ರಾಜಕಾರಣದ ಭಯ ನನಗಿಲ್ಲ: ಕೆಸಿಎನ್‌

By Kannadaprabha NewsFirst Published Dec 15, 2022, 5:39 AM IST
Highlights

ರಾಜಕಾರಣದ ಭಯ ನನಗಿಲ್ಲ. ಜನ ಆಶೀರ್ವಾದ ಮಾಡಿದರೆ ನನ್ನ ಜನಸೇವೆ ಮುಂದುವರಿಸುತ್ತೇನೆ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

 ಕೆ.ಆರ್‌.ಪೇಟೆ (ಡಿ . 15 ) :  ರಾಜಕಾರಣದ ಭಯ ನನಗಿಲ್ಲ. ಜನ ಆಶೀರ್ವಾದ ಮಾಡಿದರೆ ನನ್ನ ಜನಸೇವೆ ಮುಂದುವರಿಸುತ್ತೇನೆ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಪುರಸಭಾ ವ್ಯಾಪ್ತಿಯ ಹೊಸಹೊಳಲಿನಲ್ಲಿ ನಮ್ಮ ಕ್ಲಿನಿಕ್‌ (Namma Clinic)  ಆರೋಗ್ಯ (Health)  ಸೇವಾ ಘಟಕ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನಮ್ಮ ಕ್ಲಿನಿಕ್‌ ಆರಂಭಿಸಬೇಕಾಗಿತ್ತು. ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸೇರಿದಂತೆ ಸಾಕಷ್ಟು ಖಾಸಗಿ ಕ್ಲಿನಿಕ್‌ಗಳಿವೆ. ಇದನ್ನು ಮನಗಂಡು ಹೊಸಹೊಳಲು ಜನರ ಹಿತದೃಷ್ಟಿಯಿಂದ ನಮ್ಮ ಕ್ಲಿನಿಕ್‌ ಆಸ್ಪತ್ರೆಯ ಸೇವಾ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಹೊಸಹೊಳಲು ಜನ ದಾನಗುಣಕ್ಕೆ ಹೆಸರಾದವರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾರ್ವಜನಿಕ ಆಸ್ಪತ್ರೆ, ತಾಲೂಕು ಕ್ರೀಡಾಂಗಣಕ್ಕೆ ಅಗತ್ಯವಾದ ಜಾಗವನ್ನು ದಾನದ ರೂಪದಲ್ಲಿ ನೀಡಿದವರು ಎಂದು ಸ್ಮರಿಸಿದರು.

Ayushmati Clinic: ಸ್ತ್ರೀಯರಿಗೆ ಪ್ರತ್ಯೇಕ ‘ಆಯುಷ್ಮತಿ’ ಕ್ಲಿನಿಕ್‌: ಸಚಿವ ಸುಧಾಕರ್‌

ಪಟ್ಟಣದ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ .2 ಕೋಟಿ, ರಸ್ತೆಗಳ ಅಭಿವೃದ್ಧಿಗೆ .17 ಕೋಟಿ, ಹೊಸ ಹೊಳಲು ಮತ್ತು ದೇವೀರಮ್ಮಣ್ಣಿ ಕೆರೆಗಳ ಅಭಿವೃದ್ಧಿಗೆ ತಲಾ .10 ಕೋಟಿ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ .14. 50  ಕೋಟಿ, ಎರಡನೇ ಹಂತದ ಕುಡಿಯುವ ನೀರು ಪೂರೈಕೆ ಯೋಜನೆಗೆ .35 ಕೋಟಿ, ಪಟ್ಟಣದ ಒಳಚರಂಡಿ ನಿರ್ಮಾಣಕ್ಕೆ .3.5 ಕೋಟಿ, ತಾಯಿ-ಮಗು ಆಸ್ಪತ್ರೆ ನಿಮಾಣಕ್ಕೆ .28.50 ಕೋಟಿ, ಸಾರ್ವಜನಿಕ ಆಸ್ಪತ್ರೆಯ ಐ.ಸಿ.ಯು ಘಟಕ ಮತ್ತು 50 ಬೆಡ್‌ ಹಾಸಿಗೆ ವ್ಯವಸ್ಥೆಗೆ .1.47 ಕೋಟಿ ಹಣ ತಂದಿದ್ದೇನೆ ಎಂದರು.

