ಮಾಜಿ ಸಂಸದ ಶಿವರಾಮೇಗೌಡಗೆ ಬಿಗ್ ರಿಲೀಫ್

Published : Sep 09, 2019, 01:40 PM IST
ಮಾಜಿ ಸಂಸದ ಶಿವರಾಮೇಗೌಡಗೆ ಬಿಗ್ ರಿಲೀಫ್

ಸಾರಾಂಶ

ಜೆಡಿಎಸ್ ಮುಖಂಡ ಎಲ್ .ಆರ್ .ಶಿವರಾಮೇಗೌಡಗೇ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಲೋಕಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಿರಪರಾಧಿ ಎಂದು ಕೋರ್ಟ್ ಹೇಳಿದೆ. 

ನಾಗಮಂಗಲ: [ಸೆ.09] :  ಮಾಜಿ ಸಂಸದ ಎಲ್. ಆರ್‌ .ಶಿವರಾಮೇಗೌಡರ ಮೇಲೆ 2008ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಚುನಾವಣಾ ಆಯೋಗ ಹಾಕಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಿರಾಪರಾಧಿ ಎಂದು ಪಟ್ಟಣದ ಜೆಎಂಎಫ್‌ ಸಿ ನ್ಯಾಯಾಲಯ ತೀರ್ಪು ನೀಡಿದೆ ಎಂದು ವಕೀಲ ಟಿ.ಕೆ.ರಾಮೇಗೌಡ ತಿಳಿಸಿದ್ದಾರೆ.

ಚುನಾವಣಾ ಆಯೋಗ ಮತ್ತು ಸ್ಥಳೀಯ ಪೊಲೀಸರು ಮಾಜಿ ಸಂಸದ ಎಲ್ ಆರ್‌.ಶಿವರಾಮೇಗೌಡ ಸೇರಿದಂತೆ ಇತರರ ಮೇಲೆ ಚುನಾವಣಾ ನೀತೆ ಸಂಹಿತೆ ಪ್ರಕರಣ ದಾಖಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸತತ ಹತ್ತು ವರ್ಷಗಳ ಕಾಲ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದು, ಶಿವರಾಮೇಗೌಡ ಹಾಗೂ ಇತರರು ನೀತೆ ಸಂಹಿತೆ ಉಲ್ಲಂಘನೆ ಮಾಡಿರುವುದಕ್ಕೆ ಸರಿಯಾದ ಸಾಕ್ಷಿ ಇಲ್ಲದ ಕಾರಣ ಇವರನ್ನು ಈ ಪ್ರಕರಣದಲ್ಲಿ ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದರು.

PREV
click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
Karnataka High court: ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!