ಗುಡೇಕೋಟೆ ದೇವರ ಎತ್ತುಗಳಿಗೆ ದಕ್ಕಿತು 3 ಟ್ರ್ಯಾಕ್ಟರ್‌ ಮೇವು

By Kannadaprabha News  |  First Published Jul 9, 2023, 12:15 PM IST

 ತಾಲೂಕಿನ ಗುಡೇಕೋಟೆ ವ್ಯಾಪ್ತಿಯಲ್ಲಿ ಮೇವಿನ ಕೊರತೆ ಎದುರಿಸುತ್ತಿದ್ದ ದೇವರ ಎತ್ತುಗಳಿಗೆ ಕೊನೆಗೂ ಮೂರು ಟ್ರ್ಯಾಕ್ಟರ್‌ ಮೇವು ದೊರೆಯಿತು.


(ಕನ್ನಡಪ್ರಭ ವರದಿ ಪರಿಣಾಮ)

 ಕೂಡ್ಲಿಗಿ (ಜು.9) : ತಾಲೂಕಿನ ಗುಡೇಕೋಟೆ ವ್ಯಾಪ್ತಿಯಲ್ಲಿ ಮೇವಿನ ಕೊರತೆ ಎದುರಿಸುತ್ತಿದ್ದ ದೇವರ ಎತ್ತುಗಳಿಗೆ ಕೊನೆಗೂ ಮೂರು ಟ್ರ್ಯಾಕ್ಟರ್‌ ಮೇವು ದೊರೆಯಿತು.

Tap to resize

Latest Videos

undefined

ಜು.2ರಂದು ‘ಕನ್ನಡಪ್ರಭ’ದಲ್ಲಿ ‘ಕುಡಿವ ನೀರು ಮೇವಿಲ್ಲದೇ ಕಂಗಾಲಾದ ದೇವರ ಎತ್ತುಗಳು’ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಸುಧಾಮೂರ್ತಿಯವರ ಬೆಂಗಳೂರಿನ ಮೂರ್ತಿ ¶ೌಂಡೇಶನ್‌ ಸ್ಪಂದಿಸಿದೆ. ತುಮಕೂರಿನ ಪಾವಗಡದ ಶ್ರೀರಾಮಕಷ್ಣ ಸೇವಾಶ್ರಮ ಮೂಲಕ ¶ೌಂಡೇಶನ್‌ ಮೂರು ಟ್ರ್ಯಾಕ್ಟರ್‌ ಮೇವು ಪೂರೈಸಿದೆ.

 

ಕುಡಿಯಲು ನೀರು, ಮೇವಿಲ್ಲದೆ ಕಂಗಾಲಾದ ದೇವರ ಎತ್ತುಗಳು ಎರಡು ವಾರದಲ್ಲಿ 5 ಸಾವು!

ತಾಲೂಕಿನ ಗುಡೇಕೋಟೆ ಹೋಬಳಿ ಸಮೀಪದ ದೇವರಹಟ್ಟಿಗ್ರಾಮದ ಹೊರವಲಯದಲ್ಲಿರುವ ದೇವರ ಎತ್ತುಗಳ ಹಟ್ಟಿಗೆ ಮೇವು ತಂದು ಗೋವು ಕಾಯುವ ಕಿಲಾರಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾರಾಜ ಮಹಾರಾಜ್‌ ಮಾತನಾಡಿ, ಕೂಡ್ಲಿಗಿ ತಾಲೂಕಿನಲ್ಲಿ ದೇವರ ಎತ್ತುಗಳಿಗೆ ಮೇವಿಲ್ಲದೇ ಐದಾರು ದೇಶಿ ಹಸು-ಎತ್ತುಗಳು ಸಾವನ್ನಪ್ಪಿರುವ ಸುದ್ದಿ ಕೇಳಿ ನಮಗೆ ಬಹಳ ಖೇದವಾಯಿತು. ಕನ್ನಡಪ್ರಭದ ವಿಶೇಷ ವರದಿ ನೋಡಿ ತಕ್ಷಣವೇ ಬರಗಾಲದಲ್ಲಿ ಉಚಿತ ಮೇವು ವಿತರಣೆ ಮಾಡುವ ಸದುದ್ದೇಶದಿಂದ ಮೂರು ಲೋಡ್‌ ಮೇವನ್ನು ನೀಡಲಾಗಿದೆ. ಆಶ್ರಮದ ಸಂಯೋಜಕ ಸಿ.ಪಿ. ಮಹೇಶಕುಮಾರ, ದೇವರ ಎತ್ತುಗಳನ್ನು ಸಂರಕ್ಷಿಸುವ ಬುಡಕಟ್ಟು ಸಂಸ್ಕೃತಿಯ ಕಿಲಾರಿಗಳಾದ ಸೂರಯ್ಯ, ಸೂರನಾಯಕ, ಓಬಣ್ಣ ಇದ್ದರು.

Chitradurga: ಬೊಮ್ಮದೇವರಹಟ್ಟಿ ಬಳಿ ದೇವರ ಎತ್ತುಗಳಿಗೆ‌ ಕಾಡ್ತಿದೆ ಮೇವಿನ ಅಭಾವ

ಬರಗಾಲದಲ್ಲಿ ದೇವರ ಎತ್ತುಗಳನ್ನು ಸಂರಕ್ಷಿಸಲು ಮೇವಿನ ಕೊರತೆ ಇತ್ತು. ಸದ್ಯ ಮೇವಿನ ಕೊರತೆ ನೀಗಿದೆ. ಕನ್ನಡಪ್ರಭ ಹಾಗೂ ಮೇವು ವಿತರಿಸಿದ ಸಂಸ್ಥೆಗಳಿಗೆ ಧನ್ಯವಾದ.

-ಸೂರಯ್ಯ, ದೇವರ ಎತ್ತುಗಳನ್ನು ಸಂರಕ್ಷಿಸುವ ಕಿಲಾರಿ

click me!