* ವಿಜೃಂಭಣೆಯಿಂದ ಜರುಗಿದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ
* ಕಣ್ಣಾಯಿಸಿದಷ್ಟು ಜನವೋ ಜನ
* ತೇರಿನತ್ತ ಬಾಳೆಹಣ್ಣು ಎಸೆದು ಪಾವನವಾಗ್ತಿರುವ ಲಕ್ಷಾಂತರ ಭಕ್ತರು
ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
undefined
ಚಿತ್ರದುರ್ಗ, (ಮಾ.20): ಆತ ಕಾಯಕಯೋಗಿ, ಮಾಡಿದಷ್ಟು ನೀಡು ಭೀಕ್ಷೆ ಎಂಬ ಸಂದೇಶ ನಾಡಿಗೆ ಸಾರಿದ ಅಪ್ಪಟ ಅವಧೂತ. ಇಂದು(ಭಾನುವಾರ) ಆ ಪುಣ್ಯ ಪುರುಷನ ಬೃಹತ್ ರಥೋತ್ಸವ ನಡೆಯಿತು. ಚಿತ್ತ ನಕ್ಷತ್ರದಲ್ಲಿ ನಡೆದ ಪರಿಷೆಗೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ಹಾಗಾದ್ರೆ ಬನ್ನಿ ಮಧ್ಯ ಕರ್ನಾಟಕದ ಬೃಹತ್ ಜಾತ್ರೆ ಮಹೋತ್ಸವ ಹೇಗಿತ್ತು ಅಂತ ನೋಡ್ಕೊಂಡ್ ಬರೋಣಾ.
ಕಣ್ಣಾಯಿಸಿದಷ್ಟು ಜನವೋ ಜನ., ತೇರಿನತ್ತ ಬಾಳೆಹಣ್ಣು ಎಸೆದು ಪಾವನವಾಗ್ತಿರುವ ಲಕ್ಷಾಂತರ ಭಕ್ತರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪುಣ್ಯ ಕ್ಷೇತ್ರದಲ್ಲಿ. ಹೌದು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಬೃಹತ್ ರಥೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು.
ಗಂಡುಮೆಟ್ಟಿನ ನಾಡು ಹುಬ್ಬಳ್ಳಿ ಜಗ್ಗಲಿಗೆ ಹಲಗಿ ಹಬ್ಬದ ಝಲಕ್, ವಾಹ್ಹ್ ಅದೆಂಥಾ ಹುರುಪು, ಉತ್ಸಾಹ
ಕಳೆದ ಒಂದು ವಾರದಿಂದಲೂ ಕೂಡಾ ವಿವಿಧ ಪೂಜಾ ಕೈಂಕರ್ಯಗಳು ಶ್ರೀ ಕ್ಷೇತ್ರದಲ್ಲಿ ನಡೆದು ಇಂದು ರಥೋತ್ಸವ ಜರುಗಿತು. ಇನ್ನೂ ಈ ಬೃಹತ್ ಜಾತ್ರೆಗೆ ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಜನರು ಆಗಮಿಸಿ ತಮ್ಮ ಹರಕೆಗಳನ್ನ ಸಲ್ಲಿಸಿದ್ರು. ಅಲ್ಲದೆ ಕಳೆದ ಎರಡು ವರ್ಷಗಳಿಂದ ಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಕೊರೋನ ಕರಿಛಾಯೇ ಆವರಿಸಿತ್ತು. ಆದ್ರೆ ಈ ಬಾರಿ ಕೋವೀಡ್ ಇಲ್ಲದ ಕಾರಣ ಚಿತ್ರದುರ್ಗ ಜಿಲ್ಲಾಡಳಿತ ಬೃಹತ್ ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡಿತ್ತು.
