ಮನೆಯಲ್ಲಿ ಹಿಟ್ಟಿಲ್ಲದ ಹೊತ್ತಲ್ಲಿ ಜಾನಪದ ಕಲಿತೆ: 'ಅನ್ಯಾಯಕಾರಿ ಬ್ರಹ್ಮ' ಖ್ಯಾತಿಯ ಗಾಯಕ ಮಹ​ದೇ​ವ​ಸ್ವಾ​ಮಿ

By Kannadaprabha News  |  First Published Jul 9, 2023, 12:34 PM IST

ಮನೆಯಲ್ಲಿ ಹಿಟ್ಟಿಲ್ಲದ ಹೊತ್ತಲ್ಲಿ ಜನಪದ ಹಾಡು ಕಲಿತುಕೊಂಡೆ, ಎಷ್ಟೋ ಕಷ್ಟವನ್ನು ಪಟ್ಟಮೇಲೆ ಈ ಸ್ಥಾನಕ್ಕೆ ಬರಲು ಜನಪದವೇ ಕಾರಣವಾಯಿತು ಎಂದು ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಹೇಳಿ​ದರು.


ರಾಮನಗರ (ಜು.09): ಮನೆಯಲ್ಲಿ ಹಿಟ್ಟಿಲ್ಲದ ಹೊತ್ತಲ್ಲಿ ಜನಪದ ಹಾಡು ಕಲಿತುಕೊಂಡೆ, ಎಷ್ಟೋ ಕಷ್ಟವನ್ನು ಪಟ್ಟಮೇಲೆ ಈ ಸ್ಥಾನಕ್ಕೆ ಬರಲು ಜನಪದವೇ ಕಾರಣವಾಯಿತು ಎಂದು ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಹೇಳಿ​ದರು. ತಾಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನಡೆದ ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ಕರುನಾಡ ಜಾನಪದ ಜಂಗಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ತಂದೆ, ತಾಯಂದಿರ ಮಾತುಗಳನ್ನು ಆಲಿಸಿ ಅವರ ಅಣತಿಯಂತೆ ನಡೆಯಬೇಕು. 

ಕೋಲಾಟ, ತಮಟೆ, ನಗಾರಿ, ಕಂಸಾಳೆ ಸೇರಿದಂತೆ ಎಷ್ಟೋ ಕಲೆಗಳಿವೆ, ಅವುಗಳನ್ನು ಶ್ರದ್ಧೆಯಿಂದ ಕಲಿತುಕೊಂಡರೆ ನಿಮ್ಮ ಭವಿಷ್ಯ ಉಜ್ವಲಗೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಓದಿದವರಿಗೆಲ್ಲಾ ಕೆಲಸ ಸಿಗುವುದಿಲ್ಲ ಎಂಬುವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ, ಅದರಂತೆ ನಡೆದುಕೊಳ್ಳುವುದು ಮುಖ್ಯವಾಗಬೇಕು. ಈ ಹಿಂದೆ ಸಿನಿಮಾದಲ್ಲಿ ಹಾಡುಗಳಿಗಾಗಿ ಬರೆಯುತ್ತಿದ್ದ ಸಾಹಿತ್ಯವು ಎಲ್ಲರ ಮನೆ ಹಾಗೂ ಮನಸ್ಸು ಮುಟ್ಟುತ್ತಿತ್ತು, ಈಗಿನ ಸಾಹಿತ್ಯ ಅರ್ಥವಾಗುವುದಿಲ್ಲ ಅದರ ಬಗ್ಗೆ ಆಲೋಚನೆ ಬಿಟ್ಟು, ಉತ್ತಮ ಸಾಹಿತ್ಯ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿ​ದರು.

Tap to resize

Latest Videos

ಜೈನಮುನಿ ಹತ್ಯೆ ಸಮಗ್ರ ತನಿಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ನನ್ನ ತಾಯಿ ಹೇಳಿಕೊಟ್ಟ ಹಾಡನ್ನು ಲಕ್ಷಾಂತರ ಜನರು ಕೇಳುತ್ತಿ​ದ್ದಾರೆ. ಈ ಹಾಡನ್ನು ಯಾರೋ ಬರೆದಿರುವುದಲ್ಲ. ಇದು ಜಾನಪದ ಹಾಡಾಗಿದ್ದು, ನನ್ನ ತಾಯಿ, ಗುರುಗಳ ಬಾಯಿಂದ ಕೇಳಿ ನಾನು ಹಾಡಿದ್ದೇನೆ. ಈಗ ಹಾಡು, ದೇಶ-ವಿದೇಶದಲ್ಲೂ ವೈರಲ್‌ ಆಗ್ತಾ ಇದೆ. ಮದುವೆ ಆಗದವರು, ಹೆಣ್ಣು ಸಿಗದ ಗಂಡು ಮಕ್ಕಳಿಗೆ ಹಾಡು ಬಳಸಿ ತಮಾಷೆ ಮಾಡುತ್ತಿದ್ದಾರೆ. ಈ ಹಾಡು ವೈರಲ್‌ ಆದ ಬಳಿಕ ನಿರ್ಮಾಪಕರೊಬ್ಬರು ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ ಎಂದರು.

ಶಾಂತಲಾ ಚಾರಿಟಬಲ್‌ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್‌ ಮಾತನಾಡಿ, ಗಾಯನದ ಮೂಲಕ ಮಳವಳ್ಳಿ ಮಹದೇವಸ್ವಾಮಿ ಅವರು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ನೈಜ ಕಲಾವಿದರ ಸಾಧನೆಯನ್ನು ಪಠ್ಯಪುಸ್ತಕಕ್ಕೆ ಅಳವಡಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಗೋಪಾಲಗೌಡ, ಸಾಹಿತಿ ಸುಮಂಗಲಾ ಸಿದ್ದರಾಜು, ಸಾಹಿತಿ ರವಿಕುರ್ಮಾ ಕುಮಾರನಪುರ, ರಂಗ ನಿರ್ದೇಶಕ ಎಂ.ಸಿ. ನಾಗರಾಜ, ಕಲಾವಿದರಾದ ಕಾವ್ಯರಾವ್‌, ಚಿತ್ರರಾವ್‌, ಗಾಯಕ ಮಹದೇವಯ್ಯ, ಶಿಕ್ಷಕ ರಾಜಶೇಖರ್‌ ಉಪ​ಸ್ಥಿ​ತ​ರಿ​ದ್ದ​ರು.

ಅರುಣ್‌ ಪುತ್ತಿಲ ಜತೆ ದೆಹಲಿಯಲ್ಲಿ ಸಂತೋಷ್‌ ಚರ್ಚೆ: ಪಕ್ಷದಲ್ಲಿ ಉತ್ತಮ ಹುದ್ದೆ?

ಸಾಹಿತ್ಯಕ್ಕೆ ಮೂಲ ಜನಪದ: ಗ್ರಾಮೀಣ ಭಾಗದಲ್ಲಿ ಜನಪದ ಸಾಹಿತ್ಯ ಉಳಿಯಬೇಕು. ಜನಪದದಲ್ಲಿ ಹಲವು ಗಾದೆ ಮಾತುಗಳು ಲೋಕರೂಢಿಯಲ್ಲಿವೆ. ಅವುಗಳನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸಬೇಕು. ಅವುಗಳ ಅರ್ಥ ಅರಿಯಬೇಕು. ಜನಪದವು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಮಳವಳ್ಳಿ ಮಹದೇವಸ್ವಾಮಿ ಹೇಳಿದರು.

click me!