
ಕರ್ನಾಟಕದ ಜನರಿಗೆ ಅದರಲ್ಲಿಯೂ ಮಹಿಳೆಯರಿಗೆ ಅನುಕೂಲ ಆಗಲಿ ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿ ಮೂರು ವರ್ಷ ಆಗುತ್ತಾ ಬಂದಿದೆ. ಈ ಯೋಜನೆ ಜಾರಿಯಾದಾಗಿನಿಂದ ಇದಾಗಲೇ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಕೆಲವು ಮಹಿಳೆಯರು, ಸುಖಾಸುಮ್ಮನೇ ಬಸ್ಸಿನಲ್ಲಿ ಓಡಾಡಿ ಒಂದಿಷ್ಟು ಗೊಂದಲ ಸೃಷ್ಟಿಸಿರುವುದೂ ಇದೆ. ಬಸ್ಸಿನಲ್ಲಿ ಜಗಳ, ಕಚ್ಚಾಟ, ಫ್ರೀ ಬಸ್ ಎನ್ನುವ ಕಾರಣಕ್ಕೆ ಅನಗತ್ಯ ಪ್ರಯಾಣ... ಹೀಗೆ ಮಹಿಳೆಯರ ವಿರುದ್ಧ ಇದಾಗಲೇ ಸಾಕಷ್ಟು ಅಪಪ್ರಚಾರಗಳೂ ನಡೆದಿವೆ, ಇದಕ್ಕೆ ಸಂಬಂಧಿಸಿದ ವಿಡಿಯೋಗಳೂ ವೈರಲ್ ಆಗುತ್ತಲೇ ಇವೆ.
ಎಷ್ಟೋ ಬಸ್ಗಳಲ್ಲಿ ಕಂಡಕ್ಟರ್ ಆಧಾರ್ ಕಾರ್ಡ್ ಇದ್ಯಾ ಕೇಳ್ತಾರೆ, ಮತ್ತೆ ಕೆಲವರು ದೂರದಿಂದಲೇ ನೋಡಿ ಸುಮ್ಮನಾಗ್ತಾರೆ, ಮತ್ತೆ ಕೆಲವರು ಕನ್ನಡದಲ್ಲಿ ಅಕ್ಷರ ಇರೋದನ್ನು ನೋಡಿ, ಸರಿ ಇಲ್ಲವರೇ ಎಂದುಕೊಂಡುಬಿಡುತ್ತಾರೆ. ಏಕೆಂದರೆ, ಆ ಪರಿಯ ರಶ್ನಲ್ಲಿ, ಅದೂ ಕೆಲವು ಮಹಿಳೆಯರು ಮೊದಲೇ ಆಧಾರ್ ಕಾರ್ಡ್ ಇಟ್ಟುಕೊಳ್ಳದೇ ಕಂಡಕ್ಟರ್ ಬಂದಾಗ ಪರ್ಸ್ ತೆಗೆದು, ಅಲ್ಲಿಲ್ಲಿ ತಡಕಾಡಿ ನೀಡುವಷ್ಟರಲ್ಲಿ ಕಂಡಕ್ಟರ್ ಆದವರಿಗೆ ಖಂಡಿತವಾಗಿಯೂ ಅಷ್ಟು ತಾಳ್ಮೆ ಇರಲು ಸಾಧ್ಯವೇ ಇರುವುದಿಲ್ಲ. ಇವೆಲ್ಲವುಗಳ ಪ್ರಯೋಜನ ಪಡೆದು, ಉಚಿತ ಟಿಕೆಟ್ಗಾಗಿ ಬೇರೆ ರಾಜ್ಯದವರು ಕೂಡ ಇದರ ದುರುಪಯೋಗಪಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶದ ಮನೆಯ ವಿಳಾಸವಿರುವ ಆದರೆ ಕನ್ನಡದಲ್ಲಿ ಟೈಪ್ ಮಾಡಲಾದ ಆಧಾರ್ ಕಾರ್ಡ್ ತೋರಿಸಿ ಮಹಿಳೆಯೊಬ್ಬಳು ಸಿಕ್ಕಾಕಿಕೊಂಡಿದ್ದಳು.
