Mandya : ಉದ್ಯೋಗದ ಅವಶ್ಯಕತೆ ಗ್ರಾಮೀಣರಿಗೆ ಹೆಚ್ಚು

By Kannadaprabha NewsFirst Published Dec 15, 2022, 5:27 AM IST
Highlights

ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಅವಶ್ಯಕತೆ ಹೆಚ್ಚಿದೆ. ಅವರಿಗೆ ಮೊದಲು ತರಬೇತಿ ಕೊಡಿಸಿ ನಂತರ ಉದ್ಯೋಗ ಕೊಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

 ಮಂಡ್ಯ (ಡಿ. 15) :  ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಅವಶ್ಯಕತೆ ಹೆಚ್ಚಿದೆ. ಅವರಿಗೆ ಮೊದಲು ತರಬೇತಿ ಕೊಡಿಸಿ ನಂತರ ಉದ್ಯೋಗ ಕೊಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಪಿಇಎಸ್‌ ಎಂಜಿನಿಯರಿಂಗ್‌ (Engineering)  ಕಾಲೇಜು ವತಿಯಿಂದ ಬುಧವಾರ ನಗರದ ಪಿಇಎಸ್‌ ತಾಂತ್ರಿಕ ಕಾಲೇಜಿನ ಪ್ಲೇಸ್‌ಮೆಂಟ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ (Students)  ಓದು ಎಷ್ಟುಮುಖ್ಯವೋ, ಉದ್ಯೋಗವೂ ಅಷ್ಟೇ ಮುಖ್ಯ. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿವರೆಗೆ ಶಿಕ್ಷಣ ಪಡೆದು ಹಲವು ಕಾರಣಗಳಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿದವರಿದ್ದಾರೆ. ಅವರೆಲ್ಲರಿಗೂ ಉದ್ಯೋಗ ದೊರಕಿಸಿಕೊಟ್ಟು ಸ್ವಾವಲಂಬಿ ಜೀವನ ನಡೆಸಲು ಮುನ್ನುಡಿ ಬರೆಯಬೇಕಿದೆ ಎಂದರು.

ಎಷ್ಟೇ ಜನ ನಿರುದ್ಯೋಗಿ ಯುವಕ-ಯುವತಿಯರು ಬಂದರೂ ಅವರನ್ನು ನೋಂದಣಿ ಮಾಡಿಸಿ. ಅವರಿಗೆ ಈಗ ಉದ್ಯೋಗ ಸಿಗಲಿಲ್ಲವೆಂದು ನಿರಾಶರಾಗುವುದು ಬೇಡ. ಚುನಾವಣೆ ಮುಗಿಯುವುದರೊಳಗೆ ಬೇರೆ ತಾಲೂಕಿನಲ್ಲಿ ಉದ್ಯೋಗ ಮೇಳ ಆಯೋಜಿಸುವುದಾಗಿ ಖಚಿತಪಡಿಸಿದರು.

ಜಿಲ್ಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉದ್ಯೋಗ ದೊರಕಿಸಲು ಪ್ರತಿ ತಾಲೂಕಿನಲ್ಲಿಯೂ ಉದ್ಯೋಗ ಮೇಳ ಆಯೋಜಿಸಬೇಕು. ಕಡಿಮೆ ಸಂಖ್ಯೆಯಲ್ಲಿ ನೋಂದಣಿಯಾಗಿರುವ ತಾಲೂಕಿನ ಮಾಹಿತಿ, ಉದ್ಯೋಗ ಸಿಕ್ಕವರು ಮತ್ತು ಸಿಗದವರ ಮಾಹಿತಿಯನ್ನು ಮೇಳ ಮುಗಿದ ನಂತರದಲ್ಲಿ ನನಗೆ ನೀಡುವಂತೆ ತಿಳಿಸಿದರು. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಗುರಿ ತಲುಪುವವರೆಗೆ ಶ್ರಮವಹಿಸಿ ದುಡಿದರೆ ಅಂದುಕೊಂಡಿದ್ದನ್ನು ಸಾಧಿಸಿದಂತಾಗುವುದು. ಅದರಿಂದ ಎಲ್ಲರ ಜೀವನವೂ ಉತ್ತಮಗೊಳ್ಳಲಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಮಾತನಾಡಿ, ಜನಸಂಖ್ಯೆ ಹೆಚ್ಚಳವಾಗುತ್ತಿರುವ ಇಂದಿನ ದಿನಗಳಲ್ಲಿ ದೇಶದ ಎಲ್ಲ ಯುವಜರಿಗೆ ಶಿಕ್ಷಣ, ಉದ್ಯೋಗ ಒದಗಿಸುವುದು ಸರ್ಕಾರಗಳಿಗೆ ದೊಡ್ಡ ಸವಾಲಾಗಿದೆ. ಅದನ್ನೂ ಮೀರಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ, ಕ್ರಾಂತಿಕಾರಕ ಬದಲಾವಣೆ ತಂದು ಗುಣಾತ್ಮಕ ಶಿಕ್ಷಣಕ್ಕೆ ಅದ್ಯತೆ ನೀಡಲಾಗಿದೆ ಎಂದರು.

