'ಒಂದೇ ತಾಲೂಕಿಗೆ 850 ಕೋಟಿ, ಇದೇನು ಶಿಕಾರಿಪುರ ಬಜೆಟ್ಟಾ..?'

Published : Aug 20, 2019, 11:13 AM IST
'ಒಂದೇ ತಾಲೂಕಿಗೆ 850 ಕೋಟಿ, ಇದೇನು ಶಿಕಾರಿಪುರ ಬಜೆಟ್ಟಾ..?'

ಸಾರಾಂಶ

ಈಗ ಶಿಕಾರಿಪುರ ಒಂದೇ ತಾಲೂಕಿಗೆ 850 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಇದೇನು ಶಿಕಾರಿಪುರ ಬಜೆಟ್ಟಾ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಒಂದೇ ಜಿಲ್ಲೆಗೆ 2 ಸಾವಿರ ಕೋಟಿ ಹಣ ಬಿಡುಗಡೆ ಮಾಡಿರೋದನ್ನು ಆಕ್ಷೇಪಿಸಿದ್ದಾರೆ.

ಹಾಸನ(ಆ.20): ಶಿಕಾರಿಪುರ ಒಂದೇ ತಾಲೂಕಿಗೆ 850 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಇದೇನು ಶಿಕಾರಿಪುರ ಬಜೆಟ್ಟಾ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಹಿಂದೆ ಯಡಿಯೂರಪ್ಪ ಹಾಸನ, ರಾಮನಗರ ಮತ್ತು ಮಂಡ್ಯ ಬಜೆಟ್‌ ಎಂದು ಹೇಳುತ್ತಿದ್ದರು. ಆದರೆ, ಈಗ ಶಿಕಾರಿಪುರ ಒಂದೇ ತಾಲೂಕಿಗೆ 850 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದರು.

ಗೌಡರ ಮಕ್ಕಳೇನೆಂದು ತೋರಿಸ್ತೀವಿ: ರೇವಣ್ಣ

ಒಟ್ಟು ಶಿವಮೊಗ್ಗ ಜಿಲ್ಲೆಗೆ 2 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಉತ್ತರ ಕರ್ನಾಟಕ ಪ್ರವಾಹ ಪರಿಹಾರಕ್ಕೆ ಸಿಎಂ ಹಣ ಇಲ್ಲ ಅಂತಾರೆ ಎಂದು ವಾಗ್ದಾಳಿ ನಡೆಸಿದರು. ಇದು ಯಾವ ಬಜೆಟ್‌, ಇದೇನು ಶಿಕಾರಿಪುರ ಬಜೆಟ್ಟಾಎಂದು ರೇವಣ್ಣ ಟೀಕಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

PREV
click me!

Recommended Stories

Jagadish Shettar: ಬೆಳಗಾವಿ, ಕಳಸಾ-ಬಂಡೂರಿ, ರೈಲ್ವೆ ಯೋಜನೆಗಳ ಬಗ್ಗೆ ಸಂಸದ ಶೆಟ್ಟರ್ ನೀಡಿದ ಭರವಸೆ ಏನು?
Hulikal Ghat Landslide: ಹುಲಿಕಲ್ ಘಾಟ್‌ನಲ್ಲಿ ವಾಹನಗಳ ಸಂಚಾರ ಆರಂಭ; ತೀರ್ಥಹಳ್ಳಿ-ಕುಂದಾಪುರ ಸಂಪರ್ಕ ಪುನಾರಂಭ!