ಕುಡಿಯಲು ನೀರು ಕೊಡಿ; ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ನಾರಿಯರು

By Kannadaprabha News  |  First Published Jan 1, 2023, 11:24 AM IST

ಸಮರ್ಪಕ ನೀರು ಸರಬರಾಜು ಮಾಡದ ಎಲ್‌ ಆ್ಯಂಡ್‌ ಟಿ ಕಂಪನಿ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು, ನೂರಾರು ಮಹಿಳೆಯರು ಶನಿವಾರ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.


ಹುಬ್ಬಳ್ಳಿ (ಜ.1) : ಸಮರ್ಪಕ ನೀರು ಸರಬರಾಜು ಮಾಡದ ಎಲ್‌ ಆ್ಯಂಡ್‌ ಟಿ ಕಂಪನಿ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು, ನೂರಾರು ಮಹಿಳೆಯರು ಶನಿವಾರ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಇಲ್ಲಿನ ಇಂದಿರಾ ಗ್ಲಾಸ್‌ಹೌಸ್‌ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ನಂತರ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡಿತು. ಮೆರವಣಿಗೆಯ ಉದ್ದಕ್ಕೂ ಖಾಲಿ ಕೊಡ ಹಿಡಿದು ಭಾಗವಹಿಸಿದ್ದ ಮಹಿಳೆಯರು ಪಾಲಿಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ವಿವಿಧ ಘೋಷಣೆ ಕೂಗಿದರು.

ಚೆನ್ನಮ್ಮ ವೃತ್ತದಲ್ಲಿ ಜಮೆಯಾದ ಮಹಿಳೆಯರು, ಮಕ್ಕಳು ಹಾಗೂ ಯುವತಿಯರು ಖಾಲಿ ಕೊಡ ಪ್ರದರ್ಶಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸ್ಮಾರ್ಚ್‌ಸಿಟಿ ಮಾಡುವುದಾಗಿ ಹೇಳುತ್ತಿರುವ ಜನಪ್ರತಿನಿಧಿಗಳು ಕನಿಷ್ಠ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನೂರಾರು ಕೋಟಿ ಅನುದಾನ ಬಳಕೆಯಾದರೂ, ಮಹಾನಗರದಲ್ಲಿ ಯಾವುದೇ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಕೂಡಲೇ ಎಲ್‌ ಆ್ಯಂಡ್‌ ಟಿ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀರಿನ ಸರಬರಾಜುವಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದೇ ಹೋದಲ್ಲಿ ಮಹಾನಗರದ ಜನತೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos

undefined

ನೀರು ಪೂರೈಕೆ ಜಾಲಕ್ಕೆ ಕಲ್ಲು ಹಾಕಿ ಪಾಲಿಕೆ ವಿರುದ್ಧ ಜನರನ್ನು ರೊಚ್ಚಿಗೆಬ್ಬಿಸುವ ಪ್ಲಾನ್ ಮಾಡಿದ್ದ ಕಿಡಿಗೇಡಿಗಳು!

\ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿಮಠ ಮಾತನಾಡಿ, ಕಳೆದ ಒಂದು ತಿಂಗಳಿಂದ ಮಹಾನಗರದಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗಿಲ್ಲ. ವಾರ್ಡ್‌ಗಳಲ್ಲಿ ಜನರು ನೀರಿಗಾಗಿ ಪರದಾಡುವಂತಾಗಿದೆ. ಸಮರ್ಪಕ ನೀರು ಪೂರೈಕೆ ಮಾಡುವಲ್ಲಿ ಎಲ್‌ ಆ್ಯಂಡ್‌ ಟಿ ಅಧಿಕಾರಿಗಳು ವಿಫಲರಾಗಿದ್ದು, ಕೂಡಲೆ ಮೊದಲಿನಂತೆ ಜಲಮಂಡಳಿಗೆ ನೀರು ಸರಬರಾಜು ಹೊಣೆ ನೀಡಬೇಕು ಎಂದು ಒತ್ತಾಯಿಸಿದರು.

ಮಾಜಿ ಮೇಯರ ಪ್ರಕಾಶ ಕ್ಯಾರಕಟ್ಟಿ, ಪಾಲಿಕೆ ಸದಸ್ಯರಾದ ಆರೀಫ್‌ ಭದ್ರಾಪುರ, ಸಂದೀಲ ಕುಮಾರ, ಪೀರಾಜಿ ಖಂಡೇಕರ್‌, ಹೂವಪ್ಪ ದಾಯಿಗೋಡಿ, ಸಾದಿಕ್‌ ಯಕ್ಕುಂಡಿ, ಮಾದರ ಮಕಾಂದರ, ಈಶ್ವರ ಪೂಜಾರಿ ಇದ್ದರು ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ, ಬೇಸಿಗೆಯ ಮೊದಲೇ ಅವಸ್ಥೆ

click me!