ಕಾಂಗ್ರೆಸ್ ಅಭ್ಯರ್ಥಿಗೆ ನಡುಕ ಹುಟ್ಟಿಸಿದೆ ಕೋಡಿ ಮಠದ ಭವಿಷ್ಯ

Published : Sep 23, 2019, 02:55 PM IST
ಕಾಂಗ್ರೆಸ್ ಅಭ್ಯರ್ಥಿಗೆ ನಡುಕ ಹುಟ್ಟಿಸಿದೆ ಕೋಡಿ ಮಠದ ಭವಿಷ್ಯ

ಸಾರಾಂಶ

ರಾಜ್ಯದಲ್ಲಿ ಅಕ್ಟೋಬರ್ 22ರಂದು 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಆದರೆ ಇದರ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗೆ ಆತಂಕ ಎದುರಾಗಿದೆ. 

ಮೈಸೂರು [ಸೆ.23]: ರಾಜ್ಯದ 15 ಕ್ಷೇತ್ರಗಳ ಉಪಚುನಾಣೆಗೆ ದಿನಾಂಕ ನಿಗದಿಯಾಗಿದೆ. ಇತ್ತ JDS ಶಾಸಕ ವಿಶ್ವನಾಥ್ ಅನರ್ಹತೆಯಿಂದ ತೆರವಾದ ಹುಣಸೂರು ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯುತ್ತಿದ್ದು ಇಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗೆ ಈಗಲೇ ತೀವ್ರ ಭಯ ಆರಂಭವಾಗಿದೆ. 

ಕೋಡಿ ಮಠದ ಶ್ರೀಗಳ ಭವಿಷ್ಯದ ಹಿನ್ನೆಲೆ ಚುನಾವಣೆ ಎದುರಿಸುವ ಮುನ್ನವೇ ತಮ್ಮ ಮನಸಿನ ಆತಂಕ ಹೊರಹಾಕಿದ್ದಾರೆ.  ಸಂಭಾವ್ಯ ಅಭ್ಯರ್ಥಿಯಾಘಿರುವ ಎಚ್.ಪಿ ಮಂಜುನಾಥ್ ಕೆಲವರು ಖುಷಿಯಲ್ಲಿದ್ದರೆ, ಕೆಲವರಿಗೆ ಚಿಂತೆ ಇದೆ. ಚುನಾವಣೆ ಬಳಿಕ ನಮ್ಮ ಸ್ಥಿತಿ ನೋಡಿ ಜನರಿಗೆ ಕರುಣೆ ಬರಬಹುದು ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉಪಚುನಾವಣೆ ಯಾರಿಗೂ ಬೇಕಿರಲಿಲ್ಲ. ಆದರೂ ಬಂದಿದೆ. ಇದು SSLC ಪರೀಕ್ಷೆ ರೀತಿ ಕಬ್ಬಿಣದ ಕಡಲೆ.  ದೇವರಾಜ ಅರಸು ಕಾಲದಿಂದ ಇಲ್ಲಿ ಮೂರು ಬೈ ಎಲೆಕ್ಷನ್ ಆಗಿದೆ. ಆದರೆ ಅಂದಿಗೂ ಇಂದಿಗೂ ಟಫ್ ಆಗಿದೆ. ಆಡಳಿತ ಪಕ್ಷ ಎದುರಿಸಿ ಚುನಾವಣೆ ನಡೆಸುವುದು ಕಷ್ಟ. ಅನರ್ಹರ ಪ್ಲಸ್ ಪಾಯಿಂಟ್ ಆಗಬಹುದು ಎನ್ನುವ ನಂಬಿಕೆ ಇದೆ ಎಂದರು.

ಈ ಚುನಾವಣೆಯಲ್ಲಿ ಜಿಟಿ.ದೇವೇಗೌಡ ಅವರ ಬೆಂಬಲವನ್ನೂ ಕೇಳುತ್ತೇನೆ. ಜಿಟಿಡಿ ಒಂದು ರೀತಿ ಕೋಡಿ ಮಠದ ಸ್ವಾಮಿ ರೀತಿ.  ಅವರು ಬಾಯಲ್ಲಿ ಏನೇ ಹೇಳಿದರೂ ಅದು ನಿಜ ಆಗುತ್ತದೆ.  
11 ವರ್ಷದ ಹಿಂದೆ ಅವರು ಹೇಳಿದಂತೆ ನಾನು ಎಂಎಲ್‌ಎ ಆದೆ ಎಂದರು. 

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

PREV
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್