Honnali: ಮತ್ತೆ ಫೀಲ್ಡಿಗಿಳಿದ ರೇಣುಕಾಚಾರ್ಯ: ಕರ್ಫ್ಯೂ ವೇಳೆ ಕೋವಿಡ್‌ ಜಾಗೃತಿ

By Kannadaprabha News  |  First Published Jan 10, 2022, 6:22 AM IST

*  ಮೊದಲ, ಎರಡನೇ ಅಲೆ ಸಂತ್ರಸ್ತರಿಗೂ ಪರಿಹಾರದ ವ್ಯವಸ್ಥೆ
*  ವಾಹನ ಸವಾರರನ್ನು ತಡೆದು ಮಾಸ್ಕ್‌ ಹಾಕಿಕೊಳ್ಳುವಂತೆ ತಾಕೀತು ಮಾಡಿದ ರೇಣುಕಾಚಾರ್ಯ
*  ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ 
 


ದಾವಣಗೆರೆ(ಜ.10):  ಕಳೆದ ಬಾರಿ ಕೋವಿಡ್‌ ಐಸೋಲೇಷನ್‌ ಕೇಂದ್ರಗಳಿಗೆ ತೆರಳಿ ಕೊರೋನಾ(Coronavirus) ಬಗ್ಗೆ ಜಾಗೃತಿ ಮೂಡಿಸಿ, ಸೋಂಕಿತರಿಗೆ ಧೈರ್ಯ ತುಂಬಿದ್ದ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಹೊನ್ನಾಳಿ(Honnali) ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಅವರು ಭಾನುವಾರ ವಾರಾಂತ್ಯದ ಕರ್ಫ್ಯೂ(Weekend Curfew) ವೇಳೆ ಮತ್ತೆ ಫೀಲ್ಡಿಗಿಳಿದಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್‌ ವಿಚಾರವಾಗಿ ಜನರಲ್ಲಿ ಜಾಗೃತಿ(Awareness) ಮೂಡಿಸುವ ಕೆಲಸ ಮಾಡಿದ್ದಾರೆ.

ಹೊನ್ನಾಳಿ ಪಟ್ಟಣದ ಖಾಸಗಿ ಬಸ್‌ನಿಲ್ದಾಣದ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಧಿಕಾರಿಗಳೊಂದಿಗೆ ಕಾರ್ಯಾಚರಣೆಗಿಳಿದ ರೇಣುಕಾಚಾರ್ಯ ಅವರು ಮಾಸ್ಕ್‌(Mask) ಹಾಕದ ವಾಹನ ಸವಾರರನ್ನು ತಡೆದು ಮಾಸ್ಕ್‌ ಹಾಕಿಕೊಳ್ಳುವಂತೆ ತಾಕೀತು ಮಾಡಿದರು.

Tap to resize

Latest Videos

Karnataka Politics : ನಾನು ಮಾಡುವ ಕೆಲಸಕ್ಕೆ ಕೂಲಿ ಕೇಳಿದ್ದೇನೆ - ರೇಣುಕಾಚಾರ್ಯ

ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ. ಮೊದಲನೇ ಹಾಗೂ 2ನೇ ಅಲೆ ಸಾಕಷ್ಟು ಸಾವು-ನೋವುಗಳಿಗೆ ಸಾಕ್ಷಿಯಾಗಿದೆ. ಇದೀಗ ಮೂರನೇ ಅಲೆ ಬರಬಾರದು ಎಂದು ದೇವರಲ್ಲಿ(God) ಪ್ರಾರ್ಥಿಸುತ್ತಿದ್ದೇನೆ. ಸರ್ಕಾರ ಜನರ ಆರೋಗ್ಯದ(Health) ದೃಷ್ಟಿಯಿಂದ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಜನ ಸಹಕಾರ ನೀಡಬೇಕು. ತಪ್ಪಿದಲ್ಲಿ ಅಪಾಯ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಬ್ಲಾಕ್‌ ಫಂಗಸ್‌ನಿಂದ ಗುಣಮುಖರಾಗಿ ಬಂದವರಿಗೆ ಶಾಸಕ ನೆರವು

ಹೊನ್ನಾಳಿ: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬುವಂತೆ ದಾನಿಗಳು ನೀಡಿದ ಹಣವನ್ನು ಕಷ್ಟ ಎಂದು ಬಂದವರಿಗೆ ದಾನ ಮಾಡುತ್ತಿದ್ದೇನೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದರು.

ಜೀನಹಳ್ಳಿ ಗ್ರಾಮದಲ್ಲಿ ಬ್ಲಾಕ್‌ ಫಂಗಸ್‌ಗೆ(Black Fungus) ತುತ್ತಾಗಿ ಗುಣಮುಖರಾದವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, .20 ಸಾವಿರ ವೈಯಕ್ತಿಕ ನೆರವು ನೀಡಿ ಅವರು ಮಾತನಾಡಿ, ಚಿಕಿತ್ಸೆಗೆ ಇನ್ನು ಹಣ ಬೇಕಾಗಿದ್ದು, ಅದನ್ನು ನಾನೇ ಭರಿಸುತ್ತೇನೆ ಎಂದು ಹೇಳಿದರು.

