ಹುಬ್ಬಳ್ಳಿಯಲ್ಲಿ ಸಾಲ ತೀರಿಸುವ ವಿಚಾರಕ್ಕೆ ಕಲಹ: ಪತ್ನಿಯ ಕುತ್ತಿಗೆಗೆ ಚಾಕು ಇರಿದು ಕೊಂದ ಪಾಪಿ ಪತಿ!

Published : Feb 02, 2026, 02:43 PM IST
Hubballi Taisin murder Case

ಸಾರಾಂಶ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ, ಸಾಲ ಮರುಪಾವತಿ ಮಾಡುವ ವಿಚಾರವಾಗಿ ನಡೆದ ಜಗಳದಲ್ಲಿ ಪತಿಯೇ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ರಾಮಲಿಂಗೇಶ್ವರ ನಗರದಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ.

ಧಾರವಾಡ/ಹುಬ್ಬಳ್ಳಿ (ಫೆ.02): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಸಾಲದ ವಿಚಾರವಾಗಿ ಉಂಟಾದ ಜಗಳದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ಈ ಘಟನೆ ಸಂಭವಿಸಿದ್ದು, ಕೇವಲ 27 ವರ್ಷದ ತೈಸಿನ್ ಶಿಗ್ಗಾವಿ ಕೊಲೆಯಾದ ದುರ್ದೈವಿ.

ಘಟನೆಯ ವಿವರ:

ಮೂಲತಃ ಹುಬ್ಬಳ್ಳಿಯ ಗಾಂಧೀವಾಡದ ನಿವಾಸಿಗಳಾಗಿದ್ದ ಇರ್ಫಾನ್ ಮತ್ತು ತೈಸಿನ್ ದಂಪತಿಗಳು, ಕಳೆದ ಎರಡು ತಿಂಗಳ ಹಿಂದೆಯಷ್ಟೇ ರಾಮಲಿಂಗೇಶ್ವರ ನಗರಕ್ಕೆ ಬಾಡಿಗೆ ಮನೆಗೆ ವಾಸಕ್ಕೆ ಬಂದಿದ್ದರು. ಇರ್ಫಾನ್ ಮನೆ ಕಟ್ಟುವ ಕೆಲಸ (ಮೇಸ್ತ್ರಿ ಕೆಲಸ) ಮಾಡುತ್ತಿದ್ದನು. ಕುಟುಂಬವು ಒಂದಷ್ಟು ಸಾಲ ಮಾಡಿಕೊಂಡಿತ್ತು ಎನ್ನಲಾಗಿದ್ದು, ಈ ಸಾಲವನ್ನು ಮರುಪಾವತಿ ಮಾಡುವ ವಿಷಯವಾಗಿ ದಂಪತಿಗಳ ನಡುವೆ ಕಳೆದ ಕೆಲವು ದಿನಗಳಿಂದ ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದವು.

ಕೊಲೆಗೆ ಕಾರಣ:

ಸಾಲಗಾರರ ಕಿರಿಕಿರಿ ತಪ್ಪಿಸಲು ‘ನೀನು ಕಷ್ಟಪಟ್ಟು ದುಡಿದು ಸಾಲವನ್ನು ಆದಷ್ಟು ಬೇಗ ತೀರಿಸು’ ಎಂದು ಪತ್ನಿ ತೈಸಿನ್ ತನ್ನ ಪತಿ ಇರ್ಫಾನ್‌ಗೆ ಪದೇ ಪದೇ ಬುದ್ಧಿ ಹೇಳುತ್ತಿದ್ದಳು. ಪತ್ನಿಯ ಈ ಮಾತುಗಳಿಂದ ಆಕ್ರೋಶಗೊಂಡ ಇರ್ಫಾನ್, ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಕುತ್ತಿಗೆ ಸೇರಿದಂತೆ ದೇಹದ ನಾಲ್ಕೈದು ಭಾಗಗಳಿಗೆ ಬರ್ಬರವಾಗಿ ಇರಿದಿದ್ದರಿಂದ ತೈಸಿನ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾಳೆ.

ಕೊಲೆಯಾದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗೋಕುಲ ರಸ್ತೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಪಿ ಪತಿ ಇರ್ಫಾನ್‌ನನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಸಾಲದ ಹೊರೆ ಮತ್ತು ಕುಟುಂಬದ ಜಗಳ ಒಂದು ತುಂಬು ಸಂಸಾರವನ್ನು ಬೀದಿಗೆ ತಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

BMTC ಬಸ್​ನಲ್ಲಿ ಬುರ್ಖಾಧಾರಿ ಮಹಿಳೆ ಲಕ್ಷ್ಮಮ್ಮ! ಹಿಜಾಬ್​ ಮೇಲೆ ಅರೆಬಿಕ್​ ಭಾಷೆ- ಏನಿದು ಲಿಂಕ್​?
ಪತ್ರಕರ್ತ ನೀಲೂರೆ ಆತ್ಮ*ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಡೆತ್ ನೋಟ್‌ನಲ್ಲಿ ಪತ್ರಕರ್ತರು ಸೇರಿ ಹಲವರ ಹೆಸರು!