* ಸದ್ಯ 5,633 ಸೋಂಕಿತರಿಗೆ ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆ
* ಶೇ.1.7ರಷ್ಟು ಪಾಸಿಟಿವಿಟಿ ದರ ದಾಖಲು
* 1000ಕ್ಕಿಂತ ಕೆಳಗಿಳಿದ ಕೋವಿಡ್: 679 ಕೇಸ್
ಬೆಂಗಳೂರು(ಫೆ.23): ರಾಜಧಾನಿಯಲ್ಲಿ ಸೋಮವಾರ 346 ಮಂದಿಗೆ ಕೊರೋನಾ(Coronavirus) ಸೋಂಕು ತಗುಲಿದ್ದು, 8 ಜನರು ಸಾವಿಗೀಡಾಗಿದ್ದಾರೆ(Death). 839 ಮಂದಿ ಗುಣಮುಖರಾಗಿದ್ದಾರೆ. ಸದ್ಯ 5,633 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಮವಾರ 20 ಸಾವಿರ ಪರೀಕ್ಷೆ ನಡೆದಿದ್ದು, ಶೇ.1.7ರಷ್ಟು ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು(Covid Test) ಆರು ಸಾವಿರ ಇಳಿಕೆಯಾಗಿದ್ದು, ಹೊಸ ಪ್ರಕರಣಗಳ ಸಂಖ್ಯೆ 139 ಕಡಿಮೆಯಾಗಿವೆ(ಭಾನುವಾರ 485 ಕೇಸ್).
ಮೃತರ 8 ಜನರ ಪೈಕಿ ಒಬ್ಬರು 59 ವರ್ಷದವರಾಗಿದ್ದು, ಉಳಿದ ಏಳು ಸೋಂಕಿತರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಐದು ಸಾವಿರ ಸಕ್ರಿಯ ಸೋಂಕಿತರಲ್ಲಿ 316 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ಪಡೆಯುತ್ತಿದ್ದು, ಈ ಪೈಕಿ 112 ಸೋಂಕಿತರು ತುರ್ತು ನಿಗಾ ಘಟಕದಲ್ಲಿದ್ದಾರೆ. ಉಳಿದ 4 ಸಾವಿರಕ್ಕೂ ಅಧಿಕ ಸೋಂಕಿತರು ಮನೆ ಆರೈಕೆಯಲ್ಲಿದ್ದಾರೆ.
Coronavirus: ಕೊರೋನಾ ಎಲ್ಲ ನಿಯಮಗಳಿಗೆ ಗುಡ್ ಬೈ ಹೇಳಿದ ಇಂಗ್ಲೆಂಡ್
ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.76 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.53 ಲಕ್ಷಕ್ಕೆ, ಸಾವಿನ ಸಂಖ್ಯೆ 16,829ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಐದಕ್ಕಿಂತ ಕಡಿಮೆ ಕೊರೋನಾ ಪ್ರಕರಣವಿರುವ 2 ಸಕ್ರಿಯ ಕಂಟೈನ್ಮೆಂಟ್ ವಲಯ, ಐದಕ್ಕೂ ಹೆಚ್ಚು ಕೊರೋನಾ ಪ್ರಕರಣವಿರುವ 10 ಕ್ಲಸ್ಟರ್ ವಲಯಗಳಿವೆ ಎಂದು ಬಿಬಿಎಂಪಿ(BBMP) ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.
1000ಕ್ಕಿಂತ ಕೆಳಗಿಳಿದ ಕೋವಿಡ್: 679 ಕೇಸ್
ಬೆಂಗಳೂರು: ರಾಜ್ಯದಲ್ಲಿ(Karnataka) ಕೊರೋನಾ ಸೋಂಕಿನ ಪ್ರಕರಣಗಳು ವೇಗವಾಗಿ ಕಡಿಮೆಯಾಗುತ್ತಿದ್ದು, ಭಾನುವಾರ 679 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. 21 ಮಂದಿ ಮರಣವನ್ನಪ್ಪಿದ್ದಾರೆ. 1,932 ಮಂದಿ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಕೊನೆಯ ಬಾರಿ 2021ರ ಡಿ.31ರಂದು 832 ಪ್ರಕರಣ ದಾಖಲಾಗಿತ್ತು. ಇದೀಗ 51 ದಿನದ ನಂತರ ಮತ್ತೆ ದೈನಂದಿನ ಪ್ರಕರಣ ಮೂರಂಕಿಗೆ ಕುಸಿದಿದೆ. ಈ ಮಧ್ಯೆ ದೈನಂದಿನ ಕೋವಿಡ್ ಪರೀಕ್ಷೆಯಲ್ಲೂ ಇಳಿಕೆಯಾಗಿದ್ದು 52,505 ಪರೀಕ್ಷೆ ನಡೆದಿದೆ. ಬೆಂಗಳೂರು(Bengapluru) ನಗರದಲ್ಲಿ 346 ಪ್ರಕರಣ ವರದಿಯಾಗಿದೆ. ಶೇ.3.09 ಮರಣ ದರ ದಾಖಲಾಗಿದೆ. ರಾಜ್ಯದಲ್ಲಿ ಸೋಮವಾರ 1 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ.
ಕೋವಿಡ್ ಸೋಂಕಿತರು ಸ್ವಯಂ ಐಸೋಲೇಷನ್ ಆಗಬೇಕಿಲ್ಲ!
ಲಂಡನ್: ಕೋವಿಡ್ (Coronavirus) ಪರೀಕ್ಷೆಯಿಂದ ಯಾವುದೇ ಲಾಭವಿಲ್ಲ ಎಂದು ಇತ್ತೀಚೆಗೆ ಸ್ವೀಡನ್ ಸರ್ಕಾರ ಕೋವಿಡ್ ಪರೀಕ್ಷೆ ರದ್ದುಪಡಿಸಿದ್ದರೆ, ಇದೀಗ ಕೋವಿಡ್ ಸೋಂಕಿತರು ಸ್ವಯಂ ಐಸೋಲೇಷನ್‌ಗೆ ಒಳಗಾಗುವುದು ಕಡ್ಡಾಯವಲ್ಲ ಎಂಬ ನಿಯಮ ಜಾರಿಗೆ ಬ್ರಿಟನ್ (England) ಸರ್ಕಾರ ಮುಂದಾಗಿದೆ. ಜೊತೆಗೆ ಕೋವಿಡ್ ಪರೀಕ್ಷೆಯನ್ನೂ ಕೈಬಿಡುವ ಸುಳಿವು ನೀಡಿದೆ.
Covid Vaccine: ರಾಜ್ಯದಲ್ಲಿಂದು 10 ಕೋಟಿ ಡೋಸ್ ಲಸಿಕೆ ಮೈಲಿಗಲ್ಲು: ದಕ್ಷಿಣದಲ್ಲೇ ನಂ.1!
ಈ ಕುರಿತು ಹೇಳಿಕೆ ನೀಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ‘ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಎಲ್ಲಾ ಶಾಸನಾತ್ಮಕ ನಿರ್ಬಂಧ ತೆರವುಗೊಳಿಸುವ ನಿರ್ಧಾರವು, ಜನರಿಗೆ ತಮ್ಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕದೆಯೇ ಕೋವಿಡ್ ನಿಯಂತ್ರಣಕ್ಕೆ ಅನುವು ಮಾಡಿಕೊಡಲಿದೆ’ ಎಂದು ಹೇಳಿದ್ದಾರೆ.
ಈ ಕುರಿತು ಬ್ರಿಟನ್ ಸರ್ಕಾರ ಸೋಮವಾರ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದೆ ಎನ್ನಲಾಗಿದೆ. ಹೊಸ ನಿಯಮಗಳ ಅನ್ವಯ, ಯಾವುದೇ ಕೋವಿಡ್ ಸೋಂಕಿತ ವ್ಯಕ್ತಿ ಸ್ವಯಂ ಐಸೋಲೇಷನ್‌ಗೆ ಒಳಾಗಾಗದೇ ಇರುವುದು ಕಾನೂನು ಪ್ರಕಾರ ಅಪರಾಧವಾಗದು. ಅವರು ಬಯಸಿದಲ್ಲಿ ಮಾತ್ರವೇ ಐಸೋಲೇಷನ್‌ಗೆ ಒಳಗಾಗಬಹುದು. ಕೋವಿಡ್ ನಿರ್ಬಂಧಗಳ ಪಾಲನೆ ಕಾನೂನು ಬದ್ಧವಾಗಿರದೆ, ಕೇವಲ ಸಲಹಾ ರೂಪದಲ್ಲಿ ಮುಂದುವರೆಯಲಿದೆ. ಜೊತೆಗೆ ಕೋವಿಡ್ ಪರೀಕ್ಷೆಯನ್ನೂ ಸರ್ಕಾರ ಕೈಬಿಡುವ ಸಾಧ್ಯತೆ ಇದೆ.