ನಿತ್ಯವೂ ಪಾರ್ಟಿ ಮೋಜು ಮಸ್ತಿ ಹೆಣ್ಣು ಹೆಂಡ ಅಂತಿದ್ದ ಗಂಡನಿಂದಾಗಿ ಬೇಸತ್ತ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 11 ವರ್ಷದ ಮಗನಿದ್ದರೂ ತನ್ನ ಕೆಟ್ಟ ಚಟ ಬಿಡದ ಗಂಡ ಹೆಂಡತಿ ಸಾವಿಗೆ ಕಾರಣ ಆಗಿದ್ದಾನೆ.
ಬೆಂಗಳೂರು (ಫೆ.05): ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡಿ ಬಂದು ನಿತ್ಯ ಹೆಂಡತಿಗೆ ಕಿರುಕುಳ ಕೊಡುತ್ತಿದ್ದ ಸಾಫ್ಟ್ವೇರ್ ಗಂಡನಿಂದ ಬೇಸತ್ತ ಗೃಹಿಣಿಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನ ವರ್ತೂರಿನಲ್ಲಿ ಈ ಘಟನೆ ನಡೆದಿದೆ. ಜನವರಿ 28 ರಂದೇ ಮಹಿಳೆ ಪದ್ಮಾವತಿ (38) ಆತ್ಮಹತ್ಯೆಗೆ ಶರಣಾಗಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಗಂಡ ಭಾಸ್ಕರ್ ಪ್ರತಿನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡಿಕೊಂಡು ಮನೆಗೆ ಬರುತ್ತಿದ್ದ. ಅಲ್ಲದೇ ಬೇರೆ ಯುವತಿಯರ ಜೊತೆಗೆ ಕುಣಿದು ಕುಪ್ಪಳಿಸಿ ಅನ್ಯ ಮಹಿಳೆಯರ ಸಂಘವನ್ನು ಮಾಡಿ ನಿತ್ಯವೂ ಮನೆಗೆ ತಡವಾಗಿ ಬರುತ್ತಿದ್ದ.
ಕಾಲೇಜಲ್ಲಿ ಲವ್ ಮಾಡಿದ್ರು : ಸಲುಗೆಯಿಂದ ಇದ್ದು ಲೈಂಗಿಕ ದೌರ್ಜನ್ಯ ಎಸಗಿ ಈಗ ಹೀಗ್ ಮಾಡೋದಾ..?
ಪತಿ ಕಿರುಕುಳದಿಂದ ಬೇಸತ್ತಿದ್ದ ಪದ್ಮಾವತಿ ಈ ಹಿಂದೆ ಮೂರು ಬಾರೀ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ನಾಲ್ಕನೆ ಬಾರಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರೋಪಿ ಪತಿ ಭಾಸ್ಕರ್, ಪ್ರತಿಷ್ಠಿತ ಕಂಪೆನಿಯಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ 15 ವರ್ಷಗಳ ಹಿಂದೆಯೇ ಪದ್ಮಾವತಿ ಜೊತೆ ವಿವಾಹವಾಗಿತ್ತು. ಈ ದಂಪತಿಗೆ 11 ವರ್ಷದ ಗಂಡು ಮಗನಿದ್ದಾನೆ.
ಅತಿಯಾದ ಪಾರ್ಟಿ-ಮೋಜು-ಮಸ್ತಿ ಮೈಗೂಡಿಸಿಕೊಂಡಿದ್ದ ಪಾಪಿ ಪತಿ ಪದೇ ಪದೇ ಪಾರ್ಟಿಗೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದ. ಕುಡಿದು ಬಂದು ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ. ಇದರಿಂದಲೇ ಬೇಸತ್ತು ಗೃಹಿಣಿ ಪದ್ಮಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದೀಗ ಪದ್ಮಾವತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್ಐಆರ್ ದಾಖಲಾಗಿದೆ. ವರ್ತೂರು ಠಾಣೆಯಲ್ಲಿ ಆರೋಪಿ ಟೆಕ್ಕಿ ಭಾಸ್ಕರ್ ವಿರುದ್ಧ ಎಫ್ಐಆರ್ ದಾಖಲಿಸಿ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.