* ತಾಕದ್ದಿದ್ದರೆ ಬಿಜೆಪಿಯವರು ಚರ್ಚೆಗೆ ಬರಲಿ
* ರಾಮಾನುಜಮ್ ಪ್ರತಿಮೆ ಸಹ ಮೇಡ್ ಇನ್ ಚೀನಾದ್ದು
* ಮೋದಿ ಆಡಳಿತಕ್ಕೆ ಬಂದ ಮೇಲೆ ವಿದೇಶದಿಂದ ಆಮದು ಪ್ರಕ್ರಿಯೆ ದುಪ್ಪಟ್ಟು
ಕುಕನೂರು(ಫೆ.23): ತಾಲೂಕಿನ ಭಾನಾಪುರ ಬಳಿ ನಿರ್ಮಾಣವಾಗುತ್ತಿರುವ ಗೊಂಬೆ ಫ್ಯಾಕ್ಟರಿಯನ್ನು(Toy Factory) ಮಂಜೂರು ಮಾಡಿಸಿದ್ದು ನಾನೇ. ಅದರ ಬಗ್ಗೆ ಯಾವುದೇ ಸ್ಪಷ್ಟನೆ ಬೇಕಾದರೂ ನೀಡುತ್ತೇನೆ ಎಂದು ಮಂಜೂರಾತಿ ಪತ್ರ ತೋರಿಸಿ ಮಾಜಿ ಸಚಿವ ಬಸವರಾಜ ರಾಯರಡ್ಡಿ(Basavaraj Rayareddy) ಸ್ಪಷ್ಟನೆ ನೀಡಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್.ವಿ. ದೇಶಪಾಂಡೆ(RV Deshpande) ಅವರು ಸಿದ್ದರಾಮಯ್ಯ(Siddaramaiah) ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದಾಗ ಜಿಲ್ಲೆಗೆ ಎಸ್‌ಇಜೆಡ್ (Special Economic Zone)ಗೆ ಮನವಿ ಮಾಡಿದ್ದೆ. ಆಗ ಅವರು ಕೆಲವು ಇಂಡಸ್ಟ್ರೀಯಗಳ ಸ್ಥಾಪನೆಗೆ ಪ್ರಸ್ತಾವನೆ ಬಂದಾಗ, ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ನನಗೆ ನಿಮ್ಮ ಜಿಲ್ಲೆಗೆ ಗೊಂಬೆ ಫ್ಯಾಕ್ಟರಿ ಮಾಡಿಕೊಳ್ತಿಯಾ ಎಂದು ಕೇಳಿದ್ದರು. ನಾನು ಆಗಲಿ ಎಂದು ಎಸ್‌ಇಜೆಡ್ ಅನುಮೋದನೆ ಪಡೆದಿದೆ. ಗೊಂಬೆ ಫ್ಯಾಕ್ಟರಿ ಸ್ಥಾಪನೆಗೆ ಕಾರ್ಖಾನೆಯ ಎಂಡಿ ಆನಂದ ಮೆಳ್ಳಿಕೇರಿ ಮುಂದೆ ಬಂದರು ಎಂದು ವಿವರಿಸಿದರು.
ರೈತರಿಗೆ ಸಿಹಿ ಸುದ್ದಿ, ಈ ಬಾರಿ ಬಜೆಟ್‌ನಲ್ಲಿ ನವಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಹಣ
ಗೊಂಬೆ ಫ್ಯಾಕ್ಟರಿಗೆ ಜಾಗ ರೈತರಿಂದ(Farmers) ಕೊಡಲು ಒಪ್ಪಿಸಿ ಭಾನಾಪುರ ಬಳಿ ಕಾರ್ಖಾನೆ ಆರಂಭಿಸಲು ಸೂಚಿಸಿದ್ದೆ. ಕ್ಷೇತ್ರದ ಯುವಕರಿಗೆ ಉದ್ಯೋಗ(Job) ಸಿಗುವ ಭರವಸೆ ಹಾಗೂ ಜಿಲ್ಲೆ, ಕ್ಷೇತ್ರ ಇಂಡಸ್ಟ್ರೀಯಲ್ ಅಭಿವೃದ್ಧಿ(Industrial Development) ಆಗಲು ಗೊಂಬೆ ಫ್ಯಾಕ್ಟರಿ ಮಂಜೂರಾತಿ ಮಾಡಿಸಿದ್ದೇನೆ. ರೈಲ್ವೆ, ಹೈವೇ ಆದ ಕಾರಣ ಗೊಂಬೆ ಫ್ಯಾಕ್ಟರಿಯವರು ಇಲ್ಲಿ ಬರಲು ಒಪ್ಪಿದರು. ಇದನ್ನು ನನ್ನ ಆಡಳಿತದ ಅವಧಿಯಲ್ಲಿ ಮಾಡಿಸಿದ್ದೇನೆ. ಆದರೆ ಸಚಿವ ಹಾಲಪ್ಪ ಆಚಾರ್ ಹಾಗೂ ಬಿಜೆಪಿಯವರು ಇವೆಲ್ಲಾ ಅರಿವಿಲ್ಲದೆ ಸ್ವತಃ ತಾವೇ ಗೊಂಬೆ ಫ್ಯಾಕ್ಟರಿ ಮಂಜೂರು ಮಾಡಿಸಿದ್ದೇವೆ. ಉದ್ಘಾಟನೆಗೆ ಪಿಎಂ ನರೇಂದ್ರ ಮೋದಿ(Narendra Modi) ಅವರನ್ನು ಕರೆಸುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಖಾಸಗಿ ಕಂಪನಿ ಉದ್ಘಾಟನೆಗೆ ಪಿಎಂ ಮೋದಿ ಬಂದರೆ ಅವರನ್ನು ಸ್ವಾಗತಿಸುವ ಮೊದಲನೇ ವ್ಯಕ್ತಿ ನಾನೇ ಎಂದರು.
