ಕಳೆದು ಒಂದೂವರೆ ವರ್ಷದ ಹಿಂದೆ ನಡೆದ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಜೈಲು ಸೇರಿದವರು ನಿರಪರಾಧಿಗಳು. ಅವರನ್ನು ಬಿಡುಗಡೆ ಮಾಡುವಂತೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ಸಮಾಜದ ಮುಖಂಡರು ಹಾಗೂ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು.
ಧಾರವಾಡ (ಜು.10) : ಕಳೆದು ಒಂದೂವರೆ ವರ್ಷದ ಹಿಂದೆ ನಡೆದ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಜೈಲು ಸೇರಿದವರು ನಿರಪರಾಧಿಗಳು. ಅವರನ್ನು ಬಿಡುಗಡೆ ಮಾಡುವಂತೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ಸಮಾಜದ ಮುಖಂಡರು ಹಾಗೂ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು.
ಭಾರತ ದೇಶದಲ್ಲಿ ಎಲ್ಲ ಧರ್ಮೀಯರು ಒಗ್ಗಟ್ಟಾಗಿ ಜೀವಿಸುತ್ತಿದ್ದು ಹಿಂದೂ-ಮುಸ್ಲಿಂ, ಜೈನ, ಬೌದ್ಧ, ಸಿಖ್, ಪಾರ್ಶಿಗಳು ಬಾತೃತ್ವ ಭಾವದಿಂದ ಇದ್ದಾರೆ. ಅನಾವಶ್ಯಕವಾಗಿ ತಪ್ಪೇ ಮಾಡದ ಯುವಕರನ್ನು ಬಂಧನ ಮಾಡಿ ಅವರ ಮೇಲೆ ದೊಡ್ಡ ದೊಡ್ಡ ಪ್ರಕರಣ ದಾಖಲು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನ ಮಾಡಿದ 150 ಜನ ಯುವಕರನ್ನು ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Amarnath Yatra: ಸಂಕಷ್ಟದಲ್ಲಿರೋ ಯಾತ್ರಾರ್ಥಿಗಳಿಗೆ ಶಾಸಕ ವಿನಯ್ ಕುಲಕರ್ಣಿ ಸಹಾಯಹಸ್ತ