ಕೋಟೆನಾಡಿನಲ್ಲಿ ಶುದ್ಧ ಕುಡಿಯುವ ನೀರಿಲ್ಲ: ಕೆಟ್ಟು ನಿಂತ ನೀರಿನ ಘಟಕಗಳು

By Sathish Kumar KHFirst Published Jul 10, 2023, 9:50 PM IST
Highlights

ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದು, ಸಾರ್ವಜನಿಕರು ಶುದ್ಧ ಕುರಿಯುವ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.10):  ಮನುಷ್ಯನಿಗೆ ಒಂದೊತ್ತಿನ ಊಟ ಇಲ್ಲವಾದ್ರು ಪರವಾಗಿಲ್ಲ. ಕುಡಿಯುಲು ಶುದ್ದ ನೀರಿದ್ರೆ ಸಾಕೆಂಬ ಗಾದೆ ಮಾತೊಂದಿದೆ. ಆದ್ರೆ ಕೋಟೆನಾಡು ಚಿತ್ರದುರ್ಗದಲ್ಲಿ ಉಚಿತವಾಗಿ ಶುದ್ಧ ನೀರು ಕೊಡ್ತಿವೆಂದು ಜನರನ್ನು ನಂಬಿಸಿದ್ದ ನಗರಸಭೆ ಹಾಗೂ ಖಾಸಗಿಯವರ ಹಗ್ಗಜಗ್ಗಾಟದಿಂದಾಗಿ, ಶುದ್ಧ ಕುಡಿಯುವ ನೀರು ಸಿಗಲಾರದೇ ಸತತ ಮೂರು ದಿನಗಳಿಂದ ನೀರಿನ ಆಹಾಕಾರ ಶುರುವಾಗಿದೆ. 

ನೋಡಿ ಹೀಗೆ ಕೆಟ್ಟು ನಿಂತಿರುವ ಶುದ್ಧ ನೀರಿನ‌ ಘಟಕಗಳು. ಕುಡಿಯುವ ನೀರಿಗಾಗಿ ಪರದಾಡ್ತಿರುವ ನಾಗರೀಕರು.ಈ ದೃಶ್ಯಗಳು ಕಂಡು ಬಂದಿದ್ದು, ಕೋಟೆನಾಡು‌ ಚಿತ್ರದುರ್ಗ ನಗರದಲ್ಲಿ. ಹೌದು ಚಿತ್ರದುರ್ಗದ 35 ವಾರ್ಡ್ ಗಳಲ್ಲು ನಾಗರೀಕರ ಅನುಕೂಲಕ್ಕಾಗಿ ಶಾಸಕರು ಹಾಗೂ ಸಂಸದರ ನಿಧಿಯಿಂದ ಸರ್ಕಾರ ಶುದ್ಧ ನೀರಿನ ಘಟಕಗಳನ್ನು ಆರಂಭಿಸಿದೆ. ಆ ಶುದ್ಧ‌ನೀರಿನ ಘಟಕಗಳನ್ನು  ನಿರ್ವಹಣೆ ಮಾಡಲು ಖಾಸಗಿಯವರಿಗೆ ಟೆಂಡರ್ ಹಾಗು ಗುತ್ತಿಗೆ ಆಧಾರದ ಮೇಲೆ ನಗರಸಭೆ ಅನುಮತಿ ನೀಡಿತ್ತು. 

Latest Videos

ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಆನ್‌ಲೈನ್‌ ರಮ್ಮಿ ಆಟ: ಅರುಣ್‌ ಕುಮಾರ್‌ ಹೇಳಿದ್ದೇನು?