ಪಟ್ಟಣದ ಬಡಜನರಿಗೆ ಮನೆ ನಿರ್ಮಿಸಲು ಸ್ಲಂ ಬೋರ್ಡ್‌ನಿಂದ .40 ಕೋಟಿ ತಂದಿದ್ದೇನೆ. ಪಟ್ಟಣದ ಅಭಿವೃದ್ಧಿಗೆ .100 ಕೋಟಿಗೂ ಅಧಿಕ ಅನುದಾನ ತಂದು ಜನಪರ ಕೆಲಸ ಮಾಡುತ್ತಿದ್ದೇನೆ. ಮತ್ತಷ್ಟುಅನುದಾನ ತಂದು ಪಟ್ಟಣದ ಚಿಕ್ಕ ಚಿಕ್ಕ ರಸ್ತೆಗಳನ್ನೂ ಅಭಿವೃದ್ಧಿ ಪಡಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗಾಗಿ .1700 ಕೋಟಿಗೂ ಅಧಿಕ ಅನುದಾನ ತಂದಿದ್ದು ಇದರ ಬಗ್ಗೆ ಪುಸ್ತಕ ಪ್ರಕಟಿಸಲಾಗಿದೆ. ಕ್ಷೇತ್ರದ ಜನರಿಗೆ ಹಂಚುವ ಕೆಲಸ ಮಾಡಲಾಗುತ್ತಿದೆ. ನನ್ನ ಅಭಿವೃದ್ಧಿ ಕಾರ್ಯಗಳು ಸುಳ್ಳಾಗಿದ್ದರೆ ಅದನ್ನು ಸಾಬೀತು ಪಡಿಸಲಿ ಎಂದು ವಿರೋಧಿಗಳಿಗೆ ಸವಾಲು ಹಾಕಿದರು.

Namma Clinic: ಕಲಬುರಗಿಯಲ್ಲಿ ಬಡವರ ಆರೋಗ್ಯ ಸಂಜೀವಿನಿ 'ನಮ್ಮ‌ ಕ್ಲಿನಿಕ್‌'ಗೆ ಚಾಲನೆ

ನಮ್ಮ ಕ್ಲಿನಿಕ್‌ ಜಿಲ್ಲಾ ವೈದ್ಯ ಡಾ.ಅನಿಲ… ಮಾತನಾಡಿ, ಜಿಲ್ಲೆಯ ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣ, ಮಳವಳ್ಳಿ ಮತ್ತು ಮದ್ದೂರು ಪಟ್ಟಣಗಳಲ್ಲಿ ನಮ್ಮ ಕ್ಲಿನಿಕ್‌ ಆರೋಗ್ಯ ಸೇವೆ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಎಲ್ಲ ಪಟ್ಟಣಗಳಿಗೂ ವಿಸ್ತರಿಸಲಾಗುವುದು ಎಂದರು.

ಗರ್ಭಿಣಿಯರ ತಪಾಸಣೆ, ಕುಟುಂಬ ಯೋಜನೆಯ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಹಿರಿಯ ನಾಗರಿಕರು ಮತ್ತಿತರರಿಗೆ ಆರೋಗ್ಯ ಸೇವೆ ಸೇರಿದಂತೆ 12 ಆರೋಗ್ಯ ಸೇವೆಗಳು ನಮ್ಮ ಕ್ಲಿನಿಕ್‌ನಲ್ಲಿ ಲಭ್ಯವಾಗಲಿದೆ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಮಹದೇವಿ, ಉಪಾಧ್ಯಕ್ಷೆ ಗಾಯಿತ್ರಿ, ತಾಪಂ ಇಒ ಬಿ.ಎಸ್‌.ಸತೀಶ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್‌, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಸ್‌.ಶಿವಕುಮಾರ್‌, ಆಯುರ್‌ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲೋಕೇಶ್‌ಕುಮಾರ್‌, ಪುರಸಭೆ ಮುಖ್ಯಾಧಿಕಾರಿ ಬಸವರಾಜು, ಗ್ರಾಮ ಮುಖಂಡರಾದ ಚಿಕ್ಕೇಗೌಡ, ಚಂದ್ರೇಗೌಡ, ರಾಮೇಗೌಡ, ರಾಜು, ಗೋಪಾಲಗೌಡ, ಯತಿರಾಜು, ಬಸವೇಗೌಡ, ಪುರಸಭಾ ಸದಸ್ಯರಾದ ಎಚ್‌.ಆರ್‌.ಲೋಕೇಶ್‌, ಕೆ.ಎಸ್‌.ಪ್ರಮೋದಕುಮಾರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು. 

click me!