ಎಂದರು.
ಸಮಾಜದಲ್ಲಿರುವ ಎಲ್ಲಾ ಜನರಿಗೂ ಜೀವರಕ್ಷಣೆ ಮಾಡುವುದು ಬಹಳ ಮುಖ್ಯವಾಗಿದೆ. ಬದಲಾದ ಜೀವನ ಶೈಲಿಯಿಂದ ಅನೇಕ ರೋಗಗಳು ಬರುತ್ತಿವೆ. ಆದ್ದರಿಂದ ರೋಗ ಬರದೇ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಚಿಕ್ಕಂದಿನಲ್ಲಿಯೇ ಯೋಗ, ಪ್ರಾಣಯಾಮ, ವ್ಯಾಯಾಮಗಳನ್ನು ಮಾಡಿದರೆ ಅನೇಕ ರೋಗಗಳಿಂದ ದೂರ ಇರಬಹುದು ಎಂದರು.
ಇದಕ್ಕೂ ಮುನ್ನ ಆಸ್ಪತ್ರೆಯನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ತನ್ವೀರ್ ಸೇಠ್, ವಿಧಾನಪರಿಷತ್ತು ಸದಸ್ಯರಾದ ಸಿ.ಎನ್. ಮಂಜೆಗೌಡ. ಡಾ.ಡಿ.ತಿಮ್ಮಯ್ಯ, ಲೇಖಾ ವೆಂಕಟೇಶ್, ಅಮರಾವತಿ ಚಂದ್ರಶೇಖರ್, ಆಸ್ಪತ್ರೆಯ ಸಂಸ್ಥಾಪಕ ಡಾ.ಎನ್. ಕರುಣಾಕರ, ವ್ಯವಸ್ಥಾಪಕ ನಿರ್ದೇಶಕಿ ಡಾ. ಸುಜಾತ ಕರುಣಾಕರ ಮೊದಲಾದವರು ಇದ್ದರು.
ಕೋಲಾರದಲ್ಲಿ ನಾಮಿನೇಷನ್ ಸಲ್ಲಿಸುತ್ತೇನೆ
ಕೋಲಾರ : ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆ ವೇಳೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಗೊಂದಲಕ್ಕೆ ಈಗ ಪರಿಹಾರ ಸಿಕ್ಕಂತಾಗಿದೆ. ಕೋಲಾರದಲ್ಲಿ ಪ್ರವಾಸ ಕೈಗೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ವತಃ ಕೋಲಾರದಲ್ಲಿ ನಾಮಿನೇಷನ್ ಮಾಡಲು ಬಂದೇ ಬರುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ವಿಧಾನಸಭಾ ಕ್ಷೇತ್ರದ ಆಯ್ಕೆಗೆ ತೆರೆ ಎಳೆದಿದ್ದಾರೆ.
ಮೂಲತಃವಾಗಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ತವರು ಕ್ಷೇತ್ರ ಮೈಸೂರಿನ ವರುಣಾ (Varuna) ವಿಧಾನಸಭಾ (Assembly) ಕ್ಷೇತ್ರವಾಗಿದೆ. ಆದರೆ, ಕಳೆದ ಚುನಾವಣೆಯಲ್ಲಿ (Election)ವರುಣಾದಲ್ಲಿ ಸೋಲುವ ಭೀತಿಯಿಂದ ವರುಣಾ ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ವರುಣಾದಲ್ಲಿ ಸೋತು, ಬಾದಾಮಿಯಲ್ಲಿ ಕೆಲವೇ ಮತಗಳ ಅಂತರದಿಂದ ಗೆದ್ದಿದ್ದರು. ಪುನಃ 2023ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಕ್ಷೇತ್ರದ ಆಯ್ಕೆಯ ಬಗ್ಗೆ ಗೊಂದಲದಲ್ಲಿದ್ದಾರೆ. ಈವರೆಗೆ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾಹಿತಿಯತಿಲ್ಲ. ಹಳೆಯ ಕ್ಷೇತ್ರ ವರುಣಾ, ಪ್ರಸ್ತುತ ಶಾಸಕರಾಗಿರುವ ಕ್ಷೇತ್ರ ಬಾದಾಮಿ, ಇತ್ತೀಚೆಗೆ ಮನ್ನೆಲೆಗೆ ಬಂದಿದ್ದ ಬೆಂಗಳೂರಿನ ಚಾಮರಾಜಪೇಟೆ (Chamarajapet) ಹಾಗೂ ಈಗ ಕೋಲಾರದಲ್ಲಿ(Kolar) ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ಬಂದಿವೆ. ಆದರೆ, ಈ ಎಲ್ಲ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಪ್ರವಾಸ ಮಾಡುತ್ತಿದ್ದು, ಅಂತಿಮವಾಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆದರೆ, ಇಂದು ಕೋಲಾರ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಭಾರತೀ ಮೆಥೋಡಿಸ್ಟ್ ಚರ್ಚ್ (Bharathi Methodist church) ನಲ್ಲಿ ತಾವು ಕೋಲಾರದಲ್ಲಿ ನಾಮಿನೇಷನ್ ಮಾಡಲು ಬರುವುದಾಗಿ ಹೇಳಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ ಎಂಬ ಅಂಶಗಳು ಲಭ್ಯವಾಗುತ್ತಿವೆ.
ಸಿದ್ದರಾಮಯ್ಯಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ದವಾದ ಕೊಪ್ಪಳ ಶಾಸಕ!
ಜಾತಿ ಆಧಾರಿತ ರಾಜಕಾರಣ:
ಕೋಲಾರಕ್ಕೆ ಆಗಮಿಸಿದ ಕೂಡಲೇ ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಈಗ ಚರ್ಚ್ ಬಂದಿದ್ದೇನೆ. ಚರ್ಚನಲ್ಲಿರುವ ಎಲ್ಲ ಕ್ರೈಸ್ತ ಸಮುದಾಯಕ್ಕೆ (Christian Community) ಧನ್ಯವಾದಗಳು. ನಾನು ಇವತ್ತು ನಾಮಿನೇಷನ್ ಮಾಡಲು ಬಂದಿಲ್ಲ. ಆದರೆ, ಕೋಲಾರದಲ್ಲಿ ನಿಲ್ಲಬೇಕು ಎಂದು ಒತ್ತಡವಿದೆ. ಈಗ ನಾನು ಬಾದಾಮಿ (Badami)ಶಾಸಕನಾಗಿದ್ದೇನೆ. ಮುಂದಿನ ದಿನಗಳಲ್ಲಿಯೂ ಬಾದಾಮಿಯಲ್ಲಿ, ವರುಣದಲ್ಲಿ ಸ್ಪರ್ಧಿಸುವಂತೆ ಒತ್ತಡವಿದೆ. ನನಗೆ ಕೋಲಾರ ಜನರ ಮೇಲೆ ಪ್ರೀತಿ ಇದೆ. ಮುಖ್ಯಮಂತ್ರಿ ಆದಾಗ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಿದ್ದೇನೆ. ಇದು ಬಹುತ್ವದ ದೇಶವಾಗಿದ್ದು, ಮನುಷ್ಯತ್ವ ಮುಖ್ಯವಾಗಿದೆ. ಬಿಜೆಪಿ ಹಾಗೂ ಬೇರೆ ಪಕ್ಷಗಳು ಧರ್ಮ(Religion), ಜಾತಿ (Cast)ಆಧಾರಿತವಾಗಿ ಹೋಗುತ್ತವೆ. ಕಾಂಗ್ರೆಸ್ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುತ್ತದೆ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವುದ ಕರ್ತವ್ಯವಾಗಿದೆ. ನಮ್ಮ ಆಡಳಿತ ಅವಧಿಯಲ್ಲಿ ಯಾವ ಧರ್ಮಕ್ಕೆ ತೊಂದರೆ ಆಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.