ಹಗುರ ಮಾತು ಸಲ್ಲದು:
ಎಂಎಲ್‌ಸಿ ಆಗಿ, ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವ ಹಾಲಪ್ಪ ಆಚಾರ್(Halappa Achar) ಅಧಿಕಾರಕ್ಕೆ ಬಂದ ಮೇಲೆ ತೂಕದ ಮಾತನಾಡಬೇಕು. ಅಭಿವೃದ್ಧಿ ಕಾರ್ಯ ಮಾಡಿದವರನ್ನು ಸ್ಮರಿಸಬೇಕು. ಲೇವಡಿ ಮಾತುಗಳು ಸಲ್ಲದು. ಆಸ್ಪತ್ರೆ, ಎಂಜಿನಿಯರ್ ಕಾಲೇಜು ಕಟ್ಟಿಸಿದ್ದೇನೆ. ಅದಕ್ಕೆ ಬೇಕಾದ ಅಗತ್ಯ ಸೌಲಭ್ಯ ಒದಗಿಸಲು ಆಗದೆ ಅಧಿಕಾರದಲ್ಲಿ ಇರದ ನಮ್ಮಗಳ ಮೇಲೆ ‘ಸ್ಟಾಫ್, ಫರ್ನಿಚರ್ ಕೊಟ್ಟಿದ್ದಾರೆನ್ರೀ ಅವರು’ ಎಂದು ಲೇವಡಿ ಮಾಡುವುದು ಎಷ್ಟು ಸಮಂಜಸ ? ಎಂದು ಪ್ರಶ್ನಿಸಿದರು.
ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಆದರೆ ಬರೀ 2000 ಜನರಿಗೂ ಉದ್ಯೋಗ ನೀಡಲು ಆಗಲಿಲ್ಲ. ಮೋದಿ ಆಡಳಿತಕ್ಕೆ ಬಂದ ಮೇಲೆ ವಿದೇಶದಿಂದ ಆಮದು ಪ್ರಕ್ರಿಯೆ ದುಪ್ಪಟ್ಟು ಆಗಿದೆ. ಇತ್ತೀಚೆಗೆ ಪ್ರತಿಷ್ಠಾಪಿಸಿದ ರಾಮಾನುಜಮ್ ಪ್ರತಿಮೆ ಸಹ ಮೇಡ್ ಇನ್ ಚೀನಾದ್ದು ಎಂದು ಕುಟುಕಿದರು.
'ಸಿಎಂ ಬೊಮ್ಮಾಯಿ ಜಾತಿವಾದಿಗಳ ಶಿಷ್ಯ'
ಸಿಎಂ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ(Basavaraj Bommai) ರಾಷ್ಟ್ರೀಯವಾದಿ ಎಂ.ಎನ್. ರಾಯ್ ಅವರ ಶಿಷ್ಯರಾಗಿದ್ದರು. ಆದರೆ ಅವರ ಮಗ ಬಸವರಾಜ ಬೊಮ್ಮಾಯಿ(Basavaraj Rayareddy) ಜಾತಿವಾದಿಗಳ ಶಿಷ್ಯರಾಗಿದ್ದಾರೆ ಎಂದು ಟೀಕಿಸಿದರು.
Government of Karnataka: ಕೋವಿಡ್ ಸಂಕಷ್ಟದಲ್ಲೂ 31 ಅಪರ ಜಿಲ್ಲಾಧಿಕಾರಿಗಳಿಗೆ ಹೊಸ ಕಾರು!
ಪಟ್ಟಣದಲ್ಲಿ ಸೋಮವಾರ ಸಚಿವ ಈಶ್ವರಪ್ಪ(KS Eshwarappa) ಕೇಸರಿ ಧ್ವಜ(Saffron Flag) ಹೇಳಿಕೆ ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್(Congress) ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ(Protest) ವೇಳೆ ಮಾತನಾಡಿದರು.
ಬಿಜೆಪಿಯು ಜಾತಿ, ಮತ, ಧರ್ಮ ಎಂದು ಇಡೀ ರಾಷ್ಟ್ರದ ಏಕತೆ ಹಾಳು ಮಾಡುತ್ತಿದೆ. ಕೇಸರಿ ಧ್ವಜ ಕೆಂಪು ಕೋಟೆ ಮೇಲೆ ಹಾರಿಸುತ್ತೇವೆ ಎನ್ನುವ ಈಶ್ವರಪ್ಪ ಅವರ ಹೇಳಿಕೆ ಏನಿದು? ಸಂವಿಧಾನ, ರಾಷ್ಟ್ರಧ್ವಜ(National Flag), ರಾಷ್ಟ್ರೀಯತೆ(Nationality) ಮೇಲೆ ಪ್ರಮಾಣವಚನ ಸ್ವೀಕರಿಸಿ ಸಚಿವರಾದ ಅವರು ಇಂತಹ ಮಾತುಗಳನ್ನಾಡಬಾರದು ಎಂದರು.