ಪತಿ ಸೋಂಕಿಗೆ ಬಲಿಯಾಗಿ ವಾರದಲ್ಲಿ ಪತ್ನಿ, ಬಿಎಂಟಿಸಿ ಸಿಬ್ಬಂದಿ ಕೊರೋನಾಗೆ ಬಲಿ

By Kannadaprabha NewsFirst Published Jul 19, 2020, 7:55 AM IST
Highlights

ರಾಜಧಾನಿಯಲ್ಲಿ ಆರ್ಭಟಿಸುತ್ತಿರುವ ಕೊರೋನಾ ಸೋಂಕಿಗೆ ಈವರೆಗೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ 143 ಮಂದಿ ತುತ್ತಾಗಿದ್ದು, ಓರ್ವ ಸಿಬ್ಬಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಬೆಂಗಳೂರು(ಜು.19): ರಾಜಧಾನಿಯಲ್ಲಿ ಆರ್ಭಟಿಸುತ್ತಿರುವ ಕೊರೋನಾ ಸೋಂಕಿಗೆ ಈವರೆಗೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ 143 ಮಂದಿ ತುತ್ತಾಗಿದ್ದು, ಓರ್ವ ಸಿಬ್ಬಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಈವರೆಗಿನ 143 ಪ್ರಕರಣಗಳ ಪೈಕಿ 50 ಮಂದಿ ಸೋಂಕಿತರು ನಗರದ ನಿಗದಿತ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ, ಸಂಚಾರ ನಿಯಂತ್ರಕರು, ಸಹಾಯಕ ಸಂಚಾರ ಅಧೀಕ್ಷಕ ಸೇರಿದಂತೆ ನಿಗಮದ ವಿವಿಧ ವಿಭಾಗಗಳ ನೌಕರರು ಸೋಂಕಿಗೆ ಒಳಗಾಗಿದ್ದಾರೆ.

ಬೆಂಗ್ಳೂರಲ್ಲಿ 30 ಸಾವಿರ ಗಡಿ ಸನಿಹಕ್ಕೆ ಕೊರೋನಾ ಸೋಂಕಿತರ ಸಂಖ್ಯೆ

ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ದುರಂತವೆಂದರೆ, ಇವರ ಸಾವಿಗೂ ವಾರದ ಹಿಂದೆ ಪತಿಯೂ ಸಹ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರು.

ನಿಗಮದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ನೌಕರರು ಆತಂಕದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಲಾಕ್‌ಡೌನ್‌ ಇರುವುದರಿಂದ ಕೇವಲ ಅಗತ್ಯ ಸೇವೆಗೆ ನಿಯೋಜಿಸಿರುವ ಸುಮಾರು 140 ಬಸ್‌ಗಳನ್ನು ಮಾತ್ರ ಕಾರ್ಯಾಚರಣೆ ಮಾಡಲಾಗುತ್ತಿದೆ.

click me!