ಪ್ರೀತ್ಸೆ ಅಂತಾ ಪ್ರಾಣ ತಿಂದ ಪ್ರೇಮಿ: ಪ್ರೀತ್ಸೋಕ್ ಇಷ್ಟವಿಲ್ಲದೇ ಪ್ರಾಣಬಿಟ್ಟ ಯುವತಿ ಪ್ರೇಮಾ!

By Sathish Kumar KH  |  First Published Oct 18, 2024, 1:45 PM IST

ಚಿತ್ರದುರ್ಗದಲ್ಲಿ ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಚಿತ್ರದುರ್ಗ (ಅ.18): ಅಪ್ಪ ಅಮ್ಮ ಪ್ರೀತಿಯಿಂದ ಬೆಳೆಸಿ ಮಗಳಿಗೆ ಏನೂ ಕೊರತೆ ಆಗಬಾರದು ಎಂದು ಹೊಸ ಸ್ಮಾರ್ಟ್ ಫೋನ್ ಕೊಡಿಸಿ, ಮಗಳು ಚೆನ್ನಾಗಿ ಓದಲಿ ಎಂದು ಬಿ.ಎಸ್‌ಸಿ ಪದವಿ ಅಭ್ಯಾಸಕ್ಕೆ ಮಗಳನ್ನು ಕಾಲೇಜಿಗೆ ಕಳಿಸಿದ್ದಾರೆ. ಆದರೆ, ಇತ್ತ ಮಗಳು ಅದ್ಯಾರೋ ರೋಡ್ ರೋಮಿಯೋ ಒಬ್ಬ ಪ್ರೀತಿ ಮಾಡು ಅಂತಾ ಹಿಂದೆ ಬಿದ್ದಿರುವುದಕ್ಕೆ ಬೇಸತ್ತು ಪ್ರಾಣವನ್ನೇ ಬಿಟ್ಟಿರುವ ದುರ್ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಹೌದು, ಚಿತ್ರದುರ್ಗದಲ್ಲಿ ಕಾಲೇಜು ಕಟ್ಟಡ ಮೇಲಿಂದ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಚಳ್ಳಕೆರೆ ಮೂಲದ ಪ್ರೇಮಾ (18) ಮೃತ ವಿದ್ಯಾರ್ಥಿನಿ ಆಗಿದ್ದಾಳೆ. ಈ ಘಟನೆ ಚಿತ್ರದುರ್ಗದ ಡಾನ್ ಬೊಸ್ಕೋ ಕಾಲೇಜಿನಲ್ಲಿ ನಡೆದಿದೆ. ಇನ್ನು ಮೃತ ವಿದ್ಯಾರ್ಥಿನಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್‌ಸಿ ಪದವಿ ಅಭ್ಯಾಸ ಮಾಡುತ್ತದ್ದಳು. ಆದರೆ, ಅವರ ಕುಟುಂಬ ಸದಸ್ಯರಿಗೆ ವಿದ್ಯಾರ್ಥಿನಿ ಪ್ರೇಮಾ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಫ್ರೆಂಡ್ ಅಂತಾ ಮನೆಗೆ ಕರ್ಕೊಂಡು ಬಂದ್ರೆ ಅಮ್ಮನ್ನ ಬುಟ್ಟಿಗೆ ಹಾಕೊಂಡ: ಅಪ್ಪ ಇಬ್ಬರ ಕಥೆ ಮುಗಿಸಿದ!

ಮೃತ ಕಾಲೇಜು ಯುವತಿ ಪ್ರೇಮಾಗೆ ತರುಣ್ ಎಂಬ ಯುವಕ ತನ್ನನ್ನು ಪ್ರೀತಿ ಮಾಡುವಂತೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಮಾಡಿದ್ದಾರೆ. ಪ್ರೀತ್ಸೇ ಪ್ರೀತ್ಸೆ ಎಂದು ಪೀಡಿಸಿದ ಕಾರಣಕ್ಕೆ ಯುವತಿ ಪ್ರೇಮಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಯುವತಿ ಜತೆ ತರುಣ್ ಎಂಬ ಯುವಕ ವಾಟ್ಸಪ್ ಚಾಟ್ ಮಾಡಿರುವ ಮಾಹಿತಿಯನ್ನು ಆಕೆಯ ಪೋಷಕರು ಪೊಲೀಸರಿಗೆ ಹಂಚಿಕೊಂಡಿದ್ದಾರೆ. ಈ ಯುವಕನೇ ನಮ್ಮ ಮಗಳು ಪ್ರೇಮಾಳಿಗೆ ಪ್ರೀತಿಸುವಂತೆ ಬೆನ್ನು ಬಿದ್ದಿದ್ದಾನೆ ಎಂದು ಆರೋಪಿಸಿದ್ದಾರೆ.

click me!