ತುಮಕೂರಿನಲ್ಲಿ ನಾಪತ್ತೆಯಾಗಿದ್ದ ಮಹಿಳಾ ಪಿಎಸ್ಐ ಪತ್ತೆ! ಎಲ್ಲಿದ್ದರು ಗೊತ್ತಾ?

Published : Apr 04, 2026, 12:18 PM IST
Missing Tumakuru Woman PSI Found at chikkamagaluru rav

ಸಾರಾಂಶ

ತುಮಕೂರಿನ ಹೊಸ ಬಡಾವಣೆ ಠಾಣೆಯ ಪಿಎಸ್ಐ ಮಂಗಳಮ್ಮ ಅವರ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಕೌಟುಂಬಿಕ ಕಲಹದಿಂದ ಮನನೊಂದು ಮನೆಬಿಟ್ಟು ಹೋಗಿದ್ದ ಅವರು, ತೀವ್ರ ಹುಡುಕಾಟದ ಬಳಿಕ ಚಿಕ್ಕಮಗಳೂರಿನ ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ತುಮಕೂರು (ಏ.4): ತೀವ್ರ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ ಮಹಿಳಾ ಪೊಲೀಸ್ ಸಬ್‌ ಇನ್ಪೆಕ್ಟರ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ-2 ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳಮ್ಮ ಅವರು ಕೊನೆಗೂ ಪತ್ತೆಯಾಗಿದ್ದಾರೆ.

ನಿನ್ನೆ ಬೆಳಗ್ಗೆ ಡಿವೈಎಸ್ ಪಿ ಕಚೇರಿಯಲ್ಲಿ ಮೀಟಿಂಗ್ ನಲ್ಲಿ ಭಾಗಿಯಾಗಿದ್ದ ಮಂಗಳಮ್ಮ ಅವರು, ಸಭೆಯ ಮಧ್ಯೆಯೇ ಇಂಪಾರ್ಟೆಂಟ್ ಫೋನ್‌ ಬಂದಿದೆ ಎಂದು ಮೀಟಿಂಗ್‌ನಿಂದ ಹೊರಬಂದಿದ್ದರು. ಸಮವಸ್ತ್ರದಲ್ಲೇ ಹೊರಬಂದಿದ್ದ ಮಂಗಳಮ್ಮ ಆ ಬಳಿಕ ಎಲ್ಲಿ ಹೋದರೆಂಬ ಸುಳಿವು ಸಿಕ್ಕಿರಲಿಲ್ಲ. ಇಡೀ ದಿನ ಹುಡುಕಿದ್ರೂ ನಿನ್ನೆ ಇಡೀ ದಿನ ಯಾರ ಸಂಪರ್ಕಕ್ಕೆ ಸಿಗದ ಹಿನ್ನೆಲೆ. ಆತಂಕಗೊಂಡು ಪಿಎಸ್ ಐ ಮಂಗಲಮ್ಮ ಪುತ್ರಿಯಿಂದ ದೂರು ನೀಡಿದ್ದರು.ಹುಡುಕಾಟದ ಬಳಿಕವೂ ತಾಯಿ ಪತ್ತೆಯಾಗಿರುವುದು ಕಂಡು ಮಗಳು ಕೊನೆಗೆ ಪಿಎಸ್‌ಐ ಮಂಗಳಮ್ಮ ಅವರ ಮಗಲು ಹುಡಕಾಟ ನಡೆಸಿದ್ದರು.ಅನಂತರ ಅವರು ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದರು.

ತಾಯಿ ಮನೆಗೆ ಬಾರದೆ ಮತ್ತು ಫೋನ್ ಕರೆಗೂ ಲಭ್ಯವಿಲ್ಲದ ಕಾರಣ ಆತಂಕಗೊಂಡ ಮಂಗಳಮ್ಮ ಅವರ ಪುತ್ರಿ, ನಿನ್ನೆ ರಾತ್ರಿ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇತ್ತೀಚೆಗಷ್ಟೇ ಪುತ್ರಿಗೆ ವಿಚ್ಛೇದನವಾಗಿದ್ದ ಕಾರಣ, ತಾಯಿ ಮತ್ತು ಮಗಳು ಒಟ್ಟಿಗೆ ವಾಸವಿದ್ದರು ಎನ್ನಲಾಗಿದೆ.

ಕೌಟುಂಬಿಕ ಕಲಹವೇ ಕಾರಣ?

ಪ್ರಾಥಮಿಕ ಮಾಹಿತಿ ಪ್ರಕಾರ, ಮನೆಯಲ್ಲಿ ನಡೆದಿದ್ದ ಕೌಟುಂಬಿಕ ಕಲಹದಿಂದ ಮಂಗಳಮ್ಮ ಅವರು ತೀವ್ರ ಮನನೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಹುಡುಕಾಟ ಆರಂಭಿಸಿದ್ದರು.

ಚಿಕ್ಕಮಗಳೂರಿನಲ್ಲಿ ಪತ್ತೆಯಾದ ಮಂಗಳಮ್ಮ

ತೀವ್ರ ಹುಡುಕಾಟದ ನಂತರ, ನಾಪತ್ತೆಯಾಗಿದ್ದ ಪಿಎಸ್ಐ ಮಂಗಳಮ್ಮ ಅವರು ಚಿಕ್ಕಮಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿರುವುದು ಪತ್ತೆಯಾಗಿದೆ. ಮನಸ್ಥಾಪದಿಂದ ಬೇಸತ್ತು ಅವರು ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದ್ದು, ಸದ್ಯ ಪೊಲೀಸರು ಮತ್ತು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು: ಸಲೂನ್ ನಲ್ಲಿ ಕೆಲಸಕ್ಕಿದ್ದ ಬ್ಯೂಟಿಷಿಯನ್ ಗೆ ಬಿಸ್ಕೆಟ್ ನೀಡಿ ಮಾಲೀಕ ಪ್ರಫೋಸ್, ಹಿಗ್ಗಾಮುಗ್ಗಾ ಥಳಿತ
Davanagere Bypoll: ಕಾಂಗ್ರೆಸ್ ಗೆಲುವಿಗೆ ಡಿಸಿಎಂ ತಡರಾತ್ರಿ ಸಭೆ! ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ರಣತಂತ್ರ ಹೆಣೆದ ಡಿಕೆಶಿ