ರಾಜ್ಯ ಸರ್ಕಾರದ ಜಾರಿಗೆ ತಂದಿರುವ ಶಕ್ತಿ ಯೋಜನೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.12): ರಾಜ್ಯ ಸರ್ಕಾರದ ಜಾರಿಗೆ ತಂದಿರುವ ಶಕ್ತಿ ಯೋಜನೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಜನೆ ಆರಂಭವಾದ ಕ್ಷಣದಿಂದ ಜೂ.12ರವರೆಗೆ ಸಂಜೆ 6ರ ವರೆಗೂ ಚಿಕ್ಕಮಗಳೂರು ವಿಭಾಗದಲ್ಲಿ 10 ಸಾವಿರದ 890 ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರು ವಿಭಾಗಕ್ಕೆ ಒಳಪಡುವ ಚಿಕ್ಕಮಗಳೂರು, ಕಡೂರು, ಮೂಡಿಗೆರೆ, ಅರಸಿಕೆರೆ, ಸಕಲೇಶಪುರ ಹಾಗೂ ಬೇಲೂರು ಡಿಪೋಗಳಿಂದ ಹೊರಡುವ ಕೆಎಸ್ಆರ್ಟಿಸಿ ಬಸ್ಗಳಲ್ಲಿ 10 ಸಾವಿರದ 890 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.
433 ಗ್ರಾಮಗಳು ಸರ್ಕಾರಿ ಬಸ್ ಸೌಲಭ್ಯದಿಂದ ವಂಚಿತ
ನಿನ್ನೆ ಮಧ್ಯಾಹ್ನ 1 ಗಂಟೆಗೆ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ರಾತ್ರಿ 10 ಗಂಟೆಯವರೆಗೆ ಮಹಿಳೆಯರಿಗೆ ಉಚಿತವಾಗಿ ನೀಡಿರುವ ಟಿಕೆಟ್ಗಳ ಒಟ್ಟು ಮೊತ್ತ 4,07,440 ರೂ. ಚಿಕ್ಕಮಗಳೂರು ವಿಭಾಗದಲ್ಲಿ ಒಂದು ದಿನಕ್ಕೆ ಪ್ರಯಾಣಿಕರಿಂದ ಸುಮಾರು 60 ಲಕ್ಷ ರುಪಾಯಿ ಸಂಗ್ರಹವಾಗುತ್ತಿದ್ದು, ಇದರಲ್ಲಿ ಮಹಿಳೆಯರ ಪಾಲು ಶೇ. 40ಕ್ಕಿಂತ ಹೆಚ್ಚಿರುತ್ತದೆ. ಈ ಹಣ ಖೋತವಾಗಲಿದೆ.
ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭ, ಟಿಕೆಟ್ ದರ ಮಾಹಿತಿ ಇಲ್ಲಿದೆ
ಚಿಕ್ಕಮಗಳೂರು ವಿಭಾಗಕ್ಕೆ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳು ಹಾಸನ ಜಿಲ್ಲೆಯ ಅರಸೀಕೆರೆ, ಸಕಲೇಶಪುರ ಮತ್ತು ಬೇಲೂರು ತಾಲೂಕುಗಳ ಸೇರ್ಪಡೆಗೊಳ್ಳಲಿವೆ. ಇಷ್ಟು ತಾಲೂಕುಗಳಲ್ಲಿ 2020 ಗ್ರಾಮಗಳು ಬರುತ್ತಿದ್ದು, 1637 ಹಳ್ಳಿಗಳಲ್ಲಿ ಬಸ್ಸೌಲಭ್ಯವಿದೆ.ಉಳಿದ 433 ಗ್ರಾಮಗಳು ಸರ್ಕಾರಿ ಬಸ್ ಸೌಲಭ್ಯದಿಂದ ವಂಚಿತವಾಗಿವೆ.ಈ ಗ್ರಾಮಗಳು ಖಾಸಗಿ ಬಸ್, ಆಟೋಗಳು ಮತ್ತು ಜೀಪ್ಗಳನ್ನು ಅವಲಂಬಿಸಬೇಕಾಗಿದೆ.
Toll Price Hike: ಸದ್ದಿಲ್ಲದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ದರ ಏರಿಕೆ
ಖಾಸಗಿ ಜೀಪ್ ಮತ್ತು ಆಟೋಗಳು ಸಂಚಾರ: ಮಲೆನಾಡಿನ ಶೃಂಗೇರಿ ತಾಲೂಕಿನಲ್ಲಿ 48 ಗ್ರಾಮಗಳಿವೆ. ಅವುಗಳಲ್ಲಿ 14 ಗ್ರಾಮಗಳಲ್ಲಿ ಬಸ್ ಓಡಾಡುತ್ತಿದ್ದರೆ, 34 ಹಳ್ಳಿಗಳಲ್ಲಿ ಬಸ್ಸೌಲಭ್ಯವೇ ಇಲ್ಲವಾಗಿದೆ.ಕೊಪ್ಪದಲ್ಲಿ 80 ಗ್ರಾಮಗಳಿದ್ದು, 28ಕ್ಕೆ ಬಸ್ಸೇವೆ ಇದ್ದರೆ 53 ಹಳ್ಳಿಗಳಿಗೆ ಬಸ್ ಸಂಚಾರ ಇಲ್ಲವಾಗಿದೆ. ನರಸಿಂಹರಾಜಪುರದಲ್ಲಿ 58 ಹಳ್ಳಿಗಳಿವೆ ಅದರಲ್ಲಿ 10 ಗ್ರಾಮದಲ್ಲಿ ಬಸ್ ಓಡಾಡುತ್ತಿದ್ದರೆ, 48 ಹಳ್ಳಿಗಳು ಬಸ್ಸೌಲಭ್ಯದಿಂದ ವಂಚಿತವಾಗಿವೆ.ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗಗಳು ಅರಣ್ಯ, ಗುಡ್ಡಗಾಡು ತಿರುವಿನಿಂದ ಕೂಡಿದ ಚಿಕ್ಕ ರಸ್ತೆಗಳಾಗಿದ್ದರಿಂದ ರಾಜ್ಯರಸ್ತೆಸಾರಿಗೆ ನಿಗಮದಿಂದ ವಾಹನಗಳು ಕಾರ್ಯಚರಣೆಯಾಗದ ಸ್ಥಳಗಳಿಗೆ ಖಾಸಗಿ ಬಸ್ಗಳ ಬದಲು ಖಾಸಗಿ ಜೀಪ್ ಮತ್ತು ಆಟೋಗಳು ಸಂಚರಿಸುತ್ತಿವೆ.