
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೀನಾಯ ಘಟನೆ ನಡೆದಿದೆ. ಪತಿಯೇ ಪತ್ನಿಯ ಮೇಲೆ ಆಸಿಡ್ ಎರಚಿ, ಆ ಬಳಿಕ ಆಕೆಯ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಜೆಪಿ ನಗರದ 3rd ಪೇಸ್ ನ ನಾರಾಯಣ ಕ್ಲೀನಿಕ್ ಬಳಿ ನಡೆದಿದೆ. ಘಟನೆಯಲ್ಲಿ 26 ವರ್ಷದ ಮಧುಮಿತ ಗಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರವಾಗಿ ಗಾಯಗೊಂಡಿರುವ ಕಾರಣ ಆಕೆಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇಂದು ಬೆಳಗ್ಗೆ 9:15ರ ಸಮಯದಲ್ಲಿ ಘಟನೆ ನಡೆದಿದೆ. ಮಧುಮಿತ ಟಿಫನ್ ಮಾಡಲು ಅಂತ ಕ್ಲಿನಿಕ್ ನಿಂದ ಹೊರ ಬಂದ ಸಂದರ್ಭದಲ್ಲಿ ಪತಿ ಆಕೆಯ ಮೇಲೆ ಆರೋಪಿ ಪತಿ ವೆಂಕಟೇಶ್ ದಾಳಿ ಮಾಡಿದ್ದಾನೆ. ಮೊದಲ ಆಸಿಡ್ ಎಸೆದು ಇದರಿಂದ ಆಕೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪಾರ್ಕಿಂಗ್ ಕಡೆ ಓಡಿ ಹೋಗಿದ್ದಾಳೆ. ಆದರೆ ಆಕೆಯನ್ನು ಬೆನ್ನಟ್ಟಿದ್ದ ಆರೋಪಿ, ಪಾರ್ಕಿಂಗ್ ಲಾಟ್‌ನಲ್ಲೇ ಆಕೆಯ ಮೇಲೆ ಮಚ್ಚಿನಿಂದ ಕೊಚ್ಚಿ ಹಲ್ಲೆ ಮಾಡಿದ್ದಾನೆ. ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ರಕ್ಷಣೆ ಮಾಡಲು ಮುಂದಾಗಿದ್ದು, ಈ ವೇಳೆ ಆತ ಸಾರ್ವಜನಿಕರ ಮೇಲೂ ಹಲ್ಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಪತ್ನಿಯ ಮೇಲೆ ಆರೋಪಿ ಪತಿ ಹಲ್ಲೆ ಮಾಡುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಒಂದೂವರೆ ವರ್ಷದಿಂದ ನಾರಾಯಣ ಕ್ಲಿನಿಕ್‌ನಲ್ಲಿ ನರ್ಸ್ ಆಗಿ ಮಧುಮಿತ ಕೆಲಸ ಮಾಡುತ್ತಿದ್ದರಂತೆ, ಮೂಲತಃ ಕೋಲ್ಕತ್ತಾ ನಿವಾಸಿಯಾಗಿದ್ದ ಅವರು ತಮಿಳುನಾಡು ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದರಂತೆ.
