ತಾವೀಗ JDSನಲ್ಲಿದ್ದೀರಾ ಎಂದಿದ್ದಕ್ಕೆ ಮಾಜಿ ಸಂಸದ ಕೊಟ್ಟ ಉತ್ತರವೇನು?

Published : Sep 09, 2019, 02:11 PM IST
ತಾವೀಗ JDSನಲ್ಲಿದ್ದೀರಾ ಎಂದಿದ್ದಕ್ಕೆ ಮಾಜಿ ಸಂಸದ ಕೊಟ್ಟ ಉತ್ತರವೇನು?

ಸಾರಾಂಶ

ತಾವು ಈಗ ಎಲ್ಲಿದ್ದೀರಿ? ಜೆಡಿಎಸ್ ನಲ್ಲಿಯೇ ಇದ್ದೀರಾ? ಎಂದು ಕೇಳಿದ ಪ್ರಶ್ನೆ ಮಾಜಿ ಸಂಸದರು ಉತ್ತರ ನೀಡಿದ್ದು ಏನು? ಇಲ್ಲಿದೆ ಮಾಹಿತಿ.

ನಾಗಮಂಗಲ [ಸೆ.09]:  ಮುಂಬರುವ ದಿನಗಳಲ್ಲಿ ತಾವು ಸಕ್ರಿಯವಾಗಿ ನಾಗಮಂಗಲ ಕ್ಷೇತ್ರದಲ್ಲಿದ್ದುಕೊಂಡು ಕ್ಷೇತ್ರದ ಜನ ಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸುವುದಾಗಿ ಮಾಜಿ ಸಂಸದ ಎಲ್.ಆರ್‌.ಶಿವರಾಮೇಗೌಡ ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮೇಗೌಡರು, ಕಳೆದ ಲೋಕಸಭಾ ಚುನಾವಣಾ ನಂತರ ತಾವು ಕ್ಷೇತ್ರದಲ್ಲಿ ಸಕ್ರಿಯವಾಗಿರಲಿಲ್ಲ. ಇನ್ನು ಮುಂದೆ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ವಾರಕ್ಕೊಮ್ಮೆ ಇದ್ದು, ಇಲ್ಲಿ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುತ್ತೇನೆ. ನಾಗಮಂಗಲದಲ್ಲಿ ಕಂದಾಯ ಇಲಾಖೆ, ವಿದ್ಯುತ್‌ ಇಲಾಖೆಗಳು ಸೇರಿದಂತೆ ಹಲವು ಇಲಾಖೆಗಳಲ್ಲಿ ರೈತಾಪಿ ವರ್ಗದ ಜನರ ಕೆಲಸಗಳು ತ್ವರಿತವಾಗಿ ಆಗಬೇಕಾಗಿದೆ, ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.

ಈಗ ಜನರ ಕೆಲಸ ಮಾಡೋಣ:  ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಜಿಲ್ಲೆಯ ಜನ ತಮಗೆ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಅನಿವಾರ್ಯ ಕಾರಣಗಳಿಂದ ಕಳೆದ ಆರು ತಿಂಗಳಿಂದ ತಾಲೂಕಿನಲ್ಲಿ ಸಕ್ರಿಯವಾಗಿರಲಿಲ್ಲ, ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ. ಮುಂಬರುವ ಚುನಾವಣೆಗೆ ಏನಾದರೂ ತಯಾರಿ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಕಾಲ ಬಂದಾಗ ನೋಡೋಣ. ಈಗ ಜನಸಾಮಾನ್ಯರ ಕೆಲಸ ಮಾಡೋಣ ಬನ್ನಿ ಎಂದಷ್ಠೆ ಉತ್ತರ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿವರಾಮೇಗೌಡರು ಜೆಡಿಎಸ್‌ ಪಕ್ಷದಲ್ಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗೌಡರು, ತಾವು ಜೆಡಿಎಸ್‌ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ, ನನ್ನನ್ನು ಜೆಡಿಎಸ್‌ ಪಕ್ಷ ಸಂಸದರನ್ನಾಗಿ ಮಾಡಿತು. ಆ ಪಕ್ಷದ ಹಾಗೂ ನಮ್ಮ ನಾಯಕರಾದ ದೇವೇಗೌಡ, ಕುಮಾರಸ್ವಾಮಿ ಋುಣ ನಮ್ಮ ಮೇಲಿದೆ. ನಾಗಮಂಗಲದಲ್ಲಿ ಸುರೇಶ್‌ಗೌಡ ಶಾಸಕರಾಗಿದ್ದಾರೆ, ಹೀಗಿರುವಾಗ ತಾವು ಪಕ್ಷಸಂಘಟನೆ ಮಾಡೋದು ಅರ್ಥ ಎಂಬ ಪ್ರಶ್ನೆಗೆ ಇಬ್ಬರೂ ಸೇರಿ ಸಂಘಟನೆ ಮಾಡುತ್ತೇವೆ ಎಂದರು.

PREV
click me!

Recommended Stories

Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!
ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಡಿ.20ಕ್ಕೆ ಚಿತ್ರಕಲಾ ಸ್ಪರ್ಧೆ: ಎಲ್ಲಿ?