ನಾನು ರಂಗನಾಥ ಸ್ವಾಮಿ ಆಣೆಗೂ ನಾನು ಇಂತಹ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ಮಾಜಿ ಶಾಸಕರೋರ್ವರು ಹೇಳಿದ್ದಾರೆ.
'ಶ್ರೀರಂಗನಾಥನಾಣೆಗೂ ನಾನಿಂತ ಕೆಲಸ ಮಾಡಿಲ್ಲ : ಬಿಜೆಪಿಯಲ್ಲಿದ್ರು ಅವರನ್ನ ಬೆಂಬಲಿಸದ್ದೆ'
ಮಾಗಡಿ (ಡಿ.10): ಶ್ರೀರಂಗನಾಥಸ್ವಾಮಿ ಮೇಲೆ ಅಣೆಯಿಟ್ಟು ಹೇಳುತ್ತೇನೆ ಹೇಮಾವತಿ ಯೋಜನೆಗೆ ನಾನು ಅಡ್ಡಿಪಡಿಸಿಲ್ಲ ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಸ್ಪಷ್ಟಪಡಿಸಿದರು.
ತಾಲೂಕಿನ ಮಾಡಬಾಳ್ ಗ್ರಾಮದ ಬೀರೇಶ್ವರ ದೇವಾಲಯದ ಬಳಿ ಏರ್ಪಡಿಸಿದ್ದ ಗ್ರಾಪಂ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೇಮಾವತಿ ಯಾವ ಮೂಲದಿಂದ ಹುಟ್ಟುತ್ತದೆ. ಶ್ರೀರಂಗ ಏತ ನೀರಾವರಿ ಎಂಬು ಹೆಸರು ಹೇಗೆ ಬಂದಿತು ಎಂಬುದನ್ನು ಶಾಸಕರು ತಿಳಿದುಕೊಳ್ಳಬೇಕು. ಹೇಮಾವತಿ ಯೋಜನೆಯ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ಹೇಮಾವತಿ ಯೋಜನೆಯ ಭೂಸ್ವಾಧಿನಕ್ಕೆ ಮಾಜಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆ ಎಂಬ ಶಾಸಕರ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.
undefined
ಆಡಳಿತ ಪಕ್ಷದ ಶಾಸಕರಾಗಿದ್ದಾಗ ಮಾತ್ರ ಅಭಿವೃದ್ಧಿಪಡಿಸಲು ಸಾಧ್ಯ. ವಿರೋಧ ಪಕ್ಷದಲ್ಲಿರುವ ಶಾಸಕ ಒಂದು ಕ್ಯಾಟಗರಿಯನ್ನು ಸಹ ಮಾಡಿಸಿಕೊಂಡು ಬರಲು ಸಾಧ್ಯವಾಗುವುದಿಲ್ಲ. ಅಧಿಕಾರಿಗಳು ಸಹ ನಮ್ಮ ಮಾತನ್ನು ಕೇಳುವುದಿಲ್ಲ. ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಕಾರಣದಿಂದ ನಾನು ಕಾಂಗ್ರೆಸ್ ಪಕ್ಷ ಸೇರಿದೆ ಎಂದರು.
ಸತ್ಯ ಒಪ್ಪಿಕೊಂಡ ಕುಮಾರಸ್ವಾಮಿ, ಆದ್ರೂ ರೈತ ನಾಯಕರ ವಿರುದ್ಧ ಕೆಂಡಾಮಂಡಲ ...
ಎಚ್.ಡಿ. ದೇವೇಗೌಡರು ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಮಯದಲ್ಲಿ ತಾವು ಬಿಜೆಪಿ ಪಕ್ಷದಲ್ಲಿದ್ದರೂ ಸಹ ಅವರನ್ನು ಬೆಂಬಲಿಸಿದ್ದೆ. ಆಗ ಮಾಗಡಿ ಕ್ಷೇತ್ರದಲ್ಲಿ 12 ಸಾವಿರಕ್ಕೂ ಹೆಚ್ಚು ಮತಗಳು ದೇವೇಗೌಡರಿಗೆ ದೊರೆತಿದ್ದವು. ತಾವು ಬಿಜೆಪಿಯಲ್ಲಿಯೇ ಇದ್ದಿದ್ದರೆ ಆರ್ .ಅಶೋಕ್ ಅವರಿಗಿಂತ ಮೇಲಿನ ಸ್ಥಾನದಲ್ಲಿ ಇರುತ್ತಿದ್ದೆ. ದೇವೇಗೌಡರಿಗೆ ಸಹಾಯ ಮಾಡಲು ಹೋಗಿ ನಾನು ಈ ಮಟ್ಟದಲ್ಲಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ರಸ್ತೆ, ಹೈಸ್ಕೂಲ್, ಕಾಲೇಜು, ಕೆಎಸ್‌ಆರ್ ಟಿಸಿ ಡಿಪೋ, ಬಸ್ ಸ್ಟಾಂಡ್, ಅಗ್ನಿಶಾಮಕದಳ ಇತ್ಯಾದಿಗಳನ್ನು ಎಚ್.ಡಿ.ಕುಮಾರಸ್ವಾಮಿ ಅವರು 20 ತಿಂಗಳು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಾನು ಮಾಡಿಸಿದೆ. ಚತುಷ್ಪಥ ರಸ್ತೆ ಯೋಜನೆಯನ್ನು ತಾವು ತಂದಿದ್ದು ಎಂದು ಶಾಸಕರು ಹೇಳಿಕೆ ನೀಡುತ್ತಾರೆ. ಈ ಕಾಮಗಾರಿ ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೀಡಿರುವ ಸಾಲದ ಹಣದಿಂದ ನಡೆಯುತ್ತಿದೆ. ಯಾರೇ ಶಾಸಕರಾದರೂ ಸಹ ಈ ಕಾಮಗಾರಿಗಳು ನಡೆಯುತ್ತಿರುತ್ತವೆ. ಈ ರಸ್ತೆಯನ್ನು ಚತುಷ್ಪಥ ಮಾಡಬೇಕು ಎಂದು ಎಚ್.ಎಂ .ರೇವಣ್ಣ ಅವರು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದು ಸಮಗ್ರ ಯೋಜನಾ ವರದಿಯನ್ನು ತಯಾರಿಸಿದ್ದರು. ಚತುಷ್ಪಥ ರಸ್ತೆಯನ್ನು ತಂದವರು ಎಚ್.ಎಂ.ರೇವಣ್ಣ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ವಿಜಯ್ ಕುಮಾರ್, ತಾಪಂ ಅಧ್ಯಕ್ಷ ನಾರಾಯಣ್ಣಪ್ಪ, ಸದಸ್ಯ ವೆಂಕಟೇಶ್, ಪುರಸಭಾ ಸದಸ್ಯ ಪುರುಷೋತ್ತಮ…, ರಂಗಸ್ವಾಮಿ, ಚನ್ನರಾಯಪ್ಪ, ಸಿದ್ದಪ್ಪ, ಮೂರ್ತಿನಾಯಕ್ ಮತ್ತಿತರರು ಉಪಸ್ಥಿತರಿದ್ದರು.