ಮಲಗಿದ್ದ ಹೆಂಡ್ತಿಯನ್ನ ಕೊಂದ ಪತಿ : ಸೀದಾ ಠಾಣೆಗೆ ಬಂದ

Kannadaprabha News   | Asianet News
Published : Nov 20, 2020, 12:39 PM ISTUpdated : Nov 20, 2020, 12:52 PM IST
ಮಲಗಿದ್ದ ಹೆಂಡ್ತಿಯನ್ನ ಕೊಂದ ಪತಿ : ಸೀದಾ ಠಾಣೆಗೆ ಬಂದ

ಸಾರಾಂಶ

ಹೆಂಡತಿಯನ್ನು ದೊಣ್ಣೆಯಿಂದ ಬಡಿದು ಕೊಂದ ಪತಿ ಸೀದಾ ಪೊಲೀಸ್ ಠಾಣೆಗೆ ಹೋಗಿ ಶರಣಾದ ಘಟನೆ ನಡೆದಿದೆ. 

ಕೊರಟಗೆರೆ (ನ.20):  ಮನೆಯ ಸೈಟಿನ ವಿಚಾರಕ್ಕೆ ಕುಡಿದ ಅಮಲಿನಲ್ಲಿ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ  ಮುಂಜಾನೆ ನಡೆದಿದೆ.

ಕೊರಟಗೆರೆ ಪಟ್ಟಣದ 3ನೇ ವಾರ್ಡಿನ ಶ್ರೀನಿವಾಸ ಕಾಲೇಜಿನ ಹಿಂಭಾಗದ ನಿವಾಸಿ ಹಥರತ್‌ ಭಾನು(32) ಮೃತ ದುರ್ದೈವಿ. ಚಾಂದ್‌ ಪಾಷಾ ಕೊಲೆ ಆರೋಪಿ.

ಮೃತ ಹಥರತ್‌ ಭಾನು ಮತ್ತು ಮಗ ಮಹಮ್ಮದ್‌ ಅಲಿ ಮನೆಯಲ್ಲಿ ನಿದ್ರೆಯಲ್ಲಿದ್ದಾಗ ಚಾಂದ್‌ ಪಾಷಾ ದೊಣ್ಣೆಯಿಂದ ಇಬ್ಬರ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ಹೆಂಡತಿ ಸ್ಥಳದಲ್ಲಿಯೇ ರಕ್ತಸ್ರಾವವಾಗಿ ಮೃತಪಟ್ಟರೆ, ಮಗ ತುಮಕೂರು ಸರಕಾರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಗದಗ: ಬಡ್ಡಿ ವ್ಯವಹಾರಗಾರರ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ

ಮೃತ ಮಹಿಳೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆರೋಪಿ ಚಾಂದುಪಾಷಾ ಕೊರಟಗೆರೆ ಪೊಲೀಸರ ವಶದಲ್ಲಿ ಇದ್ದಾನೆ. ಸಿಪಿಐ ನಧಾಪ್‌ ಮತ್ತು ಪಿಎಸ್‌ಐ ಮುತ್ತುರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು