* ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯ
* ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ
* ಹುಸಿ ಭರವಸೆ ಹುಟ್ಟಿಸಿದ್ದ ಬಿಜೆಪಿ ನಾಯಕರ ಬಣ್ಣ ಬಯಲು
ಕಾರಟಗಿ(ಸೆ.10): ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯ ಹಾಗೂ ಶಾಸಕರ ದುರಾಡಳಿತಕ್ಕೆ ಬೇಸತ್ತು ಕಾರ್ಯಕರ್ತರೇ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಹೇಳಿದ್ದಾರೆ.
ಬಿಜೆಪಿ ತೊರೆದ ತಾಲೂಕಿನ ನಾನಾ ಗ್ರಾಮಗಳ ನೂರಾರು ಕಾರ್ಯಕರ್ತರನ್ನು ಪಟ್ಟಣದ ತಮ್ಮ ನಿವಾಸದಲ್ಲಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.ದೇಶ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದರೆ ಅಭಿವೃದ್ಧಿಯಾಗುತ್ತದೆ ಎಂದು ಹುಸಿ ಭರವಸೆಗಳನ್ನು ಹುಟ್ಟಿಸಿದ್ದ ಬಿಜೆಪಿ ನಾಯಕರ ಬಣ್ಣ ಬಯಲಾಗಿದೆ. ಅಧಿಕಾರಕ್ಕೆ ಬಂದಾಗಿನಿಂದ ದೇಶ ಹಾಗೂ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್-19 ಸೋಂಕು ನಿಯಂತ್ರಣದಲ್ಲಿ ವಿಫಲ, ಅವೈಜ್ಞಾನಿಕ ಲಾಕ್‌ಡೌನ್, ಉದ್ಯೋಗ ಕುಸಿತ, ಬೆಲೆ ಹೆಚ್ಚಳ ಹಾಗೂ ಸಾರ್ವಜನಿಕ ಉದ್ದಿಮೆಗಳ ಮಾರಾಟದಿಂದ ದೇಶವನ್ನೇ ದಾರಿದ್ರ್ಯಕ್ಕೆ ನೂಕಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಕಾರ್ಯಕರ್ತರು ಬಿಜೆಪಿ ತೊರೆಯಲಿದ್ದಾರೆ ಎಂದರು.
undefined
60 ವರ್ಷ ಕಾಶ್ಮೀರ ಜನತೆಯನ್ನ ಅಮಲಿನಲ್ಲಿ ಇಟ್ಟಿದ್ದು ಯಾರು?: ತಂಗಡಿಗೆ ನಾರಾಯಣ ಸ್ವಾಮಿ ತಿರುಗೇಟು
ಇದೇ ವೇಳೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ತೊಂಡಿಹಾಳ ನೇತೃತ್ವದಲ್ಲಿ ವಿರೂಪಾಕ್ಷಿ ಕುಂಟೋಜಿ, ಮರಿಸ್ವಾಮಿ ಬರಗೂರು, ಹಡಚಪ್ಪ ಚಲವಾದಿ, ಬಸವರಾಜ ಬರಗೂರು, ಚನ್ನಪ್ಪ ತೊಂಡಿಹಾಳ, ದೇವೆಂದ್ರಪ್ಪ ತೊಂಡಿಹಾಳ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ, ಶರಣಪ್ಪ ಪರಕಿ ಸೇರಿದಂತೆ ಇತರರಿದ್ದರು.