ಹಟ್ಟಿ ಚಿನ್ನದ ಗಣಿಗೆ 80 ಕೋಟಿ ರು. ಲಾಭ

Kannadaprabha News   | Asianet News
Published : Jan 06, 2020, 08:37 AM IST
ಹಟ್ಟಿ ಚಿನ್ನದ ಗಣಿಗೆ 80 ಕೋಟಿ ರು. ಲಾಭ

ಸಾರಾಂಶ

ದಕ್ಷಿಣ ಏಷ್ಯಾದ ಏಕೈಕ ಚಿನ್ನದಗಣಿಯಾದ ಕರ್ನಾಟಕ ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದ ಗಣಿ ಕಂಪನಿ ವರ್ಷದಿಂದ ವರ್ಷಕ್ಕೆ ದಾಖಲೆಯ ಚಿನ್ನ ಉತ್ಪಾದಿಸುತ್ತ ಸಾಗಿದ್ದು, ಇದೀಗ ಲಾಭದಲ್ಲಿಯೂ ದಾಖಲೆ ಮಾಡಿದೆ.

ಲಿಂಗಸಗೂರು [ಜ.06]:  ಚಿನ್ನದ ಉತ್ಪಾದನೆಯಲ್ಲಿ ಏಕ ಸ್ವಾಮ್ಯತೆ ಸಾಧಿಸಿರುವ ದಕ್ಷಿಣ ಏಷ್ಯಾದ ಏಕೈಕ ಚಿನ್ನದಗಣಿಯಾದ ಕರ್ನಾಟಕ ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದ ಗಣಿ ಕಂಪನಿ ವರ್ಷದಿಂದ ವರ್ಷಕ್ಕೆ ದಾಖಲೆಯ ಚಿನ್ನ ಉತ್ಪಾದಿಸುತ್ತ ಸಾಗಿದೆ. 2017-18ನೇ ಸಾಲಿಗೆ 30 ಕೋಟಿ ರು. ಹಾಗೂ 2018-19ನೇ ಸಾಲಿಗೆ .80 ಕೋಟಿ ನಿವ್ವಳ ಲಾಭಗಳಿಸಿದೆ. 

ಹಿಂದಿನ ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಸಂಸ್ಥೆಗೆ ದಾಖಲೆಯ ಲಾಭವಾಗಿದೆ. ಮೂರನೇ ತ್ರೈಮಾಸಿಕ(ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ 2019ರ) 448.649 ಚಿನ್ನ ಉತ್ಪಾದನೆ ಗುರಿ ಪೈಕಿ 422.433 ಕೆ.ಜಿ.ಉತ್ಪಾದಿಸಿದ್ದರೆ, ವಾರ್ಷಿಕ ಒಟ್ಟು ಉತ್ಪಾದನೆಯ ಗುರಿ 1,750 ಕೆ.ಜಿ. ಪೈಕಿ ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯಕ್ಕೆ 1,251 ಕೆ.ಜಿ ಉತ್ಪಾದಿಸಿದ್ದು, ಸಾಧನೆ ಶೇ.71ರಷ್ಟಿದೆ. ಇನ್ನುಳಿದ ಆರ್ಥಿಕ ವರ್ಷದ ಕೊನೇ 3 ತಿಂಗಳಲ್ಲಿ ಬಾಕಿ 499 ಕೆ.ಜಿ ಉತ್ಪಾದನೆ ಗುರಿ ಹೊಂದಿದೆ.

ಅಯ್ಯೋ ಶಿವನೇ..!: ಚಿನ್ನದ ಬೆಲೆ ಕೇಳಿರಿ ಸುಮ್ಮನೆ!...

ಗಣಿ ಕಂಪನಿಯು ಪ್ರತಿದಿನಕ್ಕೆ 2000 ಟನ್‌ ಅದಿರು ಬೀಸುವ ಸಾಮರ್ಥ್ಯವನ್ನು ಹೊಂದಿದೆ. ಗಣಿ ಕಂಪನಿಯು ಉತ್ಪಾದನೆಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಅಧಿಕಾರಿ-ಕಾರ್ಮಿಕ ವರ್ಗದ ಪರಿಶ್ರಮದಿಂದ ಪ್ರಸಕ್ತ ಆರ್ಥಿಕ ಸಾಲಿಗೆ ನಿರೀಕ್ಷೆ ಮೀರಿ ಉತ್ಪಾದನೆ ಗುರಿ ತಲುಪುವ ಭರವಸೆ ಇದೆ.

-ಪ್ರಕಾಶ್‌ ಬಹದ್ದೂರ್‌, ಕಾರ್ಯನಿರ್ವಾಹಕ ನಿರ್ದೇಶಕರು, ಹಟ್ಟಿಚಿನ್ನದಗಣಿ ಕಂಪನಿ

PREV
click me!

Recommended Stories

ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಬದಲಾವಣೆ ಇಲ್ಲ, ಈ ಕುರಿತು ಚರ್ಚೆ ಆಗಿಲ್ಲ: ಸಲೀಂ ಅಹ್ಮದ್
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು