ಸ್ನಾನದ ಮನೆಯಲ್ಲಿದ್ದಾಗ್ಲೂ ಪ್ರಿಯಕರಗೆ ಕರೆ : ಹೆಂಡ್ತಿ ಅನೈತಿಕ ಸಂಬಂಧ ಗಂಡನ ಸಿಟ್ಟು ನೆತ್ತಿಗೇರಿಸಿತ್ತು

Kannadaprabha News   | Asianet News
Published : Dec 16, 2020, 09:12 AM IST
ಸ್ನಾನದ ಮನೆಯಲ್ಲಿದ್ದಾಗ್ಲೂ ಪ್ರಿಯಕರಗೆ ಕರೆ : ಹೆಂಡ್ತಿ ಅನೈತಿಕ ಸಂಬಂಧ ಗಂಡನ ಸಿಟ್ಟು ನೆತ್ತಿಗೇರಿಸಿತ್ತು

ಸಾರಾಂಶ

ಸ್ನಾನದ ಮನೆಯಲ್ಲಿದ್ದಾಗಲೂ ಅವನೊಂದಿಗೆ ಸಲ್ಲಾಪ ಮಾಡುತ್ತಿದ್ದ ಹೆಂಡತಿ ಚಾಳಿ ಗಂಡನ ಸಿಟ್ಟನ್ನು ನೆತ್ತಿಗೇರಿಸಿತ್ತು. ಕೊನೆಗೆ ಅಲ್ಲಾಗಿತ್ತು ಅನಾಹುತ

ಸರಗೂರು (ಡಿ.16):  ಮನೆ ಗೋಡೆ ಕುಸಿದು ಪತ್ನಿ ಮೃತಪಟ್ಟಳೆಂದು ಸುಳ್ಳು ದೂರು ನೀಡಿದ್ದ ಪತಿಯನ್ನು ಬೀಚನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಹೊನ್ನಮ್ಮನಕಟ್ಟೆಗ್ರಾಮದ ಸಲ್ಮಾ (28) ಮೃತ ಮಹಿಳೆ. ಈಕೆಯ ಪತಿ ನಯೀಮನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೃತಳ ಸಂಬಂಧಿಯೊಬ್ಬರು ಈಕೆಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆ, ಸಿಪಿಐ ಪುಟ್ಟಸ್ವಾಮಿ ಮಾರ್ಗದರ್ಶನದಲ್ಲಿ ಬೀಚನಹಳ್ಳಿ ಠಾಣೆಯ ಎಎಸ್‌ಐ ಕುಮಾರ್‌ ಮತ್ತು ಮುಖ್ಯ ಪೇದೆ ಶಿವಕುಮಾರ್‌ ಅವರು ನಯೀಮನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಸಹೋದ್ಯೋಗಿಗಳ ಸ್ನಾನದ ವಿಡಿಯೋ ಪ್ರಿಯಕರಗೆ ಕಳಿಸುತ್ತಿದ್ದ ನರ್ಸ್ : ಪ್ರಿಯಕರ ಅರೆಸ್ಟ್ ...

ವಿಚಾರಣೆ ಸಂದರ್ಭದಲ್ಲಿ ತನ್ನ ಪತ್ನಿಗೆ ಅನೈತಿಕ ಸಂಬಂಧ ಇದ್ದು, ಅನೇಕ ಬಾರಿ ಎಚ್ಚರಿಕೆ ಕೊಟ್ಟಿದ್ದೆ. ಆದರೆ ಆಕೆ ನನ್ನ ಮಾತನ್ನು ಕೇಳಲಿಲ್ಲ. ಆಗಿಂದಾಗ್ಗೆ ಆತನಿಗೆ ದೂರವಾಣಿ ಮಾಡುವುದು ನಡೆದೇ ಇತ್ತು. 

ಸ್ನಾನದ ಮನೆಯಲ್ಲಿದ್ದಾಗಲೂ ಆತನಿಗೆ ಕರೆ ಮಾಡಿದ್ದು ಗೊತ್ತಾಯಿತು. ನಮ್ಮಿಬ್ಬರ ನಡುವೆ ಜಗಳವಾಗಿ ಕಲ್ಲಿನ ಚಪ್ಪಡಿಗೆ ಡಿಕ್ಕಿ ಹೊಡೆಸಿದಾಗ ಆಕೆ ಮೃತಪಟ್ಟಳು ಎಂದು ಪತಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಘಟನೆ ನಡೆದಿದ್ದು, ಸೋಮವಾರ ಆರೋಪಿಯನ್ನು ಬಂಧಿಸಲಾಗಿದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!