ಜಾರ್ಖಂಡ್, ಮಹಾರಾಷ್ಟ್ರ ಚುನಾವಣೆ ಬರುತ್ತಿದೆ. ರಾಜ್ಯದಲ್ಲಿ ಬೈ ಎಲೆಕ್ಷನ್ ಕೂಡ ನಡೆಯುತ್ತಿದೆ. ಈ ವಿಚಾರವನ್ನ ಚುನಾವಣೆ ಸಮಯದಲ್ಲಿ ಮೋದಿ, ಅಮಿತ್ ಶಾ ಪ್ರಸ್ತಾಪ ಮಾಡುತ್ತಾರೆ. ಕರ್ನಾಟಕದಲ್ಲಿ ಸ್ವತಃ ಸಿಎಂ ಅವರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಂಬಿಸಲು ಮುಂದಾಗುತ್ತಾರೆ. ತನಿಖಾ ಸಂಸ್ಥೆಗಳನ್ನ ಬಿಜೆಪಿ ನಾಯಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್
ಮೈಸೂರು(ಅ.18): ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ನಾನು ಇಡಿ ಇಲಾಖೆಗೆ ದೂರು ನೀಡಿದ್ದೆ, ಯಾವ ರೀತಿ ದಾಖಲೆಗಳನ್ನ ನಕಲು ಮಾಡಿದ್ದಾರೆ ಎಂಬ ಮಾಹಿತಿ ನೀಡಿದ್ದೆ. ಈ ವಿಚಾರವಾಗಿ ಇಡಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿರಬಹುದು. ಇಡಿ ತನಿಖೆಗೆ ನಾವು ಅಡ್ಡಿಪಡಿಸಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಲಕ್ಷ್ಮಣ್ ಅವರು, ಜಾರ್ಖಂಡ್, ಮಹಾರಾಷ್ಟ್ರ ಚುನಾವಣೆ ಬರುತ್ತಿದೆ. ರಾಜ್ಯದಲ್ಲಿ ಬೈ ಎಲೆಕ್ಷನ್ ಕೂಡ ನಡೆಯುತ್ತಿದೆ. ಈ ವಿಚಾರವನ್ನ ಚುನಾವಣೆ ಸಮಯದಲ್ಲಿ ಮೋದಿ, ಅಮಿತ್ ಶಾ ಪ್ರಸ್ತಾಪ ಮಾಡುತ್ತಾರೆ. ಕರ್ನಾಟಕದಲ್ಲಿ ಸ್ವತಃ ಸಿಎಂ ಅವರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಂಬಿಸಲು ಮುಂದಾಗುತ್ತಾರೆ. ತನಿಖಾ ಸಂಸ್ಥೆಗಳನ್ನ ಬಿಜೆಪಿ ನಾಯಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
undefined
ಮುಡಾದಲ್ಲಿ 4 ಸಾವಿರ ಕೋಟಿ ಅಕ್ರಮವಾಗಿದೆ ಎಂದಿದ್ದಕ್ಕೆ ಇಡಿ ದಾಳಿ ಆಗಿದೆ: ಆರ್. ಅಶೋಕ್!
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು 25 ವರ್ಷದ ಹಳೆಯ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಆ ಸೈಟ್ ನಲ್ಲಿ ಮನೆ ಕಟ್ಟಿ ಮನೆ ಮಾರಾಟ ಕೂಡ ಮಾಡಿದ್ದಾರೆ. ಆರ್ ಟಿಐ ಕಾರ್ಯಕರ್ತ ಗಂಗರಾಜು ಈ ವಿಚಾರವಾಗಿ ಕೋರ್ಟ್ ಮೊರೆ ಹೋಗಿದ್ರು. ಕೋರ್ಟ್ ಕೂಡ ಛೀಮಾರಿ ಹಾಕಿ ವಾಪಸ್ ಕಳುಹಿಸಿದೆ. ಈಗ ವಿಚಾರವನ್ನ ಕುಮಾರಸ್ವಾಮಿ ಮಾತನಾಡಿದ್ದಾರೆ. ಕುಮಾರಸ್ವಾಮಿ ಇಂತಹ ಹೇಳಿಕೆಗಳನ್ನ ನೀಡೋದು ಬಿಡಬೇಕು ಎಂದು ಲಕ್ಷ್ಮಣ್ ಹೇಳಿದ್ದಾರೆ.
ಮುಡಾ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷರ ನೇಮಕ ವಿಚಾರದ ಬಗ್ಗೆ ಮಾತನಾಡಿದ ಎಂ. ಲಕ್ಷ್ಮಣ್ ಅವರು, ನನಗೂ ಮುಡಾ ಅಧ್ಯಕ್ಷ ಸ್ಥಾನ ಬೇಡ. ನಿಗಮ ಮಂಡಳಿ ಸದಸ್ಯರ ನೇಮಕ ಪಟ್ಟಿ ರೆಡಿ ಇದೆ. ಇದರ ಜೊತೆ ಅಧ್ಯಕ್ಷರನ್ನ ಕೂಡ ನೇಮಕ ಮಾಡಲಾಗುತ್ತದೆ. ಸದ್ಯ ಮೂರ್ನಾಲ್ಕು ತಿಂಗಳ ಕಾಲ ಮುಡಾಗೆ ಅಧಿಕಾರೇತರನ್ನ ನೇಮಕ ಮಾಡೋದು. ಹಿರಿಯ ಅನುಭವಿ ಅಧಿಕಾರಿಯನ್ನ ಮುಡಾಗೆ ನೇಮಕ ಮಾಡಲಿ. ಈ ಬಗ್ಗೆ ಸಿಎಂ ಬಳಿ ನಾನು ಮನವಿ ಮಾಡಿದ್ದೇನೆ. ಬಿಡಿಎ ಮಾದರಿಯಲ್ಲೇ ಮುಡಾದಲ್ಲೂ ಅಧಿಕಾರೇತರ ಸದಸ್ಯರನ್ನ ನೇಮಕ ಮಾಡೋದು ಬೇಡ. ಮುಡಾ ಹಗರಣ ಸತ್ಯಾಸತ್ಯತೆ ಹೊರ ಬರಲಿ. ಆ ಬಳಿಕ ಅಧ್ಯಕ್ಷರ ನೇಮಕ ಆಗಲಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.