ಆದರೆ, ಇದೀಗ ಆಘಾತಕಾರಿ ವಿಡಿಯೋ ಒಂದು ವೈರಲ್ ಆಗಿದೆ. sanewskarnataka ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಇದರಲ್ಲಿ ಕಂಡಕ್ಟರ್ ಬುರ್ಖಾಧಾರಿ ಮಹಿಳೆಯ ಆಧಾರ್ ಕಾರ್ಡ್ ನೋಡಿದಾಗ ಅದರಲ್ಲಿ ಲಕ್ಷ್ಮಮ್ಮ ಎನ್ನುವ ಹೆಸರು ಇದೆ. ಕಂಡಕ್ಟರ್ಗೆ ಡೌಟ್ ಬಂದಾಗ ನಿನ್ನ ಹೆಸರೇನು, ಬುರ್ಖಾ ತೆಗೆದು ತೋರಿಸು ಎಂದಾಗ ಆಕೆ ಮುಸ್ಲಿಂ ಹೆಸರು ಹೇಳಿದ್ದಾಳೆ. ಆದರೆ, ಈ ಆಧಾರ್ ಕಾರ್ಡ್ ಯಾರದ್ದು ಏನು ಎಂದು ಹೇಳಲಿಲ್ಲ. ಆಕೆಯ ಬುರ್ಖಾದಲ್ಲಿ ಕಣ್ಣಷ್ಟೇ ಕಾಣುತ್ತಿದ್ದರೂ, ಸಿಕ್ಕಿ ಹಾಕಿಕೊಂಡರೂ ಆಕೆಯ ಕಣ್ಣಲ್ಲಿ ಆತಂಕವೂ ಕಾಣಿಸುತ್ತಿಲ್ಲವಲ್ಲ ಎನ್ನುವುದು ಕಮೆಂಟಿಗರ ಅನಿಸಿಕೆ. ಆದರೆ ಈಕೆ ಧರಿಸಿರುವ ಹಿಜಾಬ್ ಮೇಲೆ ಅರೇಬಿಕ್ ಭಾಷೆಯಲ್ಲಿ ಬರೆದಿರುವ ಹಿನ್ನೆಲೆಯಲ್ಲಿ, ಇದು ಬಹಳ ಅನುಮಾನವನ್ನು ಹುಟ್ಟುಹಾಕುತ್ತಿದೆ. ಈಕೆ ಯಾರು, ಇವಳಿಗೆ ಏನು ಲಿಂಕ್ ಇದೆ ಎನ್ನುವ ಸಂದೇಹಗಳು ನೆಟ್ಟಿಗರನ್ನು ಕಾಡುತ್ತಿದೆ.
ಕೆಲವರು ಇದು ರೀಲ್ಸ್ಗಾಗಿ ಮಾಡಿರಬಹುದು ಎನ್ನುತ್ತಿದ್ದರೆ, ಮತ್ತೆ ಕೆಲವರು ಲವ್ ಜಿಹಾದ್ ಇರಬಹುದು ಎನ್ನುತ್ತಿದ್ದಾರೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಕ್ಕೆ ಬಂದಿಲ್ಲ. ಆದರೂ, ಇವಳ ಹಿಜಾಬ್ ಮೇಲಿರುವ ಅರೇಬಿಕ್ ಭಾಷೆಯ ಬಗ್ಗೆ ಭಾರಿ ಚರ್ಚೆಯಂತೂ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂಥ ಸುದ್ದಿ ವೈರಲ್ ಆದ ಮೇಲೆ ಕೇಳಬೇಕೆ? ಕೆಲವರು ಈಕೆ ISIS ಗೆ ಸಂಬಂಧ ಪಟ್ಟವಳು ಎನ್ನುತ್ತಿದ್ದಾರೆ. ಏಕೆಂದರೆ, ಹಿಜಾಬ್ ಮೇಲೆ ಇರುವ ಅರೇಬಿಕ್ ಭಾಷೆಯಲ್ಲಿ ಕಲ್ಮಾ ಇದೆ ಎನ್ನುತ್ತಿದ್ದಾರೆ. ಕೆಲವರು ಇಸ್ಲಾಮ್ ನಲ್ಲಿ ಕಲ್ಮಾ ಬರೆದಿದ್ದರೆ ಅದನ್ನು ಯಾರು ಬೇಕಾದ್ರೂ ಧರಿಸಿ ಹೋಗಬಹುದು, ಅದರಲ್ಲಿ ತಪ್ಪೇನಿಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಮುಸ್ಲಿಂ ಲಕ್ಷ್ಮಮ್ಮ ಮಾತ್ರ ಭಾರಿ ಚರ್ಚೆಗೆ ಗ್ರಾಸಳಾಗಿದ್ದಾಳೆ.