
ಹತ್ತಾರು ಬಾರಿ ಗರ್ಭಪಾತ, ಹಲವಾರು ಹಿಂದೂ ಯುವತಿಯರಿಗೆ ಮೋಸ, ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್, ಲವ್ ಜಿಹಾದ್ ಮಾಡಿ ಹಿಂದೂ ಯುವತಿಯರ ದುರ್ಬಳಕೆ... ಹೀಗೆ ಹಲವಾರು ಆರೋಪ ಹೊತ್ತಿರುವ ಹುಬ್ಬಳ್ಳಿಯ ಸಮೀರ್ ಮುಲ್ಲಾನ ಕೇಸ್ ಕ್ಷಣಕ್ಷಣಕ್ಕೂ ಬಾರಿ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಹುಬ್ಬಳ್ಳಿಯ ವಿಜಯನಗರದ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಹಿಂದೂ ಯುವತಿಯರನ್ನು ಪರಿಚಯ ಮಾಡಿಕೊಂಡು ಲವ್ ಜಿಹಾದ್‌ಗೆ ಯತ್ನಿಸಿದ್ದಾನೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಹಲವು ವಿಡಿಯೋಗಳು ಆತನ ಮೊಬೈಲ್‌ನಲ್ಲಿ ಲಭ್ಯವಾಗಿರುವುದಾಗಿ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಇದೀಗ ಆತನ ಸಹೋದರಿ ತೈಸೀಮ್ ಮುಲ್ಲಾ ಒಂದೆಡೆ ಪ್ರತಿಕ್ರಿಯೆ ನೀಡಿದ್ದರೆ, ಎಸ್‌ಎಸ್‌ಕೆ ಸಮಾಜದವರು ತನ್ನ ಮೇಲೆ ಹಲ್ಲೆ ಮಾಡಿದ್ದು, ಅಸಲಿಯತ್ತು ಏನೆಂದು ಗೊತ್ತಾಗಬೇಕಿದ್ದರೆ ಸಂತ್ರಸ್ತೆ ಎಂದುಕೊಂಡಿರುವವಳ ಮೊಬೈಲ್ ಚೆಕ್ ಮಾಡಿ ಎಂದಿದ್ದಾನೆ ಸಮೀರ್.
ಮಾಧ್ಯಮಗಳ ಮುಂದೆ ಬಂದು ಹೇಳಿಕೆ ಕೊಟ್ಟಿರುವ ಸಮೀರ್ ಸಹೋದರಿ ತೈಸೀಮ್ ಮುಲ್ಲಾ, ಸಮೀರ್ ಮತ್ತು ಖುಷಿ ಕಳೆದ ಮೂರು ವರ್ಷಗಳಿಂದ ಪರಿಚಯದಲ್ಲಿದ್ದಾರೆ. ಅವರು ರಿಲೇಶನ್‌ಶಿಪ್‌ನಲ್ಲಿ ಇದ್ದರು. ಲವ್ ಜಿಹಾದ್ ಎನ್ನೋದನ್ನು ತಲೆಯಿಂದ ಕಿತ್ತುಹಾಕಿ. ಅವಳ ಫೋನ್ ಬೇಕಿದ್ರೆ ನೋಡಿ. ಅವರಿಬ್ಬರೂ ಸಿಕ್ಕಾಪಟ್ಟೆ ಸುತ್ತಾಡಿದ್ದಾರೆ. ಅದನ್ನೆಲ್ಲಾ ಅವಳೇ ವಿಡಿಯೋ ಮಾಡಿಟ್ಟುಕೊಂಡಿದ್ದಾಳೆ. ಇದರಲ್ಲಿ ಲವ್ ಜಿಹಾದ್, ಗಿಹಾದ್ ಏನೂ ಇಲ್ಲ. ಯುವತಿಯ ಕುಟುಂಬದವರೊಂದಿಗೆ ನಮ್ಮ ಕುಟುಂಬ ಅನ್ಯೋನ್ಯವಾಗಿದ್ದು, ಒಟ್ಟಿಗೆ ಪ್ರವಾಸ ಹಾಗೂ ಶಾಪಿಂಗ್ ಕೂಡ ಮಾಡುತ್ತಿದ್ದೆವು ಎಂದಿದ್ದಾರೆ.
ಎಸ್‌ಎಸ್‌ಕೆ ಸಮಾಜದ ಕೆಲವರು ಬೆಳಗ್ಗೆ 7 ಗಂಟೆಗೆ ಸಮೀರ್‌ರನ್ನು ಅಪಹರಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ನೂರು ಜನರು ಸೇರಿ ದನದ ಶೆಡ್‌ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ನಮ್ಮ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ ಎಂದಿದ್ದಾರೆ.