ಕೋವಿಡ್‌(Covid19) ಸಂದರ್ಭದಲ್ಲಿ ಕೊರೋನಾದಿಂದ ಮೃತಪಟ್ಟ ಕುಟುಂಬಕ್ಕೆ ವೈಯಕ್ತಿಕ .10 ಸಾವಿರ ಪರಿಹಾರ(compensation) ನೀಡುವುದಾಗಿ ಘೋಷಿಸಿದ್ದೇ, ಅದರಂತೆ ಪರಿಹಾರ ನೀಡುತ್ತಿದ್ದೇನೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಕೋವಿಡ್‌ ಎರಡನೇ ಅಲೆಯಲ್ಲಿ 289 ಜನ ಸಾವನ್ನಪ್ಪಿದ್ದು, ಅದರಲ್ಲಿ ಸರ್ಕಾರದಿಂದ 67 ಜನರಿಗೆ ತಲಾ ಒಂದು ಲಕ್ಷದ ಚೆಕ್‌ ಕೊಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಉಳಿದವರಿಗೂ ಪರಿಹಾರ ದೊರಕಿಸಲಾಗುವುದು ಎಂದು ಹೇಳಿದರು.

ಕಟೀಲ್‌ ಹಸುವಿನಂಥ ಮನುಷ್ಯ : ರೇಣುಕಾಚಾರ್ಯ

ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 49 ಜನರಿಗೆ ತಲಾ ಒಂದು ಲಕ್ಷದ ಪರಿಹಾರದ ಚೆಕ್‌ ನೀಡಿದ್ದು, ನಾನು ಕೂಡಾ ವೈಯಕ್ತಿಕ ಪರಿಹಾರ ನೀಡಿದ್ದೇನೆ. ಇದುವರೆಗೂ 95 ಜನರಿಗೆ ವೈಯಕ್ತಿವಾಗಿ ಹತ್ತು ಸಾವಿರ ಧನಸಹಾಯ ನೀಡಿದ್ದೇನೆ ಎಂದರು.

ಕೋವಿಡ್‌ ಮೊದಲನೇ ಅಲೆಯಲ್ಲಿ 59 ಜನ ಸಾವನ್ನಪ್ಪಿದ್ದು ಅವರ ಕುಟುಂಬಕ್ಕೂ ಪರಿಹಾರ ನೀಡುತ್ತೇನೆ. ನಾನು ಕೋವಿಡ್‌ ಸಂದರ್ಭದಲ್ಲಿ ಅವಳಿ ತಾಲೂಕಿನ ಜನರಿಗಾಗಿ ಜೀವವನ್ನೇ ಮುಡುಪಾಗಿಟ್ಟು ಕೆಲಸ ಮಾಡಿದ್ದೇನೆ. ಆದರೆ ಕೋವಿಡ್‌ ಸಂದರ್ಭದಲ್ಲಿ ಕೆಲಸ ಮಾಡದೇ ಮನೆಯಲ್ಲಿ ಮಲಗಿದ್ದವರು ಈಗ ಚುನಾವಣೆ ಬಂತೆಂದು ಮನೆಯಿಂದ ಹೊರ ಬಂದು ನಾನು ಭ್ರಷ್ಟಾಚಾರ ಮಾಡಿದ್ದೇನೆಂದು ಆರೋಪಿಸುತ್ತಿದ್ದಾರೆ ಎಂದು ಹೇಳಿದರು.

ಟೀಕೆಗೆ ತಲೆಕೆಡಿಸಿಕೊಳ್ಳಲ್ಲ:

ನಾನು ಬಹಿರಂಗವಾಗಿಯೇ ಕೆಲಸ ಮಾಡಿದ್ದೇನೆ, ಮತ ಹಾಕಿ ಆರ್ಶಿವಾದ ಮಾಡಿ ಎಂದು ಕೇಳಿದ್ದೇನೆ. ಇದರಲ್ಲಿ ತಪ್ಪೇನಿದೇ ಎಂದು ಪ್ರಶ್ನಿಸಿದ ಅವರು, ವಾಮಮಾರ್ಗದಲ್ಲಿ ಯಾರ ಬಳಿಯೂ ಮತಯಾಚನೆ ಮಾಡಿಲ್ಲ. ನಾನು ಶಾಸಕನಾಗುವ ಮೊದಲಿನಿಂದಲೂ ಶಿವಮೊಗ್ಗದಲ್ಲಿ ವಿದ್ಯಾಸಂಸ್ಥೆ ನಡೆಸಿಕೊಂಡು ಬಂದಿದ್ದು, ಸ್ವತಂತ್ರವಾಗಿ ದುಡಿದ ಕಾಲೇಜು ಕಟ್ಟಿದ್ದೇನೆ. ನನಗೆ ಹಣ ಮಾಡಬೇಕೆಂದೆನಿಲ್ಲ. ನನ್ನ ವಿರುದ್ಧ ಯಾರು ಏನೇ ಟೀಕೆ ಮಾಡಿದರೂ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ. ಅದನ್ನು ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ಹೇಳಿದರು. ಜೀನಹಳ್ಳಿ ಗ್ರಾಮಸ್ಥರಾದ ರವಿಕುಮಾರ್‌, ಸತೀಶ್‌, ಶೇಖರಪ್ಪ, ಗೋವಿಂದರಾಜು, ಪಂಚಾಕ್ಷರಪ್ಪ, ಬೆಣ್ಣೆ ನಾಗರಾಜ್‌, ಪ್ರದೀಪ್‌ ಮತ್ತಿತರರಿದ್ದರು.
 

click me!