ಪತ್ನಿಗೆ ದುಬೈನಲ್ಲಿ ಉಗ್ರ ಸಂಪರ್ಕ ಶಂಕೆ: ಎಸ್ಪಿಗೆ ಪತಿ ದೂರು

Kannadaprabha News   | Asianet News
Published : Sep 03, 2021, 03:58 PM IST
ಪತ್ನಿಗೆ ದುಬೈನಲ್ಲಿ ಉಗ್ರ ಸಂಪರ್ಕ ಶಂಕೆ: ಎಸ್ಪಿಗೆ ಪತಿ ದೂರು

ಸಾರಾಂಶ

ದುಬೈನಲ್ಲಿ ಉಗ್ರ ಸಂಘಟನೆ ಸಂಪರ್ಕ ಶಂಕೆ ಮೇರೆಗೆ ಪತ್ನಿ ವಿರುದ್ಧ ಪತಿಯೇ ದ.ಕ. ಜಿಲ್ಲಾ ಪೊಲೀಸರಿಗೆ ದೂರು  ಉಗ್ರಗಾಮಿ ಸಂಘಟನೆಗಳು ನನ್ನೊಂದಿಗೆ ಇದೆ ಎಂದು ಹೇಳಿ ನನ್ನನ್ನು ಗದರಿಸುತ್ತಾಳೆಂದುದೂರು

  ಮಂಗಳೂರು (ಸೆ.03):  ದುಬೈನಲ್ಲಿ ಉಗ್ರ ಸಂಘಟನೆ ಸಂಪರ್ಕ ಶಂಕೆ ಮೇರೆಗೆ ಪತ್ನಿ ವಿರುದ್ಧ ಪತಿಯೇ ದ.ಕ. ಜಿಲ್ಲಾ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.

ಉಗ್ರಗಾಮಿ ಸಂಘಟನೆಗಳು ನನ್ನೊಂದಿಗೆ ಇದೆ ಎಂದು ಹೇಳಿ ನನ್ನನ್ನು ಗದರಿಸಿ 12 ವರ್ಷದ ಪುತ್ರಿಯನ್ನು ಕರೆದೊಯ್ಯಲು ಪ್ರಯತ್ನಿಸುವ ನನ್ನ ಪತ್ನಿಯನ್ನು ತನಿಖೆಗೆ ಒಳಪಡಿಸಿ ನಮಗೆ ರಕ್ಷಣೆ ನೀಡುವಂತೆ ಪತಿ ಬೆಳ್ತಂಗಡಿ ತಾಲೂಕಿನ ನೆರಿಯಾ ನಿವಾಸಿ ಚಿದಾನಂದ್‌ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

2007 ಜುಲೈ 20ರಂದು ನನಗೆ ಆಕೆಯೊಂದಿಗೆ ವಿವಾಹವಾಗಿತ್ತು. ನಮಗೆ ಇಬ್ಬರು ಮಕ್ಕಳಾದ ಬಳಿಕ ಪತ್ನಿ ವಿದೇಶಕ್ಕೆ ತೆರಳಿದ್ದಾಳೆ. ವರ್ಷಕ್ಕೊಮ್ಮೆ ಬಂದರೂ ತವರಿನಲ್ಲೇ ಇರುತ್ತಿದ್ದಳು. 2018ರಲ್ಲಿ ಆಕೆ ಬಂದಾಗ ಮಕ್ಕಳ ಸಲುವಾಗಿ ಮರಳಿ ವಿದೇಶಕ್ಕೆ ತೆರಳುವುದು ಬೇಡ ಎಂದಿದ್ದೆ. ಆದರೆ ನನ್ನ ಮಾತು ತಿರಸ್ಕರಿಸಿ ಮತ್ತೆ ವಿದೇಶಕ್ಕೆ ಹೋಗಿದ್ದು, ನಂತರ ನನಗೆ ಯಾವುದೇ ಫೋನ್‌ ಕರೆ ಮಾಡಿಲ್ಲ. ನಾನು ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ ಎಂದಿದ್ದಾರೆ.

ಉಡುಪಿ; ಒಳ್ಳೆ ಹುಡುಗ ರಕ್ಕಸನಾಗಿದ್ದ... 8 ವರ್ಷದ ಲವ್.. ಚಾಕು ಮತ್ತು ಜಾತಿ!

ಈ ನಡುವೆ ನನ್ನ ಸಹೋದರ ಕರೆ ಮಾಡಿ, ಆಕೆ ಪಾಕಿಸ್ತಾನದ ಶಾಲೆಯೊಂದರ ವಾಹನದಲ್ಲಿ ಆಯಾ ಆಗಿ ಕೆಲಸ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ. 2021 ಜು.10ರಂದು ಆಕೆ ಮರಳಿ ಬಂದಾಗ ಪುತ್ರಿಯನ್ನು ಕರೆದೊಯ್ಯುವುದಾಗಿ ಹೇಳಿದ್ದಳು. ನಾನು ನಿರಾಕರಿಸಿದಾಗ ಡೈವೋರ್ಸ್‌ ನೀಡುವುದಾಗಿ ಬೆದರಿಸಿದ್ದಳು. ಈ ಸಿಟ್ಟಿನಲ್ಲಿ ಪುತ್ರಿಗೆ ಚಿತ್ರಹಿಂಸೆ ನೀಡುತ್ತಿದ್ದಳು. ಮನೆಯಲ್ಲಿದ್ದಾಗ ಮೊಬೈಲ್‌ಗೆ ಕರೆ ಬಂದರೆ ಕದ್ದುಮುಚ್ಚಿ ಮಾತನಾಡುತ್ತಿದ್ದಳು. ಹಿಂದೂ ಸಂಪ್ರದಾಯ ರೀತ್ಯಾ ಜೀವಿಸಲು ವಿರೋಧ ವ್ಯಕ್ತಪಡಿಸುತ್ತಿದ್ದಳು ಎಂದು ದೂರಿನಲ್ಲಿ ಹೇಳಲಾಗಿದೆ.

ವಿದೇಶದಲ್ಲಿ ಉದ್ಯೋಗ ಮಾಡಿದ ವೇತನದ ಮೊತ್ತದ ಬಗ್ಗೆ ಪ್ರಶ್ನಿಸಿದರೆ, ಆ ಮೊತ್ತವನ್ನು ಲಕ್ಷದ್ವೀಪದ ಮೊಹಮ್ಮದ್‌ ಖಾಸಿಂ ಎಂಬಾತನ ನಂಬರು ನೀಡುತ್ತಾಳೆ. ಅದಕ್ಕೆ ಕರೆ ಮಾಡಿದರೆ ಆಕೆಯನ್ನು ನನ್ನ ಪತ್ನಿಯಾಗಿ ಕಳುಹಿಸಿಕೊಡುವಂತೆ ಆತ ಬೆದರಿಸುತ್ತಿದ್ದಾನೆ. ನಂತರ ಆಕೆ ಏಕಾಏಕಿ ಜು.27ರಂದು ಅಪರಿಚಿತರೊಂದಿಗೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ ಎಂದು ಚಿದಾನಂದ ಗುರುವಾರ ಜಿಲ್ಲಾ ಎಸ್ಪಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!