* ರೈತರು ಕೇವಲ ಏಕ ಬೆಳೆ ವಿಧಾನ ಬಿಟ್ಟು ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು
* ಮೀನು ಸಾಕಾಣಿಕೆ ಮಾಡಿದರೆ ಸುಭದ್ರ ಜೀವನ ಸಾಗಿಸಬಹುದು
* ನಿಮ್ಮೆಲ್ಲರ ಆಶೀರ್ವಾದದಿಂದ ಇಂದು ಕೃಷಿ ಸಚಿವನಾಗಿದ್ದೇನೆ: ಪಾಟೀಲ
ಹಿರೇಕೆರೂರು(ಸೆ.03): ರಾಜ್ಯದ ರೈತರ ಕಣ್ಣಿರು ಒರೆಸುವುದೇ ನನ್ನ ಮೊದಲ ಗುರಿ. ಈ ನಿಟ್ಟಿನಲ್ಲಿ ರೈತರಿಗೆ ನೆರವಾಗುವ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಿರ್ಮಾಣಗೊಂಡ ಅಂಗನವಾಡಿ ಹಾಗೂ ಜಲಜೀವನ್ ಯೋಜನೆಯಡಿ ಪ್ರತಿ ಮನೆ-ಮನೆಗೂ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಶ್ರೇಯೋಭಿವೃದ್ಧಿ ಭಯಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಯೋಜನೆಗಳನ್ನು ಜಾರಿಗೆ ತರುತ್ತಿವೆ. ರೈತರು ಕೇವಲ ಏಕ ಬೆಳೆ ವಿಧಾನ ಬಿಟ್ಟು ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು. ಹಾಗೂ ಕೃಷಿ ಜೊತೆಗೆ ಉಪ ಕಸುಬುಗಳಾದ ಹೈನುಗಾರಿಕೆ, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ, ಮೀನು ಸಾಕಾಣಿಕೆಗಳನ್ನು ಮಾಡಿದರೆ ಸುಭದ್ರ ಜೀವನ ಸಾಗಿಸಬಹುದು. ತಾಲೂಕಿನಲ್ಲಿ ಬೃಹತ್ ನೀರಾವರಿ ಯೋಜನೆಗಳು ಜಾರಿಯಾಗಿರುವ ಕಾರಣ ಮುಂದಿನ ವರ್ಷದಿಂದ ನಮ್ಮ ತಾಲೂಕಿಗೆ ಬರಗಾಲದ ಭಯವೇ ಇಲ್ಲ ಎಂದರು.
ಗ್ರಾಪಂ ಅಧ್ಯಕ್ಷ ಕಾಂತೇಶ ಈಳಗೇರ ಮಾತನಾಡಿ, ಸಾತೇನಹಳ್ಳಿಯಿಂದ ಹಂಸಭಾವಿ ಸೇರುವ ರಸ್ತೆ ತುಂಬಾ ಹದಗೆಟ್ಟಿದೆ. ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ನೆಹರು ಕುಟುಂಬ ಹೊಗಳದಿದ್ದರೆ ಡಿಕೆಶಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ
ನಿಮ್ಮೆಲ್ಲರ ಆಶೀರ್ವಾದದಿಂದ ಇಂದು ಕೃಷಿ ಸಚಿವನಾಗಿದ್ದೇನೆ. ಒಂದು ರಾಜೀನಾಮೆ ತಾಲೂಕು ಮತ್ತು ಜಿಲ್ಲೆಯ ಚಿತ್ರಣ ಬದಲಿಸಿತು. ಇಂದು ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಯಾಗಲು ಸಹಕಾರಿಯಾಯಿತು. ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಲು ನಾವೇ ಕಾರಣ ಎನ್ನುವುದನ್ನು ಮಾರ್ಮಿಕವಾಗಿ ನುಡಿದರು.
ಇದಕ್ಕೂ ಮೊದಲು ಚಿಕ್ಕೋಣ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣಗೊಂಡ ಅಂಬೇಡ್ಕರ್ ಭವನ, ಉರ್ದು ಶಾಲೆ ಕೊಠಡಿ, ಸಾತೇನಹಳ್ಳಿಯಲ್ಲಿ ನರೇಗಾ ಅಡಿ ನಿರ್ಮಾಣಗೊಂಡ ಗ್ರಾಮೀಣ ಗೋದಾಮು, ಕಾಂಕ್ರೀಟ್ ರಸ್ತೆ, ಸಂಜೀವಿನಿ ಶೆಡ್ ನಿರ್ಮಾಣ, ಮುದ್ದಿನಕೊಪ್ಪದಲ್ಲಿ ಅಂಗನವಾಡಿ ಕೇಂದ್ರಗಳನ್ನು ಉದ್ಘಾಟಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಬಿ.ಎಸ್, ಶಿಶು ಅಭಿವೃದ್ಧಿ ಅಧಿಕಾರಿ ಗೀತಾ ಬಾಳಿಕಾಯಿ, ಜಿಲ್ಲಾ ಬಿಜೆಪಿ ಉಪಾದ್ಯಕ್ಷ ಡಿ ಸಿ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಅಂಗನವಾಡಿ ಮೇಲ್ವಿಚಾರಕಿ ಚೆನ್ನಮ್ಮ ಹಿತ್ಲೇರ್, ಗ್ರಾಪಂ ಉಪಾಧ್ಯಕ್ಷೆ ಸವಿತಾ ತಳವಾರ, ಸದಸ್ಯರಾದ ಶಂಭು ಮಾನೇರ, ರಾಮಚಂದ್ರಪ್ಪ ಬಾರ್ಕಿ, ನಿರ್ಮಲಾ ಯಲಿವಾಳ, ನಿರ್ಮಲಾ ದೊಡ್ಡ ಉಪ್ಪಾರ, ಶಶಿಕಲಾ ಪೂಜಾರ, ಗೀತಾ ಭಜಂತ್ರಿ,ರುದ್ರಪ್ಪ ಹೊಂಬರಡಿ, ಪಿಡಿಒ ಸಿದ್ರಾಮ ಓಲೇಕಾರ, ಕಾರ್ಯದರ್ಶಿ ಹನುಮಂತಪ್ಪ ಜಿಗಳೇರ, ಬಿಜೆಪಿ ಮುಖಂಡ ದೊಡ್ಡಗೌಡ ಪಾಟೀಲ ಹಾಗೂ ಗ್ರಾಮಸ್ಥರು ಇದ್ದರು.