ಕೆಆರ್‌ಎಸ್‌ ಡ್ಯಾಂ ಬಿರುಕಿಗೆ ಸಾಕ್ಷ್ಯಗಳಿವೆ: ಸಂಸದೆ ಸುಮಲತಾ

By Kannadaprabha News  |  First Published Jul 3, 2021, 10:47 AM IST

* ತನಿಖೆ ಮಾಡದೆ ಆಣೆಕಟ್ಟೆ ಬಿರುಕು ಬಿಟ್ಟಿಲ್ಲ ಎನ್ನುವುದು ಹೇಗೆ ಗೊತ್ತಾಗುತ್ತದೆ? 
* ಆಣೆಕಟ್ಟೆಗೆ ಯಾವುದೇ ಅಪಾಯವಾಗಬಾರದು ಎನ್ನುವುದೇ ಎಲ್ಲರ ಬಯಕೆ
* ಒಂದು ವೇಳೆ ಅಪಾಯವಿದ್ದರೆ ಅದನ್ನು ಸರಿಪಡಿಸಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ


ಮದ್ದೂರು(ಜು.03): ಮಂಡ್ಯ ಜಿಲ್ಲೆಯ ಜೀವನಾಡಿ ಕೆಆರ್‌ಎಸ್‌ ಬಿರುಕು ಬಿಟ್ಟಿರುವುದಕ್ಕೆ ನನ್ನ ಬಳಿ ಸಾಕ್ಷ್ಯ, ಆಧಾರಗಳಿವೆ. ಅವುಗಳನ್ನಿಟ್ಟುಕೊಂಡೇ ನಾನು ಮಾತನಾಡುತ್ತಿದ್ದೇನೆ. ಆಣೆಕಟ್ಟು ಬಿರುಕು ಬಿಟ್ಟಿಲ್ಲ ಎನ್ನುತ್ತಿರುವವರ ಬಳಿ ಏನಾದರೂ ಸಾಕ್ಷ್ಯಾಧಾರಗಳು ಇವೆಯೇ ಎಂದು ಸಂಸದೆ ಪ್ರಶ್ನಿಸಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ತನಿಖೆಯನ್ನೇ ಮಾಡದೆ ಆಣೆಕಟ್ಟೆ ಬಿರುಕು ಬಿಟ್ಟಿಲ್ಲ ಎನ್ನುವುದು ಹೇಗೆ ಗೊತ್ತಾಗುತ್ತದೆ? ಆಣೆಕಟ್ಟೆಗೆ ಯಾವುದೇ ಅಪಾಯವಾಗಬಾರದು ಎನ್ನುವುದೇ ಎಲ್ಲರ ಬಯಕೆ. ಒಂದು ವೇಳೆ ಅಪಾಯವಿದ್ದರೆ ಅದನ್ನು ಸರಿಪಡಿಸಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಹೇಳಿದ್ದಾರೆ. 

Tap to resize

Latest Videos

ನೀವ್ ಹೇಳಿದ್ದೆ ನಿಜ ಆದ್ರೆ ಸಿಎಂ ಸೇರಿ ಎಲ್ಲಾ ರಾಜೀನಾಮೆ ಕೊಡ್ತೀವಿ : ಸುಮಲತಾಗೆ ಸವಾಲ್

ಆಣೆಕಟ್ಟೆ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ವೈಜ್ಞಾನಿಕವಾಗಿ ತನಿಖೆ ನಡೆದು ಅದರ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ತಿಳಿಸಿದ್ದಾರೆ. 
 

click me!