ಘಟನಾ ಸ್ಥಳಕ್ಕೆ ಜೆಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ, ಮಧುಮಿತಳನ್ನು ಕೊಡಲು ಮೊದಲೇ ಪ್ಲ್ಯಾನ್ ಮಾಡಿ ಬೈಕ್‌ನಲ್ಲಿ ಕ್ಲಿನಿಕ್ ಬಳಿ ಆಗಮಿದ್ದನಂತೆ. ಅಲ್ಲದೇ, ಒಂದು ಚಾಕು, ಮಚ್ಚು, ಆಸಿಡ್ ಹಿಡಿದು ಬಂದಿದ್ದನಂತೆ. ಹಲ್ಲೆ ವೇಳೆ ಮಹಿಳೆಯ ರಕ್ಷಣೆಗೆ ಮುಂದಾಗಿದ್ದ ಸ್ಥಳೀಯರು, ಆರೋಪಿಗೆ ಕಲ್ಲಿನಿಂದ ಹೊಡೆದು ಮಹಿಳೆಯನ್ನು ಬಿಡಿಸಲು ಮುಂದಾಗಿದ್ದರು. ಆದರೆ ರಕ್ಷಣೆಗೆ ಬಂದವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದ ಆರೋಪಿ, ಅಲ್ಲಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಆರೋಪಿಯನ್ನು ಪಕ್ಕದ ಸಿಗ್ನಲ್ ಬಳಿಯೇ ನಿಂತಿದ್ದ ಸಂಚಾರಿ ಪೊಲೀಸರ ವಶಕ್ಕೆ ಹಿಡಿದುಕೊಟ್ಟಿದ್ದಾರೆ.
ಸದ್ಯ ತಮಿಳುನಾಡು ಮೂಲದ ಆರೋಪಿ ವೆಂಕಟೇಶ್ ನನ್ನ ವಶಕ್ಕೆ ಪಡೆದು ಜೆಪಿ ನಗರ ಪೊಲೀಸರು ವಿತರಣೆಗೆ ಒಳಪಡಿಸಿದ್ದಾರೆ. ಇತ್ತೀಚೆಗೆ ಮಧುಮಿತ ಹಾಗೂ ವೆಂಕಟೇಶ್ ಬೇರೆ ಬೇರೆ ಆಗಿದ್ದರಂತೆ. ಘಟನೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ.
ಸದ್ಯ ತಮಿಳುನಾಡು ಮೂಲದ ಆರೋಪಿ ವೆಂಕಟೇಶ್ ನನ್ನ ವಶಕ್ಕೆ ಪಡೆದು ಜೆಪಿ ನಗರ ಪೊಲೀಸರು ವಿತರಣೆಗೆ ಒಳಪಡಿಸಿದ್ದಾರೆ. ಇತ್ತೀಚೆಗೆ ಮಧುಮಿತ ಹಾಗೂ ವೆಂಕಟೇಶ್ ಬೇರೆ ಬೇರೆ ಆಗಿದ್ದರಂತೆ. ಘಟನೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ.
ಆರೋಪಿ ವೆಂಕಟೇಶ್ ಮತ್ತು ಮಧುಮಿತ ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರಂತೆ. ಆ ಬಳಿಕ 2024ರಲ್ಲಿ ಮಧುರೈ ನಲ್ಲಿ ಮದುವೆಯಾಗಿದ್ದ ಇಬ್ಬರು, ಕಳೆದ ಒಂದು ವರ್ಷದ ಹಿಂದೆ ಬೇರ್ಪಟ್ಟಿದ್ದರಂತೆ. ಬೆಂಗಳೂರಿನ ಪಿಜಿ ಯೊಂದರಲ್ಲಿ ಮಧುಮಿತ ವಾಸ ಮಾಡುತ್ತಿದ್ದರೆ, ಚೆನ್ನೈ ನ ಆಯಿಲ್ ಕಂಪನಿಯೊಂದರಲ್ಲಿ ವೆಂಕಟೇಶ್ ಮಾಡುತ್ತಿದ್ದ. ಈ ಹಿಂದೆ ಬೆಂಗಳೂರಿನಲ್ಲಿ ಆರೋಪಿ ಕೆಲಸ ಮಾಡುತ್ತಿದ್ದನಂತೆ, ಆದರೆ ಹಲವು ದಿನಗಳಿಂದ ಮಧುಮಿತಾ ಮೇಲೆ ಅನುಮಾನ ಪಟ್ಟು ಬೆದರಿಕೆ ಹಾಕುತ್ತಿದ್ದನಂತೆ. ತಮಿಳುನಾಡಿನಿಂದ ಬೈಕ್‌ನಲ್ಲಿಯೇ ಬಂದಿದ್ದ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.