ದನದ ದೊಡ್ಡಿಯಾದ ಸರ್ಕಾರಿ ಹಾಸ್ಟೆಲ್‌: ಬಡ ಮಕ್ಕಳ ರಕ್ಷಣೆಗೆ ಬನ್ನಿ ಸಮಾಜ ಕಲ್ಯಾಣ ಸಚಿವರೇ.!

By Sathish Kumar KH  |  First Published Jul 19, 2023, 11:17 PM IST

ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಹಾಸ್ಟೆಲ್‌ ದನದ ದೊಡ್ಡಿಯಂತಾಗಿದೆ. ಸ್ಥಳಾವಕಾಶ, ಊಟ, ಸ್ವಚ್ಛತೆ ಹಾಗೂ ಸುರಕ್ಷತೆ ಸಮಸ್ಯೆ ಇದೆ. 


ಹುಬ್ಬಳ್ಳಿ (ಜು.19): ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಹಾಸ್ಟೆಲ್‌ ದನದ ದೊಡ್ಡಿಯಂತಾಗಿದೆ. ಮಕ್ಕಳು ಇರಲು ಸ್ಥಳಾವಕಾಶ ಕೊರತೆ, ಊಟದ ಸಮಸ್ಯೆ, ಸ್ವಚ್ಛತೆ ಸಮಸ್ಯೆ ಹಾಗೂ ಸುರಕ್ಷತೆ ಸಮಸ್ಯೆ ಇಲ್ಲಿ ಕಾಡುತ್ತಿದೆ. ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದು, ಸಮಾಜ ಕಲ್ಯಾಣ ಸಚಿವರೇ ಸಮಸ್ಯೆಬಗೆಹರಿಸಬೇಕಾಗಿದೆ. 

ಇದು ಹುಬ್ಬಳ್ಳಿಯ ನಗರದ ಹೃದಯಭಾಗದಲ್ಲಿರುವ  ಹಾಸ್ಟೆಲ್. ಸರ್ಕಾರ ಹಾಸ್ಟೆಲ್ ನಲ್ಲಿ ಸೌಲಭ್ಯ ಕಲ್ಪಿಸಲು‌ ಕೋಟ್ಯಾಂತರ ರೂಪಾಯಿ ಹಣ ಸುರಿದಿದೆ. ಆದರೆ ಇಲ್ಲಿನ ಅವ್ಯವಸ್ಥೆ ಮಾತ್ರ ಸುಧಾರಣೆ ಕಂಡಿಲ್ಲ. ಹಾಸ್ಟೆಲ್‌ನ ಅವ್ಯವಸ್ಥೆ ಸುಧಾರಣೆ ಮಾಡಿ‌ ಅಂತ ಎಷ್ಟೇ ಪರಿಪರಿಯಾಗಿ ಬೇಡಿಕೊಂಡ್ರು. ಇದಕ್ಕೆ ಮುಕ್ತಿ‌ ಸಿಕ್ಕಿಲ್ಲ.ಇದರಿಂದಾಗಿ ಇಲ್ಲಿನ ವಿದ್ಯಾರ್ಥಿ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

Latest Videos

undefined

 ರೈತರಿಗೆ ಹೆಣ್ಣು ಕೊಡ್ತಿಲ್ಲ: ಕನ್ಯಾಭಾಗ್ಯ ಯೋಜನೆ ಜಾರಿಗೆ ತಂದು ಮದುವೆ ಮಾಡಿಸಿ

ವಾಣಿಜ್ಯನಗರಿ ಹುಬ್ಬಳ್ಳಿಯ ಘಂಟಿಕೇರಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದ ಸ್ಥಿತಿ ಶೋಚನೀಯ, ಎಲ್ಲಿ ನೋಡಿದರೆ ಅವ್ಯವಸ್ಥೆ ತಾಂಡವಾಡುತ್ತಿದೆ. ಈ ನಿಲಯದಲ್ಲಿ ಒಟ್ಟು 18 ಮಲಗುವ ಕೋಣೆಗಳಿದ್ದು, ಅದರಲ್ಲಿರುವ 4  ಕೋಣೆಗಳನ್ನು ಬೀಗ ಹಾಕಿ ಬಂದ್ ಮಾಡಲಾಗಿದೆ. ಇನ್ನುಳಿದ 14 ಕೋಣೆಗಳಲ್ಲಿ 150 ವಿದ್ಯಾರ್ಥಿಗಳು ವಾಸ ಮಾಡಬೇಕು. ಪಿಯುಸಿ, ಡಿಪ್ಲೊಮಾ, ಬಿ.ಎಡ್‌, ಪದವಿ ಹಾಗೂ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 150 ವಿದ್ಯಾರ್ಥಿಗಳು ಇಲ್ಲಿ ವಾಸವಾಗಿದ್ದಾರೆ.