ಸಮಾಜದಲ್ಲಿರುವ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಬಡತನ, ಆರ್ಥಿಕ ಸಂಕಷ್ಟಹಾಗೂ ಇನ್ನಿತರ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದವರಿದ್ದಾರೆ. ಅವರಿಗೆ ಉದ್ಯೋಗ ಕೊಡಿಸುವುದನ್ನು ಮುಖ್ಯ ಗುರಿಯಾಗಿಸಿಕೊಳ್ಳಬೇಕು. ಕೌಶಲ್ಯ ತರಬೇತಿ ನೀಡುವುದರೊಂದಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಿ ಅವರನ್ನೂ ಉದ್ಯೋಗದಾತರನ್ನಾಗಿ ಮಾಡಬೇಕಿದೆ ಎಂದರು.

SBI SCO Recruitment 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 3

ಶಾಸಕ ಎಂ.ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಿದ್ದರು. ಪಿಇಟಿ ಟ್ರಸ್ಟ್‌ ಅಧ್ಯಕ್ಷ ಕೆ.ಎಸ್‌.ವಿಜಯ್‌ಆನಂದ್‌ ಜಿಪಂ ಸಿಇಒ ಶಾಂತಾ ಎಲ್‌.ಹುಲ್ಮನಿ, ಪಿಇಟಿ ಕಾರ್ಯದರ್ಶಿ ಶಿವಪ್ರಸಾದ್‌, ಕೌಶಲ್ಯಾಭಿವೃದ್ಧಿ ಕೇಂದ್ರದ ಜಿಲ್ಲಾ ಅಧಿಕಾರಿ ವೇಣುಗೋಪಾಲ್‌, ಇತರರು ಇದ್ದರು.

1 ಕೋಟಿಗೂ ಹೆಚ್ಚು ಪ್ಯಾಕೇಜ್ ಪಡೆದ ವಿದ್ಯಾರ್ಥಿಗಳು

ನವದೆಹಲಿ (ಡಿ.13): ಒಂದೆಡೆ ಪ್ರಪಂಚದಾದ್ಯಂತ ಕಂಪೆನಿಗಳು ಉದ್ಯೋಗ ಕಡಿತ ಮಾಡುತ್ತಿವೆ. ದೊಡ್ಡ ದೊಡ್ಡ ಟೆಕ್ ಕಂಪೆನಿಗಳು ಉದ್ಯೋಗಿಗಳನ್ನು ಹಿಂಡು ಹಿಂಡಾಗಿ ವಜಾಗೊಳಿಸುತ್ತಿದೆ, ಜೊತೆಗೆ ನೇಮಕಾತಿಗಳನ್ನು ತೆಗೆದುಹಾಕುತ್ತಿದೆ. ಆದರೆ  ಪ್ರತಿಷ್ಠಿತ ಐಐಟಿ ಬಾಂಬೆ ಇನ್‌ಸ್ಟಿಟ್ಯೂಟ್‌ನ ಪದವೀಧರರು ಭರ್ಜರಿ ಆಫರ್‌ಗಳನ್ನು ಪಡೆದುಕೊಂಡಿದ್ದಾರೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಪ್ಲೇಸ್‌ಮೆಂಟ್ ಪ್ರಕ್ರಿಯೆಯ ಒಂಬತ್ತು ದಿನಗಳಲ್ಲಿ ವಾರ್ಷಿಕ ರೂ 1 ಕೋಟಿಗಿಂತ ಹೆಚ್ಚಿನ ವೇತನ ಪ್ಯಾಕೇಜ್‌ಗಳೊಂದಿಗೆ  25 ವಿದ್ಯಾರ್ಥಿಗಳು  ಉದ್ಯೋಗ  ಪಡೆದುಕೊಂಡಿದ್ದಾರೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಸೇರಿದಂತೆ  ಕ್ಯಾಂಪಸ್ ಸಂದರ್ಶನದಲ್ಲಿ 400ಕ್ಕೂ ಹೆಚ್ಚು ಸಂಸ್ಥೆಗಳಿಂದ 1,500 ಕ್ಕೂ ಹೆಚ್ಚು ಜಾಬ್  ಆಫರ್  ಇದೆ. ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಒಟ್ಟು 71  ಉದ್ಯೋಗ ಆಫರ್  ನೀಡಲಾಗಿದೆ. ಒಟ್ಟು ಆಪರ್‌ಗಳಲ್ಲಿ, 63 ಅಂತರರಾಷ್ಟ್ರೀಯ ಕೊಡುಗೆಗಳನ್ನು ಒಳಗೊಂಡಂತೆ 1,224 ವಿದ್ಯಾರ್ಥಿಗಳು ಉದ್ಯೋಗ ಆಫರ್  ಸ್ವೀಕರಿಸಿದ್ದಾರೆ.