ಕಣ್ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು: ಆದ್ರೆ ಸರ್ಕಾರ ಬದಲಾದ ಬೆನ್ನಲ್ಲೇ ಆ ಘಟಕಗಳಲ್ಲಿ ಉಚಿತವಾಗಿ ನೀರು ವಿತರಿಸ್ತಿವಿ ಅಂತ ಗಿಮಿಕ್ ಮಾಡಿರೊ ಚಿತ್ರದುರ್ಗ ನಗರಸಭೆ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಕೇವಲ ಮೂರೇ ದಿನಗಳಲ್ಲಿ ಉಚಿತ ನೀರಿನ ವಿತರಣೆಯನ್ನು ಸ್ಥಗಿತಗೊಳಿಸಿದ್ದಾರೆ.‌‌ ಹಲವು ಘಟಕಗಳು ರಿಪೇರಿಯಲ್ಲಿವೆ ಎಂದು ಹೇಳ್ತಿದ್ದು, ಕೆಲವೆಡೆ ವಿದ್ಯುತ್ ಸಮಸ್ಯೆ ಹಾಗು ಬೋರ್ವೆಲ್ ಸಮಸ್ಯೆ ಎಂಬ ನೆಪವೊಡ್ಡಿ ಜನರಿಗೆ ಶುದ್ಧ‌ ಕುಡಿಯುವ‌ನೀರು ಸಿಗಲಾರದಂತೆ ಅಭಾವ ‌ಸೃಷ್ಟಿಸಿದ್ದಾರೆ.ಹೀಗಾಗಿ ಜನರು ನಗರಸಭೆ ವಿರುದ್ಧ ಕಿಡಿಕಾರಿದ್ದು, ಕೂಡಲೇ ಉಚಿತ ನೀರನ್ನು ವಿತರಿಸುವಂತೆ ಆಗ್ರಹಿಸಿದ್ದಾರೆ. ಆದ್ರೆ ನಗರಸಭೆ ಅಧಿಕಾರಿಗಳು ಹಾಗು ಶಾಸಕ‌ ವೀರೇಂದ್ರ ಪಪ್ಪಿ ಕಣ್ಮುಚ್ಚಿ ಕುಳಿತಿದ್ದಾರೆ.

ನೀರಿನ ಘಟಕ ನಿರ್ವಹಣಾ ಹಣ ಪೋಲು: ಇನ್ನು ಕೆಲ ಘಟಕಗಳ‌ ನಿರ್ವಹಣೆ ಜವಬ್ದಾರಿಯನ್ನು ಖಾಸಗಿಯವರಿಗೆ ನೀಡಲಾಗಿದ್ದು, ಅವರಿಗೆ 10, ಸಾವಿರ ಸಂಬಳವನ್ನು ಸಹ ನೀಡ್ತಿದೆ. ಆದರೆ, ಅವರೊಂದಿಗೆ  ನಗರಸಭೆ ಅಧಿಕಾರಿಗಳು ಶಾಮೀಲಾಗಿರುವ ಪರಿಣಾಮ ಉಚಿತ ನೀರು ವಿತರಣೆ ವ್ಯವಸ್ಥೆ ವಿಫಲರಾಗಿದೆ.ಹೀಗಾಗಿ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದ್ದೂ, ಈ ಸಂಬಂಧ ನಿನ್ನೆ ಪ್ರತಿಕ್ರಿಯೆ ನೀಡಿದ ಕೇಂದ್ರ‌ಸಚಿವ‌ ನಾರಾಯಣಸ್ವಾಮಿ‌ ಸಹ ಅಸಮಧಾನ ಹೊರ ಹಾಕಿದ್ದಾರೆ. ನಿರ್ವಹಣೆ ಹೊಣೆಯನ್ನು‌ ಚಿತ್ರದುರ್ಗದ ಶಾಸಕರು ಹೊರಬೇಕಿದ್ದು, ಸಾರ್ವಜನಿಕರಿಗೆ ಸಮಸ್ಯೆ‌ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಹಾಗು ಅಧಿಕಾರಿಗಳಿಗೆ‌ ಸೂಚಿಸಿದ್ದಾರೆ.

ಫಿಲಂ ಚೇಂಬರ್‌ಗೆ ನೋವಿನಿಂದ ಪತ್ರ ಬರೆದ ಕಿಚ್ಚ ಸುದೀಪ್: ಸಿನಿಮಾ ಜೀವನದ ಏರಿಳಿತಗಳ ಉಲ್ಲೇಖ

ಒಟ್ಟಾರೆ ಉಚಿತವಾಗಿ ನೀರು ವಿತರಿಸುವ ವಿಚಾರದಲ್ಲಿ ನಗರಸಭೆ ಹಾಗು ಖಾಸಗಿಯವರು ಹಾವುಏಣಿ ಆಟವಾಡ್ತಿದ್ದಾರೆ. ಹೀಗಾಗಿ ಕೋಟೆನಾಡಿನ ಜನರು ಹೈರಾಣಾಗಿದ್ದಾರೆ. ಇನ್ನಾದ್ರು ನೂತನ ಶಾಸಕ‌ ವೀರೇಂದ್ರ ಪಪ್ಪಿ ಶುದ್ದ‌ ಕುಡಿಯುವ ನೀರನ್ನು ಉಚಿತವಾಗಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ..

click me!