ಕೊವಿಡ್‌ಗಿಂತ ಹುಬ್ಬಳ್ಳಿ ಜನರಿಗೆ ಧೂಳಿನದ್ದೇ ಭಯ!

By Kannadaprabha News  |  First Published Jan 1, 2023, 11:45 AM IST

ನಗರದಲ್ಲಿ ಬರೋಬ್ಬರಿ 2100 ಚದರ ಕಿಲೋ ಮೀಟರ್‌ ರಸ್ತೆ ಇದೆ. ಇದರಲ್ಲಿ ಸ್ಮಾರ್ಚ್‌ಸಿಟಿ ಅಡಿ ಒಂದಿಷ್ಟುಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಉಳಿದ ರಸ್ತೆಗಳನ್ನು ವಿವಿಧ ಕಾಮಗಾರಿಗಳನ್ನು ಅಗೆದು ಹಾಗೇ ಬಿಡಲಾಗಿದೆ. ಆ ರಸ್ತೆಯಲ್ಲಿ ವಾಹನಗಳು ಸಂಚರಿಸಿದರೆ ಧೂಳು ಗಾಳಿಯಲ್ಲಿ ಬೆರತು ಜನರ ಶ್ವಾಸಕೋಶ ಸೇರುತ್ತಿದೆ.


ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ (ಜ.1) : ಸ್ಮಾರ್ಟ್‌ಸಿಟಿ ಯೋಜನೆ ಅವಧಿಯೂ ಮುಗಿಯುತ್ತಾ ಬಂದರೂ ನಗರದಲ್ಲಿ ಮಾತ್ರ ರಸ್ತೆಗಳ ವ್ಯವಸ್ಥೆ ಸುಧಾರಿಸಿಲ್ಲ. ಮಳೆ ಬಂದರೆ ಕೆಸರುಗದ್ದೆಯಾಗಿ, ಬಿಸಿಲಾದರೆ ಧೂಳಿನಿಂದ ಕೂಡುವ ನಗರದ ರಸ್ತೆಗಳು ಜನರನ್ನು ಅನಾರೋಗ್ಯದ ಕೂಪಕ್ಕೆ ತಳ್ಳುತ್ತಿವೆ. ಹೌದು, ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ರಸ್ತೆಗಳು ಬಹುತೇಕ ಧೂಳಿನಿಂದ ಕೂಡಿವೆ.

Tap to resize

Latest Videos

2100 ಚದರ ಕಿಮೀ ರಸ್ತೆ:

ನಗರದಲ್ಲಿ ಬರೋಬ್ಬರಿ 2100 ಚದರ ಕಿಲೋ ಮೀಟರ್‌ ರಸ್ತೆ ಇದೆ. ಇದರಲ್ಲಿ ಸ್ಮಾರ್ಚ್‌ಸಿಟಿ ಅಡಿ ಒಂದಿಷ್ಟುಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಉಳಿದ ರಸ್ತೆಗಳನ್ನು ವಿವಿಧ ಕಾಮಗಾರಿಗಳನ್ನು ಅಗೆದು ಹಾಗೇ ಬಿಡಲಾಗಿದೆ. ಆ ರಸ್ತೆಯಲ್ಲಿ ವಾಹನಗಳು ಸಂಚರಿಸಿದರೆ ಧೂಳು ಗಾಳಿಯಲ್ಲಿ ಬೆರತು ಜನರ ಶ್ವಾಸಕೋಶ ಸೇರುತ್ತಿದೆ.

Big 3: ಮಾಲೂರು ತಾಲ್ಲೂಕಿನಲ್ಲಿ ಧೂಳುಮಯ ರಸ್ತೆಗಳು: ಕೇಳೋರಿಲ್ಲ ಜನರ ಗೋಳು

ಮಾಸ್ಕ್ ಧರಿಸದೆ ಹೊರಬರುವಂತಿಲ್ಲ:

