Chitradurga: ತಿಪ್ಪೇರುದ್ರಸ್ವಾಮಿ ಬೃಹತ್ ರಥೋತ್ಸವ: ಲಕ್ಷಾಂತರ ಮಂದಿ ಭಾಗಿ

By Suvarna NewsFirst Published Mar 20, 2022, 8:35 PM IST
Highlights

ಮಧ್ಯ ಕರ್ನಾಟಕದ ಸುಪ್ರಸಿದ್ಧ ಪುಣ್ಯಕ್ಷೇತ್ರ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ಕ್ಷೇತ್ರ. ಹಟ್ಟಿ ತಿಪ್ಪಜ್ಜನ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬೃಹತ್ ರಥೋತ್ಸವ ನಡೆಯಿತು.

ಕಿರಣ್.ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮಾ.20): ಮಧ್ಯ ಕರ್ನಾಟಕದ ಸುಪ್ರಸಿದ್ಧ ಪುಣ್ಯಕ್ಷೇತ್ರ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ಕ್ಷೇತ್ರ. ಹಟ್ಟಿ ತಿಪ್ಪಜ್ಜನ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬೃಹತ್ ರಥೋತ್ಸವ ನಡೆಯಿತು. ದಕ್ಷಿಣ ಭಾರತದಲ್ಲೇ ಅತಿ ಎತ್ತರದ ರಥೋತ್ಸವ ಸಾಗುವ ಪುಣ್ಯಕ್ಷೇತ್ರಗಳಲ್ಲಿ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಂದಾಗಿದೆ. ತಿಪ್ಪಜ್ಜನ‌ ಜಾತ್ರೆಯ ಝಲಕ್‌ ಇಲ್ಲಿದೆ.

ಮಾಡಿದಷ್ಟು ನೀಡು ಭಿಕ್ಷೆ ಎಂದು ಕಾಯಕಯೋಗಿಯಾಗಿ ಬದುಕು ಸಾಗಿಸಿದ್ದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬರ್ತಾರೆ. ಆದ್ರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾ ಮಾರಿ ಕಾರಣರಿಂದ ಸರಳವಾಗಿಯೇ ನಡೆದಿದ್ದ ಜಾತ್ರೆ ಈ ಬಾರಿ ಅದ್ದೂರಿ ಸಂಭ್ರಮದೊಂದಿಗೆ ನಡೆಯಿತು. ಅದ್ರಲ್ಲಂತೂ ಹಟ್ಟಿ ತಿಪ್ಪಜ್ಜನ ಜಾತ್ರೆಯ ಸಂದರ್ಭದಲ್ಲಿ ಅತಿ ಎತ್ತರದ ರಥೋತ್ಸವ ಎಳೆಯುವಾಗ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಆ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.

ಜಾತ್ರೆಯ ವಿಶೇಷ: ತಿಪ್ಪಜ್ಜನ ಜಾತ್ರೆಗೆ ಆಗಮಿಸುವ ಭಕ್ತರು ಮೊದಲು ದೇವಸ್ಥಾನದ ಮುಂಭಾಗದಲ್ಲೇ ಕೊಬ್ಬರಿ ಸುಡುವುದು ವಾಡಿಕೆಯಾಗಿದೆ. ತಾವು ಮಾಡಿಕೊಂಡ ಹರಕೆಗಳನ್ನು ತೀರಿಸುವ ನಿಟ್ಟಿನಲ್ಲಿ ಕೊಬ್ಬರಿ ಸುಡುವುದು, ದೇವರಿಗೆ ಕಾಯಿ, ಹಣ್ಣಿನ ಮಂಗಳಾರತಿ ಮಾಡಿಸುವುದು ಮಾಡ್ತಾರೆ.  ಇದರಿಂದಾಗಿ ನಮ್ಮ ಇಷ್ಟಾರ್ಥಗಳೆಲ್ಲಾ ನೆರವೇರುತ್ತವೆ ಎಂಬುದು ಎಲ್ಲಾ ಭಕ್ತರ‌ ನಂಬಿಕೆ. ಈ ಪುಣ್ಯಕ್ಷೇತ್ರಕ್ಕೆ ಕರ್ನಾಟಕವಲ್ಲದೇ ಬೇರೆ ಬೇರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ‌ ಪಡೆಯತ್ತಾರೆ. 

ಭಕ್ತ ಸಾಗರದ ನಡುವೆ ರಥೋತ್ಸವ: ಕೊಟ್ಟೂರೇಶ್ವರನ ಜತೆಗೆ ದೇವರಾದ ಪುನೀತ್ ರಾಜ್‍ಕುಮಾರ್...!

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯ‌ ಮೂರನೇ ದಿನದ ಚಿತ್ತಾ ನಕ್ಷತ್ರದ ಶುಭ ಘಳಿಗೆಯಲ್ಲಿ ಮಹಾ ರಥೋತ್ಸವ ನೆರವೇರುತ್ತದೆ. ಸಂಜೆ ೪ ಗಂಟೆಗೆ ಸರಿಯಾಗಿ ತಿಪ್ಪಜ್ಜನ ಬೃಹತ್ ರಥೋತ್ಸವ ಎಳೆಯೋದಕ್ಕೆ ಭಕ್ತರು ಮುಂದಾಗ್ತಾರೆ ಆ ವೇಳೆಯಲ್ಲಂತೂ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಇಂದು ಕೂಡ ಅನೇಕ‌ ಭಾಗಗಳಿಂದ ಬಂದ ಭಕ್ತರು ಹಟ್ಟಿ ತಿಪ್ಪೇರುದ್ರಸ್ವಾಮಿಯ ಜಾತ್ರೆಯಲ್ಲಿ ಬೃಹತ್ ತೇರು ಎಳೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.



