* ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಹುಲಿಗೆಮ್ಮ ದೇವಸ್ಥಾನ
* ಇಂದು ಬೆಳಿಗ್ಗೆ ಅಗ್ನಿಕುಂಡ ಪಾಯಸ ಕಾರ್ಯಕ್ರಮ
* ಪಾಯಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಕಷ್ಟು ಜನರು
ಕೊಪ್ಪಳ(ಜೂ.06): ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಜಿಲ್ಲೆಯ ಐತಿಹಾಸಿಕ ಹುಲಿಗೆಮ್ಮ ದೇವಿಯ ಇಂದು(ಭಾನುವಾರ) ನಡೆದಿದೆ. ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ದೇವಸ್ಥಾನದಲ್ಲಿ ಜಿಲ್ಲಾಡಳಿತದಿಂದಲೇ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ ಎಂದು ತಿಳಿದು ಬಂದಿದೆ.
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಹುಲಿಗೆಮ್ಮ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಅಗ್ನಿಕುಂಡ ಪಾಯಸ ಕಾರ್ಯಕ್ರಮ ನಡೆದಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಿಬ್ಬಂದಿ, ಪೂಜಾರಿ ಹೊರತು ಪಡಿಸಿ ಇತರರಿಗೆ ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ.
ಕೊಪ್ಪಳ: ಸುಡುವ ಬಿಸಿಲು ಲೆಕ್ಕಿಸದೇ ಗಾಲಿಕುಂಟೆ ತಳ್ಳಿ 3 ಎಕರೆ ಹೊಲ ಎಡೆಹೊಡೆದ ರೈತ..!
ಆದರೂ ಕೂಡ ಸಾಕಷ್ಟು ಜನರಿಗೆ ಭಾಗವಹಿಸಿ ಅಗ್ನಿಕುಂಡ ಪಾಯಸ ಕಾರ್ಯಕ್ರಮ ನಡೆದಿದೆ ಎಂದು ತಿಳಿದು ಬಂದಿದೆ. ಈ ಮೂಲಕ ದೇವಸ್ಥಾನದಲ್ಲಿಯೇ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona