ಹಾವೇರಿಯ ಕಡಕೋಳದಲ್ಲಿ ಸುಮ್ಮನೆ ಇಶ್ಯೂ ಮಾಡುತ್ತಿದ್ದಾರೆ. ಕೋಮು ಸಾಮರಸ್ಯ ಕದಡಲಾಗುತ್ತಿದೆ. ಇವೆಲ್ಲವನ್ನೂ ಸರಿ ಮಾಡಲು ಹೇಳಿದ್ದೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಹಾವೇರಿ(ನ.03): ಸವಣೂರು ತಾಲೂಕಿನ ಕಡಕೋಳದಲ್ಲಿ ವಿಷಯವೇ ಇಲ್ಲ. ಗಲಾಟೆ ಯಾರ್ ಮಾಡಿದವರು? ಕಡಕೋಳದಲ್ಲಿ ಒಂದು ಎಂಟ್ರಿ ಆಗಿಲ್ಲ. ಹಾವೇರಿ ಜಿಲ್ಲೆಯಲ್ಲಿ ಎಂಟ್ರಿ ಆಗಿರಬಹುದು. ಆದರೆ ಕಡಕೋಳದಲ್ಲಿ ಒಂದೇ ಒಂದು ಎಂಟ್ರಿ ಆಗಿಲ್ಲ. ಅಲ್ಲಿ ಯಾವುದೂ ವಕ್ಫ್ ಅಂತ ಇನ್ನೂ ಎಂಟ್ರಿನೇ ಆಗಿಲ್ಲ. ಆದರೂ ಸುಮ್ಮನೆ ಇಶ್ಯು ಮಾಡ್ತೀರಿ ಅಂದರೆ ಎಂಥ ಮೂರ್ಖತನ?. ನೋಟೀಸ್ ಕೊಟ್ಟರೆ ಎಂಟ್ರಿ ಆದ ಹಾಗೆ ಅಲ್ಲ. ಕಡಕೋಳದಲ್ಲಿ ಗಲಾಟೆ ಆಗಿರೋದು ದುರದೃಷ್ಟಕರ. ಅರೆಸ್ಟ್ ಆಗಿರುವ ಹಿಂದೂಗಳನ್ನು ರಿಲೀಸ್ ಮಾಡಿ ಎಂದು ನಾನೇ ಹೇಳಿದ್ದೇನೆ, ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಇಂದು(ಭಾನುವಾರ) ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಮುಸಲ್ಮಾನರನ್ನು ರಾತ್ರಿ ಒಕ್ಕಲೆಬ್ಬಿಸಿ. ಮನೆಯಿಂದ ಓಡಿಸಿದ್ದಾರೆ. ಅವರಿನ್ನೂ ಊರಿಗೆ ಬಂದಿಲ್ಲ. ಬಹು ಸಂಖ್ಯಾತ ಹಿಂದೂಗಳಿದ್ದರೆ ಮುಸ್ಲಿಂರಿಗೆ ಭಯ. ಮುಸಲ್ಮಾನರು ಬಹುಸಂಖ್ಯಾತರಿದ್ದಲ್ಲಿ ಹಿಂದೂಗಳಿಗೆ ಭಯ. ಈ ರೀತಿಯ ವಾತಾವರಣ ಸೃಷ್ಟಿ ಮಾಡ್ತಾ ಬರ್ತಾ ಇದಾರೆ. ಇದು ಬಹಳ ದುರದೃಷ್ಟಕರ. ಇಷ್ಟು ವರ್ಷ ಸಾಮರಸ್ಯ ಮಾಡಿಕೊಂಡೇ ಬದುಕಿದೀವಲ್ರಿ. ಕಡಕೋಳ ಗ್ರಾಮದಲ್ಲಿ ಏನೂ ಆಗಿಯೇ ಇಲ್ಲ ಎಂದು ಸಚಿವರು ಹೇಳಿದ್ದಾರೆ.
