ಬೆಲ್‌ ಮಾಡಿದ್ದು ನೆರೆ ಸಂತ್ರಸ್ತರಿಗಲ್ಲ: ರೇವಣ್ಣ ಸ್ಪಷ್ಟನೆ

Published : Aug 27, 2019, 08:52 AM IST
ಬೆಲ್‌ ಮಾಡಿದ್ದು ನೆರೆ ಸಂತ್ರಸ್ತರಿಗಲ್ಲ: ರೇವಣ್ಣ ಸ್ಪಷ್ಟನೆ

ಸಾರಾಂಶ

ಬೆಲ್‌ ಮಾಡಿದ್ದು ನೆರೆ ಸಂತ್ರಸ್ತರಿಗಲ್ಲ: ರೇವಣ್ಣ| ನಿರಾಶ್ರಿತರ ಕೇಂದ್ರದಲ್ಲಿ ಬೆಲ್ ಹೊಡೆದು ನಿರ್ಲಕ್ಷ್ಯ ತೋರಿದ್ದ ಎಚ್. ಡಿ. ರೇವಣ್ಣ

ಹಾಸನ[ಆ.27]: ನೆರೆ ಪರಿಶೀಲನೆಗೆ ಹೋದಾಗ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಬೆಲ್‌ ಬಾರಿಸಿದ್ದು ವಿವಾದವಾಗಿತ್ತು.

ಈ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ರೇವಣ್ಣ, ನಾನು ಬೆಲ್‌ ಬಾರಿಸಿದ್ದು, ನೆರೆ ಸಂತ್ರಸ್ತರಿಗಲ್ಲ. ಮುಖ್ಯ ಅಧಿಕಾರಿಯೊಬ್ಬರನ್ನು ಕರೆಯಲು ಬೆಲ್‌ ಮಾಡಿದ್ದೆ. ಆದರೆ, ಅದನ್ನು ಕೆಲವರು ತಪ್ಪಾಗಿ ತಿಳಿದು ಅಪಪ್ರಚಾರ ನಡೆಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರೇವಣ್ಣರದ್ದು ಅದೇ ಗೋಳು... ಅಂದು ಬಿಸ್ಕೇಟ್.. ಇಂದು 'ಬೆಲ್ಲಾಟ'!

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಎಂಎಫ್‌ ಚುನಾವಣೆ ಬಗ್ಗೆ ಮಾತನಾಡುವುದಿಲ್ಲ. ಈಗ ರಾಜಕೀಯ ಮಾತನಾಡುವ ಸಮಯವಲ್ಲ. ನೆರೆಯಿಂದ ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡುವುದಕ್ಕೆ ಆದ್ಯತೆ ನೀಡಬೇಕಾಗಿದೆ. ಈ ಬಗ್ಗೆ ಚರ್ಚಿಸಲು ಸಿಎಂ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದರು.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