Karnataka Politics: ನನಗೆ ಮುಸ್ಲಿಮರ ಮತ ಬೇಡ: ಬಿಜೆಪಿ ಶಾಸಕ ಹರೀಶ್‌ ಪೂಂಜ

By Girish Goudar  |  First Published May 17, 2022, 10:12 AM IST

*  ನನಗೆ ಹಿಂದುಗಳ ಮತಗಳಷ್ಟೇ ಸಾಕು
*  ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧಿಸುತ್ತೇನೆ
*  ಆಗ ತಾಕತ್ತಿನಿಂದ ಹೇಳ್ತೇನೆ, ನನಗೆ ಮುಸ್ಲಿಮರ ಮತಗಳು ಬೇಡ ಅಂತ: ಹರೀಶ್‌ ಪೂಂಜ
 


ಬೆಳ್ತಂಗಡಿ(ಮೇ.17):  ಮುಂಬರುವ ಚುನಾವಣೆಗೆ(Karnataka Assembly Election) ನನ್ನನ್ನು ಮತ್ತೆ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ನನಗೆ ಕೇವಲ ಹಿಂದುಗಳ ಓಟು ಸಾಕು ಎಂದು ಶಾಸಕ ಹರೀಶ್‌ ಪೂಂಜ(Harish Poonja) ಬಹಿರಂಗವಾಗಿ ಹೇಳಿದ್ದಾರೆ.

ತಾಲೂಕಿನ ಸಾವ್ಯ ಗುಜ್ಜೊಟ್ಟು ಎಂಬಲ್ಲಿ ಮೇ 14ರಂದು ಶುಭೋದಯ ಯುವಕ ಮಂಡಲದ ವತಿಯಿಂದ ನಡೆದ ಶನಿಪೂಜೆಯ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ತುಳುವಿನಲ್ಲಿ ಅವರಾಡಿದ ಮಾತುಗಳು ಈಗ ಜಾಲತಾಣಗಳಲ್ಲಿ ವೈರಲ್‌ ಆಗಿಲೆ.

Tap to resize

Latest Videos

Monsoon Rain ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ, ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್!

ನನಗೆ ಮುಸ್ಲಿಮರ(Muslim) ಮತಗಳು(Votes) ಬೇಡ, ಹಿಂದುಗಳ(Hindu) ಮತಗಳಷ್ಟೇ ಸಾಕು. ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧಿಸುತ್ತೇನೆ. ಆದರೆ ಆಗ ತಾಕತ್ತಿನಿಂದ ಹೇಳ್ತೇನೆ, ನನಗೆ ಮುಸ್ಲಿಮರ ಮತಗಳು ಬೇಡ. ನನಗೆ ಕೇವಲ ಹಿಂದೂಗಳ ಓಟು ಅಷ್ಟೇ ಸಾಕು ಎಂದು ಅವರು ಹೇಳಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ(Sri Ram Mandir) ಆಗಬೇಕು. ಕಾಶಿಯಲ್ಲಿ ವಿಶ್ವನಾಥ ದೇವರ ಮಂದಿರ ನಿರ್ಮಾಣ ಆಗಬೇಕು. ದತ್ತ ಪೀಠದಲ್ಲಿ ದತ್ತಾತ್ರೇಯರ ಪೀಠ ನಿರ್ಮಾಣ ಆಗಬೇಕು. ಹೀಗಾಗಿ ಬಹಳ ಧೈರ್ಯದಿಂದ ಹೇಳ್ತೇನೆ, ನನಗೆ ಮುಸ್ಲಿಮರ ಮತಗಳು ಬೇಡ ಎಂದು ಮಾತನಾಡಿದ್ದಾರೆ. ಧಾರ್ಮಿಕ ಸಭೆಯಲ್ಲಿ ವಾಗ್ಮಿ ಚೈತ್ರಾ ಕುಂದಾಪುರ ಮತ್ತಿತರರು ಇದ್ದರು.

ಕೆಂಪು ಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ದ: ಶಾಸಕ ಹರೀಶ್ ಪೂಂಜಾ

ದಕ್ಷಿಣ ಕನ್ನಡ: ಮುಂದೊಂದು ದಿನ ದೆಹಲಿಯ ಕೆಂಪುಕೋಟೆಯ ಮೇಲೆ ಭಗವಾ ಧ್ವಜ (ಕೇಸರಿ) ಹಾರಿಸುತ್ತೇವೆ ಎಂದಿರುವ ಹಿರಿಯ ಬಿಜೆಪಿ ಮುಖಂಡ, ಗ್ರಾಮೀಣಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಸಚಿವ ಈಶ್ವರಪ್ಪ ಅವ​ರ ಹೇಳಿಕೆಯನ್ನು ಖಂಡಿಸಿ ಅವರನ್ನು ವಜಾಗೊಳಿಸುವಂತೆ  ಕಾಂಗ್ರೆಸ್‌ ಆಗ್ರಹಿಸಿತ್ತು. ಸಚಿವ ಈಶ್ವರಪ್ಪ ಹೇಳಿಕೆ ವಿವಾದ ಇನ್ನು ಹಚ್ಚಹಸಿರಾಗಿರುವಾಗಲೇ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. 

ಬಿಹಾರದಿಂದ ರಾಜ್ಯಸಭೆಗೆ ಕನ್ನಡಿಗ ಅನಿಲ್ ಹೆಗ್ಡೆಗೆ ಟಿಕೆಟ್ ನೀಡಿದ ಜೆಡಿಯು

ಮಾ.01 ರಂದು ಮಾತನಾಡಿದ್ದ ಅವರು, ಶಿವಮೊಗ್ಗದ ಹರ್ಷ ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಮಾತಾನಡಿದ ಹರೀಶ್‌ ಪೂಂಜಾ "ಕಾಂಗ್ರೆಸ್ ಷಡ್ಯಂತ್ರ, ಪ್ರೇರಣೆ ಮತ್ತು ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಕೆಂಪುಕೋಟೆ ಮೇಲೆ ಭಗದ್ವಜ ಹಾರಿಸ್ತೀವಿ ಅಂತ ಈಶ್ವರಪ್ಪ ಹೇಳಿದ್ರು ಅನ್ನೋ ಕಾರಣಕ್ಕೆ ಅಧಿವೇಶನ ಮೊಟಕುಗೊಳಿಸಿದ್ರು. ಆದ್ರೆ ಬೆಳ್ತಂಗಡಿಯ ಈ ಸಭೆಯಲ್ಲಿ ಬೆಳ್ತಂಗಡಿ ಶಾಸಕನಾಗಿ ನಾನು ಹೇಳ್ತೀನಿ, ಕೆಂಪು ಕೋಟೆಯ ಮೇಲೆ ಭಗವದ್ವಜ ಹಾರಿಸಿಯೇ ಸಿದ್ದ ಈ ಹಿಂದೂ ಸಮಾಜ" ಎಂದು ಹೇಳಿದ್ದರು. ತುಳು ಭಾಷೆಯಲ್ಲಿ ಹರೀಶ್ ಪೂಂಜಾ ಮಾಡಿದ ಭಾಷಣದ ತುಣುಕು ಭಾರೀ ವೈರಲ್ ಆಗಿತ್ತು. 

"ಕೆಂಪುಕೋಟೆಯ ಮೇಲೆ ಭಗವಧ್ವಜ ಹಾರಿಸೋದು ರಾಷ್ಟ್ರಧ್ವಜದ ಕೆಳಗೆ. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಕೆಳಗೆ ಭಗವಾಧ್ಬಜ ಹಾರಿಸೋದನ್ನ ಯಾವ ಪಕ್ಷ ದಿಂದಲೂ ತಪ್ಪಿಸೋದಕ್ಕೆ ಸಾಧ್ಯವೇ ಇಲ್ಲ. ಇದು ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಮಾಜದ ಸಂಕಲ್ಪ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಾಲಗಂಗಾಧರ ತಿಲಕರು ಭಗವಧ್ಬಜ ಎದುರಿಟ್ಟು ಹೋರಾಟ ಮಾಡಿದ್ರು. ಅದಕ್ಕೂ ಮೊದಲು ಹಿಂದೂ ಸಮಾಜದ ಶಕ್ತಿಯಾಗಿದ್ದ ಶಿವಾಜಿ ಮಹಾರಾಜರ ಶಕ್ತಿಯೂ ಭಗವಧ್ವಜ" ಎಂದು ಪೂಂಜಾ ಹೇಳಿದ್ದರು. 
 

click me!