ಮಕ್ಕಳ ಸುರಕ್ಷತೆಗೂ ಇಲ್ಲಿ ಆದ್ಯತೆಯಿಲ್ಲ: ಆದರೆ ಸರಿಯಾದ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲದೇ‌ ಪರದಾಡುವ ಸ್ಥಿತಿ. ಇನ್ನೂ ಇಲ್ಲಿನ ಊಟವಂತ ಭಗವಂತನಿಗೆ ಪ್ರೀತಿ, ಊಟದಲ್ಲಿ ಉಪ್ಪು ಬಿದ್ದರೆ‌ ಖಾರವಿಲ್ಲ..  ಖಾರ ಇದ್ದರೆ ಉಪ್ಪಿಲ್ಲ. ಈ‌ ಬಗ್ಗೆ ಯಾರೊಬ್ಬರೂ ಪ್ರಶ್ನಿಸುವಂತಿಲ್ಲ. ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ದೂರದರ್ಶನ ಸೌಲಭ್ಯವಿಲ್ಲ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಎರಡು ಮೂರು ಕಡೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. ಆದರೆ ಅವುಗಳು ಕೂಡ ಕೆಲಸ ಮಾಡುತ್ತಿಲ್ಲ. ಇನ್ನೂ ಭದ್ರತಾ ದೃಷ್ಟಿಯಿಂದ ನೋಡುವುದಾದರೆ ಇಲ್ಲಿ  ಭದ್ರತಾ ವ್ಯವಸ್ಥೆ  ಇಲ್ಲ ಅಂದ್ರು ತಪ್ಪಾಗಲ್ಲ. 

ನಾಲ್ಕು ವಿದ್ಯಾರ್ಥಿಗಳ ಕೊಠಡಿಯಲ್ಲಿ 10 ಜನರ ವಾಸ: ನಾಲ್ಕು ವಿದ್ಯಾರ್ಥಿಗಳು ವಾಸವಿರುವ ಒಂದು ಕೋಣೆಯಲ್ಲಿ 8 ರಿಂದ 10 ಮಂದಿ ಇದ್ದಾರೆ. ಅವರಿಗೆ ನೀಡಿರುವ ಟ್ರಂಕ್ ಪೆಟ್ಟಿಗೆಯನ್ನು ಇಡಲು ಸ್ಥಳಾವಕಾಶ ಇಲ್ಲದೇ ಮಂಚದ ಅಡಿಗೆ ತುರುಕಲಾಗಿದೆ. ವಿದ್ಯಾರ್ಥಿಗಳು ತಮ್ಮ ಬಟ್ಟೆ ಹಾಗೂ ಪುಸ್ತಕಗಳನ್ನು ಒಪ್ಪವಾಗಿ ಜೋಡಿಸಿಟ್ಟುಕೊಳ್ಳಲು ಸಹ ಅಲ್ಲಿ ಸ್ಥಳದ ಅಭಾವ ಇದೆ. ಇನ್ನೂ ನಿಲಯದಲ್ಲಿ 4 ಶೌಚಾಲಯ ಹಾಗೂ 4  ಸ್ನಾನಗೃಹಗ­ಳಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿ­ಸಿದರೆ ಇದು ತೀರಾ ಕಡಿಮೆ ಇದೆ. ಕೆಲವು ಬಾಗಿಲು ಹಾಳಾಗಿವೆ, ಮಳೆ- ಚಳಿಗಾಲದಲ್ಲಿ ವಿದ್ಯಾರ್ಥಿ ಪರದಾಡುವ ಸ್ಥಿತಿ.  ಈ ಬಗ್ಗೆ ಪರಿಶೀಲನೆ ನಡೆಸಬೇಕಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇತ್ತ ತಲೆ ಕೂಡ ಹಾಕದೇ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ.

ಹಾಸ್ಟೆಲ್ ಹುಡುಗರಿಗೆ ರಮ್ಯಾ ನೋಟಿಸ್ ಭಾಗ್ಯ: ಈ ಸಿನಿಮಾ ಮೇಲೆ ಯಾಕೆ ಅನೇಕರಿಗೆ ಕಣ್ಣು?

ಒಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡುವುದಿಲ್ಲ. ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಆಲಿಸುವುದಿಲ್ಲ ಸರ್ಕಾರದಿಂದ ಎಷ್ಟೇ ಸೌಲಭ್ಯ ಕೊಟ್ಟರು ಇಲ್ಲಿರುವ ವಿದ್ಯಾರ್ಥಿಗಳಿಗೆ ತಲುಪುವುದಿಲ್ಲ. ಹೀಗಾದರೇ ವಿದ್ಯಾರ್ಥಿಗಳ ಗತಿ ಏನು ಇಲಾಖೆಯ ಸಚಿವರೇ ಇತ್ತ ಗಮನ ಹರಿಸಿ ವಿದ್ಯಾರ್ಥಿಗಳ ಸಮಸ್ಯೆಗಳತ್ತ ಗಮನ ಕೊಡಿ.

click me!