ರೈತರ ಜಮೀನನ್ನ ಯಾವುದೇ ಕಾರಣಕ್ಕೂ ತೆಗೆದುಕೊಳ್ಳಲ್ಲ: ಸಚಿವ ಜಮೀರ್ ಅಹ್ಮದ್ ಖಾನ್

By Girish Goudar  |  First Published Nov 2, 2024, 11:32 PM IST

ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ ಜಮೀನು ಒತ್ತುವರಿಯಾಗಿದೆ. 90 ಪ್ರತಿಶತ ಮುಸ್ಲಿಂರೇ ವಕ್ಫ್‌ ಬೋರ್ಡ್‌ ಆಸ್ತಿ ಒತ್ತುವರಿ ಮಾಡಿದ್ದಾರೆ. ಪಾಪ ಹಿಂದೂಗಳು ಕೇವಲ 10 ಪರ್ಸೆಂಟ್ ಮಾಡಿರಬಹುದು. ಯಾರನ್ನೂ ಒಕ್ಕಲೆಬ್ಬಿಸೊ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಜಮೀರ್ ಅಹ್ಮದ್ ಖಾನ್ 
 


ಕಲಬುರಗಿ(ನ.02): ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಲು ಹೇಳಿದ್ದೇವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟವಾದ ಆದೇಶ ನೀಡಿದ್ದಾರೆ. ರೈತರ ಜಮೀನನ್ನ ಯಾವುದೇ ಕಾರಣಕ್ಕೂ ತೆಗೆದುಕೊಳ್ಳುತ್ತಿಲ್ಲ. ಅವರು ನಮ್ಮ ಅನ್ನದಾತರು. ಅವರ ಜಮೀನು ತೆಗೆದುಕೊಳ್ಳೊಕೆ ಅಗುತ್ತಾ? ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ ಜಮೀನು ಒತ್ತುವರಿಯಾಗಿದೆ. 90 ಪ್ರತಿಶತ ಮುಸ್ಲಿಂರೇ ವಕ್ಫ್‌ ಬೋರ್ಡ್‌ ಆಸ್ತಿ ಒತ್ತುವರಿ ಮಾಡಿದ್ದಾರೆ. ಪಾಪ ಹಿಂದೂಗಳು ಕೇವಲ 10 ಪರ್ಸೆಂಟ್ ಮಾಡಿರಬಹುದು. ಯಾರನ್ನೂ ಒಕ್ಕಲೆಬ್ಬಿಸೊ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Tap to resize

Latest Videos

undefined

ಜಮೀರ್ ಅಹಮದ್ ಖಾನ್‌ ಒಬ್ಬ ಮತಾಂಧ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಜಮೀರ್ ರಾಜೀನಾಮೆ ನೀಡಬೇಕು ಎನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರು ಸುಮ್ಮನೆ ನಂಗೆ ಪ್ರಚಾರ ನೀಡುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪುಕ್ಕಟ್ಟೆ ಪ್ರಚಾರ ಮಾಡ್ತಿದ್ದಾರೆ. ಹಿಂದೆ ಬೊಮ್ಮಾಯಿ ವಕ್ಫ್‌ ಸಭೆ ಮಾಡಿಲ್ವಾ? ಎಂದು ವಿಡಿಯೋ ತೋರಿಸಿದ್ದಾರೆ. ಅವರೇ ಇದೆಲ್ಲಾ ಅಲ್ಲಾನಾ ಆಸ್ತಿ ಎಂದಿದ್ದಾರೆ. ಇವಾಗ ಉಲ್ಟಾ ಹೊಡೆಯುತ್ತಿದ್ದಾರೆ ಏನು ಮಾಡೋಣ? ಎಂದು ಹೇಳಿದ್ದಾರೆ. 

click me!