ಹೀಗೆ ಕಣ್ಣಾಯಿಸಿದಷ್ಟು ಜನವೋ ಜನ., ತೇರಿನತ್ತ ಬಾಳೆಹಣ್ಣು ಎಸೆದು ಪಾವನವಾಗ್ತಿರುವ ಲಕ್ಷಾಂತರ ಭಕ್ತರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪುಣ್ಯ ಕ್ಷೇತ್ರದಲ್ಲಿ. ಹೌದು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಬೃಹತ್ ರಥೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು. ಕಳೆದ ಒಂದು ವಾರದಿಂದಲೂ ಕೂಡಾ ವಿವಿಧ ಪೂಜಾ ಕೈಂಕರ್ಯಗಳು ಶ್ರೀ ಕ್ಷೇತ್ರದಲ್ಲಿ ನಡೆದು ಇಂದು ರಥೋತ್ಸವ ಜರುಗಿತು. ಇನ್ನೂ ಈ ಬೃಹತ್ ಜಾತ್ರೆಗೆ ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಜನರು ಆಗಮಿಸಿ ತಮ್ಮ ಹರಕೆಗಳನ್ನ ಸಲ್ಲಿಸಿದರು. 

ಅಲ್ಲದೆ ಕಳೆದ ಎರಡು ವರ್ಷಗಳಿಂದ ಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಕರೋನ ಕರಿಛಾಯೇ ಆವರಿಸಿತ್ತು. ಆದ್ರೆ ಈ ಬಾರಿ ಕೊವೀಡ್ ಇಲ್ಲದ ಕಾರಣ ಚಿತ್ರದುರ್ಗ ಜಿಲ್ಲಾಡಳಿತ ಬೃಹತ್ ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಯ ಸಮಯದ ಚಿತ್ತ ನಕ್ಷತ್ರದಲ್ಲಿ ಬೃಹತ್ ರಥೋತ್ಸವ ನಡೆಯಿತು. ಇನ್ನೂ ರಥದ ಬೀದಿಯಲ್ಲಿ ನಾಲ್ಕು ಗಾಲಿದ ರಥ ಹೊರಡುತ್ತಿದ್ದಂತೆ ಭಕ್ತ ಸಾಗರ ಕೇಕೆ ಶಿಳ್ಳೆ ಹಾಕುವ ಮೂಲಕ ಸಂಭ್ರಮಿಸಿತು. ಇನ್ನೂ ಇದೇ ವೇಳೆ ರಥದತ್ತ ಭಕ್ತರು ಬಾಳೆಹಣ್ಣು ಎಸೆಯುವ ಮೂಲಕ ಹಟ್ಟಿ ತಿಪ್ಪೇರುದ್ರಸ್ವಾಮಿಗೆ ಭಕ್ತಿ ಸಮರ್ಪಣೆ ಮಾಡಿದರು.

ಬೆಳ್ಳಂಬೆಳಗ್ಗೆ ನಡೆದ ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ: ರಾಜ್ಯಕ್ಕೆ ಮಾದರಿಯಾದ ‌ಗವಿಮಠ ಶ್ರೀ

ಇನ್ನೂ ದೇವಸ್ಥಾನದ ರಥಕ್ಕೆ ಚೂರ್ ಬೆಲ್ಲ, ಮೆಣಸು ತೂರಿದ ಭಕ್ತರು, ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ಕೊಬರಿ, ಎಳ್ಳು, ಶೇಂಗಾ, ಸುಡುವ ಮೂಲಕ ಲಕ್ಷಾಂತರ ಮಂದಿ ಭಕ್ತರು ತಮ್ಮ ಹರಕೆ ಸಲ್ಲಿಸಿದ್ರು. ಅಲ್ಲದೇ ರಥದ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆಯಲ್ಲಿ ಚಳ್ಳಕೆರೆಯ ಪ್ರಕಾಶ್ ಎಂಬ ವ್ಯಕ್ತಿ 16 ಲಕ್ಷದ ಬೃಹತ್ ಮೊತ್ತಕ್ಕೆ ಮುಕ್ತಿ ಬಾವುಟ ಪಡೆದ್ರು. ಇನ್ನೂ ಇದೇ  ಜಿಲ್ಲಾ ಪೊಲೀಸ್ ಇಲಾಖೆಯೂ ಜಾತ್ರೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಬಾರಿ ಬಿಗಿ ಭದ್ರತೆಯನ್ನ ವಹಿಸಿತ್ತು.

ಈ ಸಂದರ್ಭದಲ್ಲಿ ಸಾರಿಗೆ ಸಚಿವ ಶ್ರೀರಾಮುಲು, ತೇರನ್ನ ಏರಿ ಸ್ವಾಮಿಗೆ ಪೂಜೆ ಸಲ್ಲಿಸಿದ್ರು. ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಎಸ್ಪಿ ಕೆ.ಪರಶುರಾಮ್ ಸೇರಿ ಹಲವರು ಅಂದ್ರು ಭಕ್ತರು ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕರಿ ನೆರಳಿಂದ ಸರಳವಾಗಿ ನಡೆದಿದ್ದ ರಥೋತ್ಸವ ಇಂದು ಅದ್ದೂರಿಯಾಗಿ ನಡೆಯಿತು. ನಾಡಿನ ಹಲವೆಡೆಗಳಿಂದ ಬಂದಿದ್ದ ಭಕ್ತರು ಹಟ್ಟಿ ಜಾತ್ರೆಯ ರಥೋತ್ಸವದಲ್ಲಿ ಭಾಗಿಯಾಗಿ ತಿಪ್ಪೇರುದ್ರಸ್ವಾಮಿ ಕೃಪೆಗೆ ಪಾತ್ರರಾದರು.

click me!