ಈ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಯ ಸಮಯದ ಚಿತ್ತ ನಕ್ಷತ್ರದಲ್ಲಿ ಬೃಹತ್ ರಥೋತ್ಸವ ನಡೆಯಿತು. ಇನ್ನೂ ರಥದ ಬೀದಿಯಲ್ಲಿ ನಾಲ್ಕು ಗಾಲಿದ ರಥ ಹೊರಡುತ್ತಿದ್ದಂತೆ ಭಕ್ತ ಸಾಗರ ಕೇಕೆ ಶಿಳ್ಳೆ ಹಾಕುವ ಮೂಲಕ ಸಂಭ್ರಮಿಸಿತು. ಇನ್ನೂ ಇದೇ ವೇಳೆ ರಥದತ್ತ ಭಕ್ತರು ಬಾಳೆಹಣ್ಣು ಎಸೆಯುವ ಮೂಲಕ ಹಟ್ಟಿ ತಿಪ್ಪೇರುದ್ರಸ್ವಾಮಿಗೆ ಭಕ್ತಿ ಸಮರ್ಪಣೆ ಮಾಡಿದ್ರು.
ಮಧ್ಯ ಕರ್ನಾಟಕದ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪುಣ್ಯಕ್ಷೇತ್ರ ನಾಯಕನಹಟ್ಟಿಯ ಕಾಯಕಯೋಗಿ, ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಾರಿದ ಮಹಾಮಹಿಮ ಅವದೂತ ಶ್ರೀ ಗುರು ತಿಪ್ಪೇಸ್ವಾಮಿಯ ರಥೋತ್ಸವದಲ್ಲಿ ಭಾಗವಹಿಸಿ, ಅವದೂತ ಶ್ರೀಗುರು ತಿಪ್ಪೇಸ್ವಾಮಿಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು. pic.twitter.com/0eKWTjLQYP
— B Sriramulu (@sriramulubjp)ಇನ್ನೂ ದೇವಸ್ಥಾನದ ರಥಕ್ಕೆ ಚೂರ್ ಬೆಲ್ಲ , ಮೆಣಸು ತೂರಿದ ಭಕ್ತರು, ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ಕೊಬರಿ, ಎಳ್ಳು, ಶೇಂಗಾ, ಸುಡುವ ಮೂಲಕ ಲಕ್ಷಾಂತರ ಮಂದಿ ಭಕ್ತರು ತಮ್ಮ ಹರಕೆ ಸಲ್ಲಿಸಿದ್ರು. ಅಲ್ಲದೇ ರಥದ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆಯಲ್ಲಿ ಚಳ್ಳಕೆರೆಯ ಪ್ರಕಾಶ್ ಎಂಬ ವ್ಯಕ್ತಿ 16 ಲಕ್ಷದ ಬೃಹತ್ ಮೊತ್ತಕ್ಕೆ ಮುಕ್ತಿ ಬಾವುಟ ಪಡೆದ್ರು. ಇನ್ನೂ ಇದೇ ಜಿಲ್ಲಾ ಪೊಲೀಸ್ ಇಲಾಖೆಯೂ ಜಾತ್ರೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಬಾರಿ ಬಿಗಿ ಭದ್ರತೆಯನ್ನ ವಹಿಸಿತ್ತು.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ಶ್ರೀರಾಮುಲು, ತೇರನ್ನ ಏರಿ ಸ್ವಾಮಿಗೆ ಪೂಜೆ ಸಲ್ಲಿಸಿದ್ರು. ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಎಸ್ಪಿ ಕೆ.ಪರಶುರಾಮ್ ಸೇರಿ ಹಲವರು ಅಂದ್ರು ಭಕ್ತರು.
ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಕೊರೋನಾ ಕರಿ ನೆರಳಿಂದ ಸರಳವಾಗಿ ನಡೆದಿದ್ದ ರಥೋತ್ಸವ ಇಂದು ಅದ್ದೂರಿಯಾಗಿ ನಡೆಯಿತು. ನಾಡಿನ ಹಲವೆಡೆಗಳಿಂದ ಬಂದಿದ್ದ ಭಕ್ತರು ಹಟ್ಟಿ ಜಾತ್ರೆಯ ರಥೋತ್ಸವದಲ್ಲಿ ಭಾಗಿಯಾಗಿ ತಿಪ್ಪೇರುದ್ರಸ್ವಾಮಿ ಕೃಪೆಗೆ ಪಾತ್ರರಾದ್ರು.