ಪ್ಲೇಸ್‌ಮೆಂಟ್ ಡ್ರೈವ್‌ಗಾಗಿ ನೋಂದಾಯಿಸಿದ 44 ಕಂಪನಿಗಳಲ್ಲಿ, ಅಮೇರಿಕನ್ ಎಕ್ಸ್‌ಪ್ರೆಸ್, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಟಿಎಸ್‌ಎಂಸಿ, ಮೆಕಿನ್ಸೆ ಮತ್ತು ಕಂಪನಿ, ಹೋಂಡಾ ಜಪಾನ್, ಸ್ಪ್ರಿಂಕ್ಲರ್  ಕಂಪನಿಗಳಿವೆ. ಬ್ಯುಸಿನೆಸ್ ಟುಡೇ ಪ್ರಕಾರ, ಟಾಟಾ, ರಿಲಯನ್ಸ್ ಮತ್ತು ಅದಾನಿ ಸಮೂಹದಂತಹ ಭಾರತೀಯ ಸಂಘಟಿತ ಸಂಸ್ಥೆಗಳು ಐಐಟಿ-ಬಿಯಿಂದ ಉತ್ತಮ ಉದ್ಯೋಗಿಯನ್ನು ಆಯ್ಕೆ ಮಾಡಲು ಪ್ಲೇಸ್‌ಮೆಂಟ್ ಡ್ರೈವ್‌ನಲ್ಲಿ ತೊಡಗಿವೆ.

AAI RECRUITMENT 2022: ವಿವಿಧ 596 ಹುದ್ದೆಗಳಿಗೆ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ

ಬ್ಯುಸಿನೆಸ್ ಟುಡೆ ಜೊತೆ ಮಾತನಾಡುತ್ತಾ, ಪ್ಲೇಸ್‌ಮೆಂಟ್ ಅಧಿಕಾರಿಯೊಬ್ಬರು ಹಿಂದಿನ (2021-22) ಸೆಶನ್‌ನಲ್ಲಿ ಒಟ್ಟು ಅಂತರಾಷ್ಟ್ರೀಯ ಕೊಡುಗೆಗಳ ಸಂಖ್ಯೆ 66 ಎಂದು ಬಹಿರಂಗಪಡಿಸಿದರು. ಆದರೆ ಈ ವರ್ಷ ಪ್ಲೇಸ್‌ಮೆಂಟ್ ಡ್ರೈವ್‌ನ 9 ನೇ ದಿನದವರೆಗೆ 71 ಅಂತರಾಷ್ಟ್ರೀಯ ಕೊಡುಗೆಗಳು ಇದ್ದವು. ಈ ಅಂತರಾಷ್ಟ್ರೀಯ ಆಫರ್‌ಗಳು ಪೂರ್ವ ಏಷ್ಯಾದ ರಾಷ್ಟ್ರಗಳಾದ ಜಪಾನ್, ತೈವಾನ್, ಸಿಂಗಾಪುರ್, ದಕ್ಷಿಣ ಕೊರಿಯಾ ಮುಂತಾದವುಗಳನ್ನು ಒಳಗೊಂಡಿವೆ. ಕಳೆದ ವರ್ಷ US, UAE, ನೆದರ್‌ಲ್ಯಾಂಡ್ಸ್ ಇತ್ಯಾದಿಗಳಿಂದ ಹೆಚ್ಚಿನ ಅಂತರರಾಷ್ಟ್ರೀಯ ನಿಯೋಜನೆ ಆಗಿತ್ತು ಎಂದಿದ್ದಾರೆ.

click me!