ಕೋವಿಡ್‌(Covid) ರೂಪಾಂತರಿ ತಳಿ ಬಿಎಫ್‌.7(BF7) ಸೋಂಕಿನ ಹಿನ್ನೆಲೆ ಸರ್ಕಾರ ಪ್ರತಿಯೊಬ್ಬರೂ ಮಾಸ್‌್ಕ(Mask) ಧರಿಸುವಂತೆ ಜನರಿಗೆ ಸೂಚಿಸಿದೆ. ಆದರೆ, ನಗರದ ಹಳೇಹುಬ್ಬಳ್ಳಿ, ನೇಕಾರ ನಗರ, ಆನಂದ ನಗರ, ಕಾರವಾರ ರಸ್ತೆ ಸೇರಿ ಅನೇಕ ರಸ್ತೆಗಳು ಸಂಚರಿಸುವ ಜನರು ಮಾತ್ರ ಧೂಳಿ(Dust)ನ ಭಯದಿಂದ ಮಾಸ್‌್ಕ ಧರಿಸುವುದನ್ನು ರೂಢಿಸಿಕೊಂಡಿದ್ದಾರೆ. ಕೋವಿಡ್‌ ಭಯಕ್ಕಿಂತ ಧೂಳಿಗೆ ಇಲ್ಲಿನ ಜನತೆ ಭಯಭೀತರಾಗಿದ್ದಾರೆ.

ಜನರ ನರಳಾಟ:

ಧೂಳಿನ ಕಣಗಳು ಗಾಳಿಯಲ್ಲಿ ಬೆರೆತು ಜನರ ದೇಹ ಸೇರುತ್ತಿವೆ. ಇದರಿಂದ ಕೆಮ್ಮು, ಅಲರ್ಜಿ, ಗಂಟಲು ಕೆರೆತದೊಂದಿಗೆ ಅಸ್ತಮಾ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಿಗಳಿಂದ ನರಳುವಂತಾಗಿದೆ. ವಾಹನ ಸವಾರರು ಸಹ ಧೂಳಿನಿಂದ ಹಲವು ಬಾರಿ ಅಪಘಾತಕ್ಕೆ ತುತ್ತಾಗಿದ್ದಾರೆ. ಒಂದು ವಾಹನ ಮುಂದೆ ಸಾಗಿದರೆ ಅದರ ಹಿಂದೆ ದಟ್ಟವಾದ ಧೂಳು ಆವರಿಸುತ್ತದೆ. ಕೊನೆಯ ಪಕ್ಷ ರಸ್ತೆಗೆ ನೀರನ್ನು ಸಿಂಪಡಿಸುವ ಮೂಲಕ ಧೂಳಿನ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಆನಂದ ನಗರದ ಆಟೋ ಚಾಲಕ ರಾಜೇಸಾಬ್‌ ನದಾಫ್‌.

ಸ್ಮಾರ್ಟ್‌ಸಿಟಿ(Smartcity) ಹೆಸರಿನಲ್ಲಿ ನೂರಾರು ಕೋಟಿ ಖರ್ಚು ಮಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಮುಖ ರಸ್ತೆ ಅಷ್ಟೆಅಲ್ಲದೆ, ನಗರದ ಎಲ್ಲ ಒಳರಸ್ತೆಗಳ ಸುಧಾರಣೆಗೂ ಹೆಚ್ಚಿನ ಗಮನ ನೀಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ..

2 ವರ್ಷದಿಂದ ದೋಟಿಹಾಳ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಬೀಗ, ಧೂಳುಮಯವಾದ ನೇಯುವ ಮಗ್ಗಗಳು!

ರಸ್ತೆಯಲ್ಲಿರುವ ಧೂಳಿನಿಂದ ಕಣ್ಣು, ಕಿವಿ, ಮೂಗಿಗೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳುತ್ತವೆ. ಅಲರ್ಜಿ ಇದ್ದವರಿಗೆ ಮತ್ತಷ್ಟುತೊಂದರೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಧೂಳಿನಿಂದ ರಕ್ಷಣೆ ಪಡೆಯಲು ಮಾಸ್‌್ಕ ಕಡ್ಡಾಯವಾಗಿ ಧರಿಸಲೇಬೇಕು.

ಡಾ. ಈಶ್ವರ ಹಸಬಿ, ಕಿಮ್ಸ್‌ನ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ

Smart city ಹಾಗೂ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ನಗರ ಸಂಪೂರ್ಣ ಧೂಳುಮಯವಾಗುತ್ತಿದೆ. ಅಲ್ಲಲ್ಲಿ ರಸ್ತೆ ಅಗೆದು ವಾರಗಟ್ಟಲೇ ಹಾಗೇ ಬಿಡುವುದರಿಂದ ಧೂಳಿನ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಮಹಾನಗರ ಪಾಲಿಕೆ ಕ್ರಮಕೈಗೊಳ್ಳಬೇಕು.

ಶೇಖರಯ್ಯ ಮಠಪತಿ, ಹುಬ್ಬಳ್ಳಿ ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ

click me!