undefined
ಸಚಿವರು ಶಿಗ್ಗಾವಿಗೆ ಬಂದಿರೋದು ಹಣ ಹಂಚೋಕೆ ಎಂಬ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅವರ ಲೀಡರ್ಸ್ ಬರೋದು ಹಣ ಹಂಚೋಕೆ ಬರ್ತಾರಾ? ನಮ್ಮ ಲೀಡರ್ಸ್ ಬರೋದು ಪ್ರಚಾರಕ್ಕೆ, ಆದರೆ ಅವರ ಲೀಡರ್ಸ್ ಹಣ ತರುತ್ತಿದ್ದರೆ ಗೊತ್ತಿಲ್ಲ. ಅಭಿವೃದ್ದಿ ಬಗ್ಗೆ ಅವರೂ ಹೇಳ್ತಾರೆ, ನಾವೂ ಹೇಳ್ತೀವಿ. ಚುನಾವಣೆಯನ್ನು ಕ್ರಿಕೆಟ್‌ಗೆ ಹೋಲಿಸಿದರೆ ಮೂರ್ಖರು ಅವರು. ಅಲ್ಲಿ 22 ಜನ ಆಡ್ತಾರೆ. ಇಲ್ಲಿ ಎರಡು ಲಕ್ಷ ಜನ ಆಡ್ತಾರೆ. ಅವರ ಬಗ್ಗೆ ನಾವು ಹೆಂಗೆ ಗ್ರಾಂಟೆಡ್ ತಗೊಳೋಕೆ ಬರುತ್ತೆ? ಎಂದು ಹೇಳಿದ್ದಾರೆ.
ವಕ್ಫ್ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಹೇಳಿರುವ ವಿಡಿಯೋ ಇದೆ ನೋಡಿ. ಚುನಾವಣೆ ಸಂದರ್ಭದಲ್ಲಿ ಅಸ್ತ್ರ ಹುಟ್ಟಿಸ್ತಾರೆ, ಅವರ ನೂರು ಪಟ್ಟು ಮೀಡಿಯಾದವರು ಹುಟ್ಟಿಸ್ತಿರಿ. ವಕ್ಫ್ ಅಂತ ಎಂಟ್ರಿ ಆದರೆ ಟ್ರಿಬ್ಯುಬಲ್ ಇದೆ, ಅಲ್ಲಿ ಅಪೀಲ್ ಹಾಕಿದರೆ ಎಂಟ್ರಿ ಆಗಿರೋದು ಡಿಲೇಟ್ ಆಗುತ್ತೆ. ಕೇಂದ್ರದಲ್ಲಿ ವಕ್ಫ್ ಕಾನೂನು ಮರು ಪರಿಶೀಲನೆ ಮಾಡಲು ಹೋದಾಗ ಆ ಸಮಾಜದವರು ಒಂದು ಚಿಂತನೆಗೆ ಹೋಗಿರಬಹುದು. ಮುಸ್ಲಿಂ ರಾಜರು ಹಿಂದೂ ಮಠಗಳಿಗೂ ಆಸ್ತಿ ಕೊಟ್ಟಿದಾರೆ. ಅವೆಲ್ಲಾ ಸಿವಿಲ್ ಡಿಸ್ಪ್ಯೂಟ್. ಆದರೆ ಅದನ್ನು ಸಾರ್ವಜನಿಕ ಇಶ್ಯೂ ಮಾಡುತ್ತಿದ್ದಾರೆ. ನಮ್ ವರ್ಷನ್ ಹೇಳ್ತೀನಿ ಕೇಳಿ ವಕ್ಫ್ ಆಸ್ತಿನೂ ಪರಿಶೀಲನೆ ಮಾಡಿದ್ದಾರೆ. ಗುಡಿ ಗುಂಡಾರಗಳ ಆಸ್ತಿನೂ ಪರಿಶೀಲನೆ ಮಾಡಿದ್ದಾರೆ. ಅದಕ್ಕೆಲ್ಲಾ ಕೋರ್ಟ್ ಇದೆ ಎಂದು ತಿಳಿಸಿದ್ದಾರೆ.