ಗೌಡರ ಮಕ್ಕಳೇನೆಂದು ತೋರಿಸ್ತೀವಿ: ರೇವಣ್ಣ

By Kannadaprabha News  |  First Published Aug 20, 2019, 10:51 AM IST

ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರು ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ನಾನು ಈವರೆಗೆ ಹಾಸನ ಜಿಲ್ಲೆಯ ರಾಜಕೀಯ ಮಾಡುತ್ತಿದ್ದೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಜೊತೆ ರಾಜ್ಯದಲ್ಲಿ ರಾಜಕೀಯ ಮಾಡುತ್ತೇನೆ. ದೇವೇಗೌಡರ ಮಕ್ಕಳು ಏನು ಎಂಬುದನ್ನು ತೋರಿಸುತ್ತೇವೆ ಎಂದರು.


ಹಾಸನ(ಆ.20): ದೇವರ ಅನುಗ್ರಹದಿಂದ ಕುಮಾರಸ್ವಾಮಿ 14 ತಿಂಗಳು ಸಿಎಂ ಆಗಿದ್ದರು. ನಾವೇನು ಸುಮ್ಮನೆ ಕೂರಲ್ಲ. ನಮಗೂ ಏನು ಮಾಡಬೇಕೆಂದು ಗೊತ್ತಿದೆ ಎಂದು ಮಾಜಿ ಸಚಿವ ಎಚ್‌. ಡಿ. ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈವರೆಗೆ ಹಾಸನ ಜಿಲ್ಲೆಯ ರಾಜಕೀಯ ಮಾಡುತ್ತಿದ್ದೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಜೊತೆ ರಾಜ್ಯದಲ್ಲಿ ರಾಜಕೀಯ ಮಾಡುತ್ತೇನೆ. ದೇವೇಗೌಡರ ಮಕ್ಕಳು ಏನು ಎಂಬುದನ್ನು ತೋರಿಸುತ್ತೇವೆ ಎಂದರು.

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗೌಡರ ಕುಟುಂಬ ಟಾರ್ಗೆಟ್‌!

undefined

ದೇವೇಗೌಡರು ಎಲ್ಲ ತನಿಖೆಯನ್ನೂ ಹೆದರಿಸಿ ಪ್ರಧಾನಿಯಾಗಿದ್ದರು. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಸೇರಿ ದೇವೇಗೌಡರ ಕುಟುಂಬ ಟಾರ್ಗೆಟ್‌ ಮಾಡಿದ್ದಾರೆ. ಎರಡೂ ಪಕ್ಷದವರೂ ಏನು ಮಾಡುತ್ತಾರೋ ಮಾಡಲಿ ಎಂದು ಸವಾಲು ಹಾಕಿದರು.

ಫೋನ್‌ ಕದ್ದಾಲಿಕೆ ಪ್ರಕರಣವೇ ಜೆಡಿಎಸ್‌ನ ಮುಂದಿನ ಭದ್ರ ಬುನಾದಿಯಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಮತ್ತು ಬಿಜೆಪಿ ಸರ್ಕಾರದಲ್ಲೂ ನಡೆದ ಫೋನ್‌ ಟ್ಯಾಪಿಂಗ್‌ ಅನ್ನು ತನಿಖೆ ಮಾಡಲಿ ಎಂದು ಒತ್ತಾಯಿಸಿದರು.

'ಫೋನ್ ಟ್ಯಾಪಿಂಗ್ CBI ಗೆ ವಹಿಸಿರೋದು ಕಾಂಗ್ರೆಸ್, ಬಿಜೆಪಿ ಒಳ ಒಪ್ಪಂದ'

ಕೆಆರ್‌ ಪೇಟೆಗೆ ನಾರಾಯಣಗೌಡರಿಗೆ ಟಿಕೇಟ್‌ ಕೊಡಬೇಡ ಅವನು 420 ಎಂದು ದೇವೇಗೌಡರು ಹೇಳಿದ್ದರು. ಆದರೂ ಕುಮಾರಸ್ವಾಮಿ ವಿಶ್ವಾಸದಿಂದ ಕೆಆರ್‌ ಪೇಟೆಗೆ ಟಿಕೆಟ್‌ ನೀಡಿದ್ದರು ಎಂದರು.

click me!