ಅದೇ ಇನ್ನೊಂದೆಡೆ ನೇರ ಪ್ರಸಾರದಲ್ಲಿ ಬಂದಿರೋ ಸಮೀರ್, ಖುಷಿ ತುಂಬಾ ಒಳ್ಳೆಯ ಹುಡುಗಿರಿ. ಆಕಿ ಬೇರೆಯವರ ಒತ್ತಡಕ್ಕೆ ಬಂದು ಇಂಥ ಹೇಳಿಕೆ ಕೊಟ್ಟಿದ್ದಾಳೆ. ಆಕಿ ಫೋನ್ ಚೆಕ್ ಮಾಡಿ ಎಂದಿದ್ದಾನೆ. ಅವಳಿಗೆ ಮಾತ್ರೆ ಕೊಟ್ಟಿರೋದಾಗಿ ಹೇಳುತ್ತಿದ್ದಾಳೆ. ಆದ್ರೆ ಅವಳ ಮೊಬೈಲ್, ನನ್ನ ಮೊಬೈಲ್ ಚೆಕ್ ಮಾಡಿ. ನನ್ನ ಮೊಬೈಲ್‌ನಲ್ಲಿ ಒಂದೇ ಒಂದು ವಿಡಿಯೋ ಇಲ್ಲ. ಅವಳ ಮೊಬೈಲ್ ಚೆಕ್ ಮಾಡಿದ್ರೆ ಯಾರು ಮಲಗಿದ್ದು ಅಂತ ಗೊತ್ತಾಗತ್ತೆ. ಪ್ರಜ್ಞೆ ತಪ್ಪಿಸಿದ್ರೆ ಅವಳು ಮೊದಲು ಮಲಗಬೇಕಿತ್ತು. ಅವಳೇ ಮೊದಲು ಮಲಗಿದ್ರೆ ಅವಳ ಮೊಬೈಲ್ನಿಂದ ವಿಡಿಯೋ ಹೇಗೆ ರೆಕಾರ್ಡ್ ಆಗ್ತಿತ್ತು ಎಂದು ಪ್ರಶ್ನಿಸಿದ್ದಾನೆ. ಅವಳು ಯಾರದ್ದೋ ಒತ್ತಡದಲ್ಲಿ ಹೀಗೆಲ್ಲಾ ಹೇಳ್ತಿದ್ದಾಳೆ ಎಂದಿದ್ದಾನೆ.
ಆದರೆ ಈತನ ಮಾತಿಗೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಬರುತ್ತಿದೆ. ನೀನು ತುಂಬಾ ಚಾಲಾಕಿ ಕಣೋ. ಅವಳನ್ನು ಮಲಗಿಸಿ ಅವಳ ಫೋನ್ನಿಂದಲೇ ರೆಕಾರ್ಡ್ ಮಾಡಿಕೊಂಡಿದ್ಯಾ. ಯಾವ ಹೆಣ್ಣು ತಾನೇ ತಾನು ಇನ್ನೊಬ್ಬನ ಜೊತೆ ಮಲಗೋದನ್ನೆಲ್ಲಾ ರೆಕಾರ್ಡ್ ಮಾಡಿಕೊಳ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ನೀನು ಸರಿಯಾಗಿ ಇದ್ದರೆ ನಿನಗೆ ಈ ಗತಿ ಬರುತ್ತಿರಲಿಲ್ಲ. ಹಿಂದೂ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವವರಿಗೆ ಇದೇ ಶಾಸ್ತಿ ಆಗ್ಬೇಕು ಎಂದು ಹೇಳುತ್ತಿದ್ದಾರೆ. ಆದರೆ ಇದೇ ವೇಳೆ ಹಿಂದೂ ಬುದ್ಧಿಯನ್ನು ಕೈಯಲ್ಲಿ ಇಟ್ಟುಕೊಳ್ಳದೇ ಇಂಥವರ ಹಿಂದೆ ಹೋಗುವ ಹಿಂದೂ ಯುವತಿಯರ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ದುಬಾರಿ ಬೈಕ್, ಕಾರು, ಸಿನಿಮಾ ಹೀರೋ ರೀತಿ ಗೆಟಪ್ ಮಾಡಿಕೊಂಡು ಬಿಟ್ಟರೆ ಅವರ ಹಿಂದೆ ಬೀಳುವ ಹಿಂದೂ ಯುವತಿಯರಿಗೆ ಇವುಗಳೆಲ್ಲಾ ಪಾಠ ಆಗಬೇಕು ಎನ್ನುವ ಮಾತು ಕೇಳಿಬರುತ್ತಿದೆ.